ವಿಶೇಷ ಚೇತನ ಹಾಗೂ ದೃಷ್ಟಿ ಹೀನರಿಗೆ ಲಸಿಕೆ ಕೊಡಿಸಿದ ಕನ್ನಡ ನಟ ವಿವೇಕ್!

By Suvarna NewsFirst Published Jun 1, 2021, 11:25 AM IST
Highlights

150ಕ್ಕೂ ಹೆಚ್ಚು ದೃಷ್ಟಿ ಹೀನ ಮತ್ತು ವಿಶೇಷ ಚೇತನರಿಗೆ ಲಸಿಕೆ ಕೊಡಿಸಿದ ನಟ ವಿವೇಕ್ ಅವರ ಮಾನವೀಯ ಕಾರ್ಯಕ್ಕೆ ಸಿಗುತ್ತಿದೆ ಎಲ್ಲೆಡೆಯಿಂದ ಚಪ್ಪಾಳೆ.

ಹಬ್ಬುತ್ತಿರುವ ಕೊರೋನಾ ಎರಡನೇ ಅಲೆಯನ್ನು ತಡೆಗಟ್ಟಲು ನಮ್ಮ ಬಳಿ ಇರುವ ಏಕೈಕ ಮಾರ್ಗವೇ ಸೋಂಕಿನ ಮಾರ್ಗಸೂಚಿ ಪಾಲಿಸುವುದು ಹಾಗೂ ಲಸಿಕೆ ಪಡೆದುಕೊಳ್ಳುವುದು. ಸದ್ಯದ ಪರಿಸ್ಥಿತಿಗೆ ಹಲವು ಊರುಗಳಲ್ಲಿ ವ್ಯಾಕ್ಸಿನ್ ಕೊರತೆ ಎದ್ದು ಕಾಣುತ್ತಿದೆ. ಉಚಿತವಾಗಿ ಸಿಗದಿದ್ದರೂ, ಹಣ ಕೊಟ್ಟ ವ್ಯಾಕ್ಸಿನ್ ತೆಗೆದುಕೊಂಡರೆ ಸಾಕು ಎನ್ನುವ ಮನಸ್ಥಿತಿಗೆ ಜನರು ಬಂದಿದ್ದಾರೆ. ಈ ಸಮಯದಲ್ಲಿ ಅಂಧ ಮತ್ತು ವಿಶೇಷ ಚೇತನರ ಬಗ್ಗೆ ಚಿಂತಿಸುವವರು ಯಾರು?

ಸಿನಿಮಾ ಕಲಾವಿದರಿಗೆ ಉಚಿತ ಲಸಿಕೆ,  ಪಡೆದುಕೊಳ್ಳುವುದು ಹೇಗೆ? 

Latest Videos

ಯಲಹಂಕದಲ್ಲಿರುವ ಮಾತೃ ಎಜುಕೇಷನಲ್ ಟ್ರಸ್ಟ್‌ನಲ್ಲಿರುವ ಸುಮಾರು 150 ದೃಷ್ಟಿಹೀನ ಹಾಗೂ ಬುದ್ಧಿಮಾಂದ್ಯರು 18 ವರ್ಷ ಮೇಲ್ಪಟ್ಟವರು ಆಗಿದ್ದು ಅವರಿಗೆ ವ್ಯಾಕ್ಸಿನ್ ಕೊಡಿಸುವ ವ್ಯವಸ್ಥೆಯನ್ನು ನಟ ವಿವೇಕ್ ಮಾಡಿದ್ದಾರೆ. 'ಕಳೆದ ಬಾರಿ ಲಾಕ್‌ಡೌನ್‌ನಲ್ಲಿ ಊರಿನಲ್ಲಿದ್ದೆ. ಜನರಿಗೆ ಸಹಾಯ ಮಾಡುವುದಕ್ಕೆ ಆಗಿರಲಿಲ್ಲ. ಈ ಬಾರಿ ಇಲ್ಲಿಯೇ ಇದ್ದಿದ್ದರಿಂದ ಸಹಾಯ ಮಾಡಲು ಅವಕಾಶ ಸಿಕ್ಕಿತು.  ಹೀಗೆ ವ್ಯಾಕ್ಸಿನ್ ಕೊಡುತ್ತಿದ್ದಾರೆ ಎಂದು ಒಬ್ಬರಿಗ ಮಾಹಿತಿ ಸಿಕ್ಕಿತ್ತು. ತಕ್ಷಣವೇ 150ಕ್ಕೂ ಅಧಿಕ ದೃಷ್ಟಿ ಹೀನ ಹಾಗೂ ವಿಶೇಷ ಚೇತನರಿಗೆ ಕೊರೋನಾ ವ್ಯಾಕ್ಸಿನ್ ಕೊಡಿಸಿದೆವು,' ಎಂದು ವಿವೇಕ್ ಹೇಳಿದ್ದಾರೆ. 

ಮೊದಲಿನಿಂದಲೂ ವಿವೇಕ್‌ ಸಮಾಜ ಸೇವೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಇನ್ನೂ ಸುಮಾರು ಬಡವರಿಗೆ ಕೊರೋನಾ ಲಸಿಕೆ ಸಿಕ್ಕಿಲ್ಲ, ಅವರನ್ನು ಗುರುತಿಸಿ ಅವರಿಗೆ ಲಸಿಕೆ ಕೊಡಿಸುವ ಪ್ರಯತ್ನ ಮಾಡುವುದಾಗಿ ವಿವೇಕ್ ಹೇಳಿ ಕೊಳ್ಳುತ್ತಾರೆ.  ಸದ್ಯ 'ಐರಾವನ್' ಸಿನಿಮಾದಲ್ಲಿ ವಿವೇಕ್ ಅಭಿನಯಿಸುತ್ತಿದ್ದಾರೆ. ಕೈಯಲ್ಲಿ ಮತ್ತೊಂದು ಸಿನಿಮಾವಿದ್ದು, ಸೈಲೆಂಟ್ ಆಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. 

ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್​ ವಾಹನ ಮತ್ತು 10 ಸಾವಿರ ಮೆಡಿಕಲ್ ಕಿಟ್‌ ನೀಡಿದ ನಟ ಜೆಕೆ ಐರಾವನ್ ತಂಡ! 

ಕೆಲವು ದಿನಗಳ ಹಿಂದೆ ಐರಾವನ್ ಚಿತ್ರತಂಡ ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್‌ ವಾಹನ ಮತ್ತು 10 ಸಾವಿರ ಮೆಡಿಕಲ್ ಕಿಟ್ಸ್ ಸಹ ನೀಡಿದೆ.

click me!