Amulya Pregnant: 2022ರಲ್ಲಿ ಕುಟುಂಬಕ್ಕೆ ಹೊಸ ಅತಿಥಿ, ಅಮೂಲ್ಯ ಜಗದೀಶ್ ಈಗ ಮಮ್ಮಿ!

Suvarna News   | Asianet News
Published : Dec 02, 2021, 11:28 AM ISTUpdated : Dec 02, 2021, 12:45 PM IST
Amulya Pregnant: 2022ರಲ್ಲಿ ಕುಟುಂಬಕ್ಕೆ ಹೊಸ ಅತಿಥಿ, ಅಮೂಲ್ಯ ಜಗದೀಶ್ ಈಗ ಮಮ್ಮಿ!

ಸಾರಾಂಶ

ಫೋಟೋ ಶೂಟ್ ಮೂಲಕ ತಾಯಿ ಆಗುತ್ತಿರುವ ವಿಚಾರ ಹಂಚಿಕೊಂಡ ನಟಿ ಅಮೂಲ್ಯ. ಥೀಮ್ ಸೂಪರ್ ಎಂದ ನೆಟ್ಟಿಗರು.... 

ಕನ್ನಡ ಚಿತ್ರರಂಗದ (Sandalwod) ಮುದ್ದು ಮುಖದ ಚೆಲುವೆ, ಹುಡುಗರ ಮನಸ್ಸು ಕದ್ದ ಚೆಲುವಿನ ಚಿತ್ತಾರ, ಮಿಸ್ ಗೋಲ್ಡನ್ ಕ್ವೀನ್ ಅಮೂಲ್ಯ (Amulya Moulya) ಮತ್ತು ಪತಿ ಜಗದೀಶ್ (Jagadish RC) ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನ ಫೋಟೋಶೂಟ್ ಮೂಲಕ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಳ್ಳುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಸಿನಿಮಾ ತಾರೆಯರು ಕಾಮೆಂಟ್ಸ್ ಮೂಲಕ ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. 

ಹೌದು! ಬೆಂಗಳೂರಿನ (Bengaluru) ಪ್ರಸಿದ್ಧ ಸ್ಥಳದಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ವೈಟ್ ಟೀ-ಶರ್ಟ್ ಮತ್ತು ವೈಟ್ ಹ್ಯಾಟ್ ಧರಿಸಿರುವ ಅಮೂಲ್ಯ ತಮ್ಮ ಬೇಬಿ ಬಂಪ್ (Baby Bump) ತೋರಿಸಿಕೊಂಡು, ಚಿಪ್ಸ್ ತಿನ್ನುತ್ತಿದ್ದಾರೆ. ಪಕ್ಕದಲ್ಲಿ ಪತಿ ಜಗದೀಶ್ ಕೈಯಲ್ಲಿ ಕೋಕ್ ಮತ್ತು ಕೆಎಫ್‌ಸಿ ಚಿಕನ್ (Chicken) ಹಿಡಿದುಕೊಂಡು ನಗುತ್ತಿದ್ದಾರೆ. ಇಬ್ಬರ ಸುತ್ತ ಅಮೂಲ್ಯ ಇಷ್ಟ ಪಡುವ ಆಹಾರಗಳನ್ನು ಇಡಲಾಗಿದೆ. ಇದೊಂದು ಕ್ಯಾಂಡಿಡ್ ಫೋಟೋ (Candid Photo) ಆಗಿದ್ದು, ನೋಡಲು ಸೂಪರ್ ಆಗಿದೆ ಎನ್ನುತ್ತಾರೆ ಅಭಿಮಾನಿಗಳು. 

'ಈಗ ನಾವಿಬ್ಬರು ಮಾತ್ರವಲ್ಲ. Due this summer 2022. ಫ್ಯಾಮಿಲಿ ಗ್ರೂಯಿಂಗ್ (Family Growing), ಎಜೆ ಹ್ಯಾಪಿನೆಸ್,' ಎಂದು ಅಮೂಲ್ಯ ಬರೆದುಕೊಂಡಿದ್ದಾರೆ.  ಇದೇ ಸಾಲುಗಳನ್ನು ಜಗದೀಶ್ ಬರೆದುಕೊಂಡು ಬೇರೆ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಇಬ್ಬರೂ ಜ್ಯೂಸ್‌ ಅನ್ನು ಚಿಯರ್ಸ್ ಮಾಡಿಕೊಂಡು, ಎಂಜಾಯ್ ಮಾಡುತ್ತಿದ್ದಾರೆ.  ಅಮೂಲ್ಯ ಪ್ರಗ್ನೆನ್ಸ್ ಫೋಟೋಶೂಟ್ ಮಾಡಿರುವುದು ದೀಪಕ್ ವಿಜಯ್ ಎಂದು.

ಅಮೂಲ್ಯ ಮತ್ತು ಜಗದೀಶ್ 2017 ಮೇ 12ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದಿಚುಂಚುನಗಿರಿಯ (Adichunchanagiri) ಕಾಲಭೈರವೇಶ್ವರ ಸನ್ನಿಧಿಯಲ್ಲಿ ಮದುವೆ ಕಾರ್ಯಕ್ರಮ ನಡೆದಿತ್ತು. ಇಬ್ಬರೂ ಒಕ್ಕಲಿಗರಾಗಿದ್ದು, ಆ  ಸಂಪ್ರದಾಯದಂತೆ, ಮದುವೆ ಅದ್ಧೂರಿಯಾಗಿ ನಡೆದಿತ್ತು. ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ಸ್ವಾಮಿಗಳು (Nirmalanandanatha Swamiji) ನವ ಜೋಡಿಯನ್ನು ಆಶೀರ್ವಾದ ಮಾಡಿದ್ದರು. 

ಮದುವೆ ಆದ ನಂತರ ಅಮೂಲ್ಯ ಲೈಮ್‌ಲೈಟ್‌ನಿಂದ ಕೊಂಚ ದೂರ ಉಳಿದರು. ಮಾಸ್ತಿಗುಡಿ (Mastigudi) ಸಿನಿಮಾ ನಂತರ ಯಾವ ಪ್ರಾಜೆಕ್ಟ್‌ಗೂ ಸಹಿ ಮಾಡಿರಲಿಲ್ಲ. ಕೆಲವೊಂದು ಸಂದರ್ಶನಗಳಲ್ಲಿ ಕಥೆ ಹುಡುಕುತ್ತಿರುವುದಾಗಿ ಹೇಳಿದ್ದರಷ್ಟೆ.  ಅದು ಬಿಟ್ಟು ಆರ್‌ಆರ್ ನಗರದ (RR Nagar elections) ಉಪ ಚುಣಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮುನಿರತ್ನ ಅವರ ಪರ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಪತಿ ಜಗದೀಶ್ ಮತ್ತು ಮಾವ ರಾಮಚಂದ್ರ ರಾಜಕೀಯದಲ್ಲಿ ಸಕ್ರಿಯರಾಗಿರುವ ಕಾರಣ ಅಮೂಲ್ಯ ಅವರ ಬೆಂಬಲಕ್ಕೆ ನಿಂತಿದ್ದರು. ಕೊರೋನಾ ವೈರಸ್ ಎರಡು ಲಾಕ್‌ಡೌನ್‌ (Covid19 Lockdown) ಸಮಯದಲ್ಲಿ ದಂಪತಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

ನಟಿ ಅಮೂಲ್ಯ ಅವರೇ ಮೊದಲು ಜಗದೀಶ್‌ಗೆ ಐಟಿಸಿ ಗಾರ್ಡನಿಯಾದಲ್ಲಿ ನಡೆದ ವೆಡ್ಡಿಂಗ್ ಪಾರ್ಟಿಯಲ್ಲಿ (Wedding party) ಪ್ರಪೋಸ್ ಮಾಡಿದ್ದರಂತೆ. ಹೀಗಂತ ಏಷ್ಯಾನೆಟ್ ಸುವರ್ಣ ನ್ಯೂಸ್ ಈ ಹಿಂದೆ ನಡೆಸಿದ ಸಂದರ್ಶನದಲ್ಲಿ ಹೇಳಿ ಕೊಂಡಿದ್ದರು. ಇಬ್ಬರೂ ಮೊದಲು ಭೇಟಿ ಮಾಡಿದ್ದು ಆರ್‌ಆರ್‌ ನಗರದಲ್ಲಿ ನಡೆದ ಕಬ್ಬಡಿ ಸ್ಪರ್ಧೆಯಲ್ಲಂತೆ. ಚಿತ್ರರಂಗದಲ್ಲಿ ಅಮೂಲ್ಯ ಹೊರತು ಪಡಿಸಿ, ಜಗದೀಶ್ ಅವರಿಗೆ ಮೋಹಕ ತಾರೆ ರಮ್ಯಾ (Ramya/Divya Spandana) ಮೇಲೆ ಕ್ರಶ್ ಆಗಿತ್ತಂತೆ. ಇವರಿಬ್ಬರೂ ಮೊದಲು ಭೇಟಿ ಆದಾಗ ಅಮೂಲ್ಯ ಗ್ರೀನ್ ಮತ್ತು ಕೆಂಪು ಬಣ್ಣದ ವಸ್ತ್ರ ಧರಿಸಿದ್ದರು ಎಂದು ಜಗದೀಶ್ ನೆನಪಿಸಿಕೊಂಡಿದ್ದರು. ಹಾಗೇ ಅಮೂಲ್ಯರನ್ನು ಏಜೆ (AJ) ಮತ್ತು ಎಮ್‌ಜೆ (MJ) ಎಂದು ಕರೆಯುತ್ತಾರಂತೆ. ಅಮೂಲ್ಯ ಅವರು ತುಂಬಾ ನಿದ್ದೆ (Sleep) ಮಾಡುವ ಕಾರಣ ಜಗದೀಶ್ ಅವರು ಆಗಾಗ ಈ ವಿಚಾರಕ್ಕೆ ಕೋಪ ಮಾಡಿಕೊಳ್ಳುತ್ತಾರಂತೆ. ಅಲ್ಲದೇ ಇವರಿಬ್ಬರೂ ಮದುವೆ ಆಗಿದ್ದ ಒಂದು ವಾರದಲ್ಲಿ ಅಮೂಲ್ಯ ಅವರು ಚಿನ್ನ ಬ್ರೇಸ್ಲೆಟ್‌ ಉಡುಗೊರೆಯಾಗಿ ಕೊಟ್ಟು 'ಮುಂದೆ ನಾನು ದುಡಿಯುತ್ತೀನಾ ಇಲ್ಲವೋ ಗೊತ್ತಿಲ್ಲ. ಆದರೆ ನಾನು ದುಡಿದ ದುಡ್ಡಿನಲ್ಲಿ ತಂದಿರುವ ಗಿಫ್ಟ್,' ಎಂದು ಹೇಳಿ ಕೊಟ್ಟಿದ್ದರಂತೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!