
ನಿನ್ನ ಸನಿಹಕೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾದ ಅಣ್ಣಾವ್ರ ಮುದ್ದಿನ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ಗೆ ಕೊರೋನಾ ಸೋಂಕು ತಗುಲಿದೆ. ಕೋವಿಡ್ ಪಾಸಿಟಿವ್ ಬಂದಿರುವುದಾಗಿ ಬರೆದುಕೊಂಡು ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಧನ್ಯಾ ಪೋಸ್ಟ್:
'ಎಲ್ಲರಿಗೂ ನಮಸ್ಕಾರ, ನನಗೆ ಕೋವಿಡ್ 19 ಪಾಸಿಟಿವ್ ಆಗಿದೆ ಈ ವಿಚಾರವನ್ನು ತಿಳಿಸಲು ಪೋಸ್ಟ್ ಬರೆಯುತ್ತಿರುವೆ. ಸದ್ಯಕ್ಕೆ ನಾನು ಐಸೋಲೇಟ್ ಆಗಿರುವ ಹಾಗೂ ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಂಡಿರುವೆ. ಮುನ್ನೆಚ್ಚರಿಕೆ ವಹಿಸಿ ಆದಷ್ಟು ಬೇಗ ನಿಮ್ಮ ಮುಂದೆ ಬರುವೆ' ಎಂದು ಧನ್ಯಾ ಬರೆದುಕೊಂಡಿದ್ದಾರೆ.
ಬೆಳ್ಳಿ ಕಾಲುಂಗುರ ಮುಹೂರ್ತ: ಸಾರಾ ಗೋವಿಂದು ನಿರ್ಮಾಣ, ಧನ್ಯಾ ರಾಮ್‌ಕುಮಾರ್ ನಟನೆಯ ಚಿತ್ರ
'ಪ್ರತಿಯೊಬ್ಬರೂ ದಯವಿಟ್ಟು ನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ. ಆರೋಗ್ಯವೇ ನಮ್ಮ ಭಾಗ್ಯ. ನನ್ನ ಆರೋಗ್ಯ ಬಗ್ಗೆ ನಿಮ್ಮ ನಾನೇ ಮಾಹಿತಿ ಕೊಡುವೆ. ದಯವಿಟ್ಟು ಈ ಸಮಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ'ಎಂದು ಧನ್ಯಾ ಹೇಳಿದ್ದಾರೆ.
ಸಿನಿಮಾ ಕ್ಷೇತ್ರ ಯಾಕೆ?
ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಜರ್ನಲಿಸಂ ಮತ್ತು ಮಾಸ್ ಕಮ್ಯೂನಿಕೇಷನ್‌ನಲ್ಲಿ (Journalism & Mass Communication) ಪದವಿ ಪಡೆದ ನಂತರ ಕೆಲವು ವರ್ಷಗಳ ಕಾಲ ಪಿಆರ್ ಸಂಸ್ಥೆ ಒಂದರಲ್ಲಿ ಕೆಲಸ ಮಾಡಿದ್ದಾರೆ. ಕೈ ತುಂಬಾ ಸಂಪಾದನೆ ಮಾಡುತ್ತಿದ್ದರೂ ಕೆಲಸದಲ್ಲಿ ನೆಮ್ಮದಿ ಇಲ್ಲದ ಕಾರಣ ಧನ್ಯಾ ಈ ನಿರ್ಧಾರ ಕೈಗೊಂಡರಂತೆ.
ದಿನವೂ ಕೆಲಸಕ್ಕೆ ಹೋಗುವ ಮುನ್ನ ಸಂತೋಷವಿರುತ್ತಿರಲಿಲ್ಲ ಒಂದು ದಿನ ಕೆಲಸ ಒತ್ತಡ ಹೆಚ್ಚಾಗಿತ್ತು. ಇಲ್ಲ ಇದು ನನ್ನ ಕೈಯಲ್ಲಿ ಆಗುವುದಿಲ್ಲ ನಾನು ಇಷ್ಟ ಪಡುವ ಕೆಲಸವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಮನೆಗೆ ಹೋಗಿ ಈ ವಿಚಾರವನ್ನು ಅಮ್ಮನಿಗೆ ತಿಳಿಸುತ್ತೇನೆ ಎಂದು ನಿರ್ಧರಿಸಿಕೊಂಡು ತಮ್ಮ ಕನಸಿನ ಕೆಲಸದ ಬಗ್ಗೆ ಹಂಚಿಕೊಂಡರಂತೆ. ಧನ್ಯಾ ಸಿನಿಕ್ಷೇತ್ರ ಪ್ರವೇಶಿಸುತ್ತಾಳೆ ಎನ್ನುವ ಸಣ್ಣ ಅನುಮಾನ ತಾಯಿ ಅವರಿಗೆ ಇತ್ತಂತೆ ಆದರೆ ಇಷ್ಟು ಬೇಗ ಎಂದುಕೊಂಡಿರಲಿಲ್ಲ. ಅದರಲ್ಲೂ ರಾಜ್‌ಕುಮಾರ್ ಕುಟುಂಬದಿಂದ ಇದೇ ಮೊದಲ ಹೆಣ್ಣು ಮಗಳ ಲೈಮ್ ಲೈಟ್ ಕಡೆ ಮುಖ ಮಾಡುತ್ತಿರುವ ಕಾರಣ ಧನ್ಯಾ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಮುಂದೊಂದು ದಿನ ನಾನು ನನ್ನ ಕನಸನ್ನು ಫಾಲೋ ಮಾಡಿಲ್ಲ ಎಂದು ರಿಗ್ರೆಟ್ (Regret) ಮಾಡಬಾರದು. ಹೀಗಾಗಿ ಗಟ್ಟಿ ಮನಸ್ಸು ಮಾಡಿಕೊಂಡು ಮನೆಯಲ್ಲಿ ಎಲ್ಲರಿಗೂ ಹೇಳಿದೆ ಎಂದು ನಟಿ ಧನ್ಯಾ ಸಂದರ್ಶನದಲ್ಲಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.