ಇಂಗ್ಲಿಷ್‌ನ ಕಾಮಿಡಿ ಡ್ರಾಮಾ ಸೀರಿಸ್‌ 'ಬ್ರೌನ್ ನೇಷನ್'ನಲ್ಲಿ ಕನ್ನಡತಿ ನಟಿ ಜಯಂತಿ!

Suvarna News   | Asianet News
Published : Jul 26, 2021, 10:37 AM IST
ಇಂಗ್ಲಿಷ್‌ನ ಕಾಮಿಡಿ ಡ್ರಾಮಾ ಸೀರಿಸ್‌ 'ಬ್ರೌನ್ ನೇಷನ್'ನಲ್ಲಿ ಕನ್ನಡತಿ ನಟಿ ಜಯಂತಿ!

ಸಾರಾಂಶ

190 ದೇಶಗಳಲ್ಲಿ ಬಿಡುಗಡೆಯಾದ ಕಾಮಿಡಿ ಡ್ರಾಮಾ ಸೀರಿಸನ್‌ನಲ್ಲಿ ಅಭಿನಯಿಸಿದ್ದರು ಅಭಿನಯ ಶಾರದೆ, ಹಿರಿಯ ನಟಿ ಜಯಂತಿ.

ಕನ್ನಡ ಚಿತ್ರರಂಗದ ಬಹುಭಾಷಾ ನಟಿ ಜಯಂತಿ ಇಂಗ್ಲಿಷನ ಬ್ರೌನ್ ನೇಷನ್‌  ಎಂಬ ಒಂದು ಡ್ರಾಮಾ ಸೀರಿಸ್‌ನಲ್ಲಿ ಅಭಿನಯಿಸಿದ್ದಾರೆ. 2016ರಲ್ಲಿ ಸುಮಾರು 190 ದೇಶಗಳಲ್ಲಿ ಈ ಸೀರಿಸ್ ಬಿಡುಗಡೆಯಾಗಿದ್ದು, ಜಯಂತಿ ಬಾಲನ್ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಬ್ರೌನ್‌ ನೇಷನ್‌ ಮೊದಲ ಸೀಸನ್‌ನಲ್ಲಿ 10 ಎಪಿಸೋಡ್‌ಗಳಿದ್ದು, ನ್ಯೂ ಯಾರ್ಕ್‌ನಲ್ಲಿ ಚಿತ್ರೀಕರಣ ಮಾಡಲಾಗಿತ್ತು.  ಒಂದೊಂದು ಎಪಿಸೋಡ್‌ಗಳು 20-25 ನಿಮಿಷಗಳಿದ್ದು ನವೆಂಬರ್ 15, 2016ರಲ್ಲಿ ನೆಟ್‍ಫ್ಲಿಕ್ಸ್ ಬಿಡುಗಡೆ ಮಾಡಲಾಗಿದೆ. ಈ ಸೀರಿಸ್‌ನಲ್ಲಿ ರಾಜೀವ್ ವರ್ಮಾ ಮತ್ತು ಶೆನಾಜ್ ಖಜಾನೆ ಅಭಿನಯಿಸಿದ್ದಾರೆ. ಈ ಸೀಸನ್‌ ಮೂಲಕ ಕನ್ನಡ ನಟಿ ಜಯಂತಿ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿತ್ತು. 

5 ಬಾರಿ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ನಟಿ ಜಯಂತಿ ಸೂಪರ್ ಹಿಟ್ ಸಿನಿಮಾಗಳಿವು!

ಕೆಲವು ದಿನಗಳ ನಂತರ ಈ ಸೀರಿಸ್‌ ಹಿಂದಿ, ಪಂಜಾಬಿ ಮತ್ತು ಗುಜರಾತಿನಲ್ಲಿ ರಿಲೀಸ್ ಮಾಡಲಾಗಿದೆ.  ಇದರ ಜೊತೆಗೆ 2009/2010ರಲ್ಲಿ ಮಲಯಾಳಂನ ವಸಂತಂ ಧಾರಾವಾಹಿಯಲ್ಲಿ ಕೂಡ ಅಭಿನಯಿಸುತ್ತಿದ್ದಾರೆ.

ಜಯಂತಿಯವರ ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿದ್ದರು, ತಾಯಿ ಸಂತಾನಲಕ್ಷ್ಮೀ ಗೃಹಿಣಿಯಾಗಿದ್ದವರು. 

76 ವರ್ಷದವರಾಗಿದ್ದ ಜಯಂತಿ ಕಳೆದೆರಡು ವರ್ಷಗಳಿಂದ ಉಸಿರಾಟದ ತೊಂದರಯಿಂದ ಬಳಲುತ್ತಿದ್ದರು. ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಮಸಣದ ಹೂವಿನ ವೇಶ್ಯೆ ಪಾತ್ರ, ಎಡಕಲ್ಲು ಗುಡ್ಡದ ಮೇಲೆ, ಮನಸ್ಸಿನಂತೆ ಮಾಂಗಲ್ಯ ಸೇರಿ ಹಲವು ಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯ ತೋರಿದ್ದ ಜಯಂತಿ, ಕನ್ನಡಿದದರ ಹೃದಯದಲ್ಲಿ ವಿಶೇಷ ಸ್ಥಾನ ಗಿಟ್ಟಿಸಿದವರು. ಮಿಸ್ ಲೀಲಾವತಿ ಚಿತ್ರದಲ್ಲಿ ಸ್ವಿಮ್ ಸೂಟ್ ಧರಿಸಿ ಸೈ ಎನಿಸಿಕೊಂಡವರು. ಸಾಹುಕಾರ್ ಜಾನಕಿ ಅಭಿನಯಿಸಬೇಕಾಗಿದ್ದ ಈ ಪಾತ್ರಕ್ಕೆ ಸ್ವಿಮ್ ಸೂಟ್ ಹಾಕಲು ಒಲ್ಲೆ ಎಂದ ಕಾರಣ, ಜಯಂತಿ ನಟಿಸಿದರು. ಆಗಿನ ಕಾಲದಲ್ಲಿ ಸ್ವಿಮ್ ಸೂಟ್‌ನಲ್ಲಿ ಕಾಣಿಸಿಕೊಂಡ ದಿಟ್ಟ ನಟಿ ಇವರು. ಅದ್ಭುತ ನಟಿಯ ಆತ್ಮಕ್ಕೆ ಶಾಂತಿ ಸಿಗಲಿ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಜೈಲಲ್ಲಿ ಮುಂದುವರೆದ ದಾಸನ ದಾದಾಗಿರಿ.. ಟಿವಿ ಬದಲು ಸಿಸಿಟಿವಿ ಬಂತು ದರ್ಶನ್ ಸೆಲ್‌ಗೆ!
Actress Amulya: ತಮ್ಮ ಮುದ್ದಾದ ‘Family’ ಜೊತೆ Golden Girl.. ಯಾರ್ ದೃಷ್ಟಿ ಬೀಳದಿರಲಿ