ಫ್ಯಾಂಟಮ್‌ನಲ್ಲಿ ಫಕೀರ ಪ್ರತ್ಯಕ್ಷ; ಸಂಜೀವ್‌ ಗಂಭೀರನಾದ ನಿರೂಪ್‌ ಭಂಡಾರಿ!

Kannadaprabha News   | Asianet News
Published : Aug 14, 2020, 08:49 AM IST
ಫ್ಯಾಂಟಮ್‌ನಲ್ಲಿ ಫಕೀರ ಪ್ರತ್ಯಕ್ಷ; ಸಂಜೀವ್‌ ಗಂಭೀರನಾದ ನಿರೂಪ್‌ ಭಂಡಾರಿ!

ಸಾರಾಂಶ

ಎರಡ್ಮೂರು ದಿನಗಳ ಹಿಂದೆಯಷ್ಟೆ‘ಫ್ಯಾಂಟಮ್‌’ ಚಿತ್ರದಲ್ಲಿನ ನಟ ಸುದೀಪ್‌ ಅವರ ಲುಕ್‌ ಮೂಲಕ ಗಮನ ಸೆಳೆದ ನಿರ್ದೇಶಕ ಅನೂಪ್‌ ಭಂಡಾರಿ ಈಗ ಮತ್ತೊಂದು ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಅದು ನಿರೂಪ್‌ ಪಾತ್ರದ ಲುಕ್‌. 

 ಚಿತ್ರದಲ್ಲಿ ಸಂಜೀವ್‌ ಗಂಭೀರ್‌ ಪಾತ್ರದಲ್ಲಿ ನಿರೂಪ್‌ ಭಂಡಾರಿ ಕಾಣಿಸಿಕೊಳ್ಳಲಿದ್ದಾರೆ. ನಿರೂಪ್‌ ಅವರ ಹುಟ್ಟುಹಬ್ಬದ ಅಂಗವಾಗಿ ‘ಫ್ಯಾಂಟಮ್‌’ ಚಿತ್ರತಂಡದಿಂದ ನಿರೂಪ್‌ ಅವರ ಪಾತ್ರದ ಪೋಸ್ಟರ್‌ ಅನಾವರಣಗೊಳಿಸಲಾಯಿತು.

'ಫ್ಯಾಂಟಮ್‌' ಹೊಸ ಪೋಸ್ಟರ್ ರಿಲೀಸ್‌; ಹೇಗಿದೆ ವಿಕ್ರಾಂತ್ ರೋಣ ಲುಕ್?

‘ನಿರೂಪ್‌ ಫ್ಯಾಂಟಮ್‌ ಜಗತ್ತಿಗೆ ಹೊಸ ಅತಿಥಿಯಂತೆ ಆಗಮಿಸಲಿದ್ದಾರೆ. ಇಡೀ ಚಿತ್ರದಲ್ಲಿ ಅವರ ಪಾತ್ರ ವಿಶೇಷವಾಗಿದೆ. ಲಂಡನ್‌ನಲ್ಲಿ ಬೆಳೆದು ಹುಟ್ಟೂರಿಗೆ ವಾಪಸ್ಸು ಬರುವ ಈ ಪಾತ್ರಧಾರಿ ನಗುತ್ತಾನೆ, ನಗಿಸುತ್ತಾನೆ, ತರಲೆ ಮಾಡುತ್ತಾನೆ. ಆ ಮೂಲಕ ಪ್ರತಿಯೊಬ್ಬ ಪ್ರೇಕ್ಷಕನಿಗೂ ಹತ್ತಿರವಾಗುತ್ತಾನೆ’ ಎಂಬುದು ನಿರ್ದೇಶಕ ಅನೂಪ್‌ ಭಂಡಾರಿ ಅವರ ವಿವರಣೆ. ಅಂದಹಾಗೆ ನಿರೂಪ್‌ ಅವರ ಪಾತ್ರಕ್ಕೆ ಫಕೀರ ಎನ್ನುವ ಹೆಸರು ಕೂಡ ಇದೆ. ಯಾಕೆ ಎಂಬುದನ್ನು ನೀವು ಸಿನಿಮಾ ನೋಡಿ ತಿಳಿಯಬೇಕು ಎನ್ನುತ್ತದೆ ಚಿತ್ರತಂಡ. ತಮ್ಮ

 

ಹುಟ್ಟುಹಬ್ಬಕ್ಕೆ ಪೋಸ್ಟರ್‌ ಮೂಲಕ ವಿಶೇಷ ಉಡುಗೊರೆ ಕೊಟ್ಟನಿರ್ದೇಶಕ ಅನೂಪ್‌, ನಿರ್ಮಾಪಕ ಜಾಕ್‌ ಮಂಜು ಹಾಗೂ ಚಿತ್ರದ ನಾಯಕ ಸುದೀಪ್‌ ಅವರಿಗೆ ನಿರೂಪ್‌ ಭಂಡಾರಿ ಕೃತಜ್ಞತೆ ಸಲ್ಲಿಸಿದ್ದಾರೆ. ‘ಫ್ಯಾಂಟಮ್‌ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಖುಷಿ ಇದೆ. ಎಲ್ಲರಿಗೂ ಇಷ್ಟವಾಗುವ ಪಾತ್ರವಿದು’ ಎಂಬುದು ನಿರೂಪ್‌ ಮಾತು. ನಟ ಸುದೀಪ್‌ ಅವರ ವಿಕ್ರಾಂತ್‌ ರೋಣಾ ಪಾತ್ರದ ಪೋಸ್ಟರ್‌ನಂತೇ ಅನೂಪ್‌ ಭಂಡಾರಿ ಅವರ ಸಂಜೀವ್‌ ಗಂಭೀರ ಪೋಸ್ಟರ್‌ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕಿಚ್ಚನ ಅಭಿಮಾನಿಗಳಿಗೂ ಈ ಪೋಸ್ಟರ್‌ ಸಿಕ್ಕಾಪಟ್ಟೆಇಷ್ಟವಾಗಿದ್ದು, ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಇನ್ನೂ ಶೂಟಿಂಗ್‌ ಅಂಗಳದಲ್ಲಿರುವ ‘ಫ್ಯಾಂಟಮ್‌’ ಹೀಗೆ ಪೋಸ್ಟರ್‌, ಟೀಸರ್‌ ಮೂಲಕ ಗಮನ ಸೆಳೆಯುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ