ತಿರುನಲ್ಲಾರ್ ಶನಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್!

Suvarna News   | Asianet News
Published : Jul 25, 2021, 12:53 PM ISTUpdated : Jul 25, 2021, 01:15 PM IST
ತಿರುನಲ್ಲಾರ್ ಶನಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್!

ಸಾರಾಂಶ

ಪಾಂಡಿಚೇರಿಯಲ್ಲಿರುವ ತಿರುನಲ್ಲಾರ್ ಶನಿ ದೇಗುಲಕ್ಕೆ  ಸ್ನೇಹಿತರ ಜೊತೆ ಭೇಟಿ ನೀಡಿದ ನಟ ದರ್ಶನ್.

ಒಂದಾದ ಮೇಲ್ಲೊಂದು ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿರುವ ನಟ ದರ್ಶನ್ ಇದೀಗ ಪಾಂಡಿಚೇರಿಯಲ್ಲಿರುವ ಶನಿ ದೇವರ ಮೊರೆ ಹೋಗಿದ್ದಾರೆ. ಸ್ನೇಹಿತರ ಜೊತೆ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ದುರ್ಯೋಧನನ ಪಾತ್ರ ಮಾಡಿದ್ದೇ ನಟ ದರ್ಶನ್‌ಗೆ ಕಂಟಕವಾಯ್ತಾ?

ತಿರುನಲ್ಲಾರ್‌ನ ಈ ಶನಿ ದೇವಾಲಯವನ್ನು ದರ್ಬರನ್ವೇಸ್ವರನ್‌ ದೇವಾಲಯ ಎಂದೂ ಕರೆಯುತ್ತಾರೆ.  ಇಲ್ಲಿರುವ ಶನಿದೇವರ ದರ್ಶನ ಮಾಡಿದರೆ ಶನಿಭಾದೆ ತೀರುತ್ತದೆ ಎಂಬುದು ನಂಬಿಕೆ. ಈ ಪ್ರದೇಶದಲ್ಲಿದ್ದ ರಾಜ ಶನಿಪ್ರಭಾವದಿಂದ ದೂರವಾದ ಎಂಬ ಪ್ರತೀತಿ ಇದೆ. ತನ್ನ ಸುತ್ತ ಕೇಳಿ ಬರುತ್ತಿರುವ ಆರೋಪದಿಂದ ಮುಕ್ತಿ ಪಡೆಯಲು ದರ್ಶನ್ ಶನಿ ದೇವರ ಮೊರೆ ಹೋಗಿದ್ದಾರೆ. 

ದರ್ಶನ್ ಪೂಜೆ ಸಲ್ಲಿಸುತ್ತಿರುವ ವಿಡಿಯೋ ಮತ್ತು ಪೋಟೋಗಳನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  ಆರಂಭದಲ್ಲಿ 25 ಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು ಆನಂತರ ಸ್ನೇಹಿತರ ನಡುವೆ ಬಿರುಕು ಮೂಡಿತ್ತು. ಇದರ ನಡುವೆ ಇಂದ್ರಜಿತ್ ಲಂಕೇಶ್ ಪ್ರವೇಶ ಮಾಡಿದರು. ಬೇಡ ಬೇಡ ಎಂದರೂ ಆಪ್ತ ನಿರ್ದೇಶಕ ಪ್ರೇಮ್‌ ಅವರನ್ನು ಎಳೆದು ತಂದು. ಗೊತ್ತಿದ್ದೋ ಗೊತ್ತಿಲ್ಲದೆಯೋ ಆಗುತ್ತಿರುವ ತೊಂದರೆಗಳ ಪರಿಹಾರಕ್ಕೆ ಶನಿ ದೇವರ ಪೂಜೆ ಮಾಡಿಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್