ಸೃಜನ್ ಲೋಕೇಶ್ ಯೂಟ್ಯೂಬ್ ಚಾನಲ್ ಆರಂಭ!

Kannadaprabha News   | Asianet News
Published : Jul 02, 2021, 03:41 PM IST
ಸೃಜನ್ ಲೋಕೇಶ್ ಯೂಟ್ಯೂಬ್ ಚಾನಲ್ ಆರಂಭ!

ಸಾರಾಂಶ

ಮೀರಿಸಲು ಅಸಾಧ್ಯವಾದ ಕಾಮಿಡಿ ಟೈಮಿಂಗ್, ಸ್ನೇಹಿತರ ಬಳಗವನ್ನು ಮರುಳುಗೊಳಿಸುವ ಗಾಯನ ಪ್ರತಿಭೆ, ನಟನೆಯಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವ ನಟನಾ ಚಾತುರ್ಯ ಹೊಂದಿರುವ ಸೃಜನ್ ಲೋಕೇಶ್ ತಮ್ಮ ಹೊಸ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. 

ಪ್ರವಾಸ, ಕಲೆ, ಜೀವನ ಕುರಿತ ಕುತೂಹಲಕರ ಕಾರ್ಯಕ್ರಮಗಳನ್ನು ಈ ತಮ್ಮ ಚಾನಲ್‌ನಲ್ಲಿ ಪ್ರಸಾರ ಮಾಡುವ ಆಲೋಚನೆ ಅವರದು. ಯೂಟ್ಯೂಬ್‌ಗೆ ಹೋಗಿ ಸೃಜನ್ ಲೋಕೇಶ್ ಅಫೀಷಿಯಲ್ ಅಂತ ಟೈಪ್ ಮಾಡಿ ಅವರ ಚಾನಲ್‌ಗೆ ಚಂದಾದಾರರಾಗಬಹುದು.ಜುಲೈ 4ರಂದು ಈ ಚಾನಲ್‌ನಲ್ಲಿ ಮೊದಲ ವಿಡಿಯೋ ಪ್ರಸಾರವಾಗಲಿದೆ. ಗಿರಿಜಾ ಲೋಕೇಶ್ ಅವರು ಪ್ರಾಸ್ತಾವಿಕವಾಗಿ ತಮ್ಮ ಕುಟುಂಬದ ಕತೆಯನ್ನು ಹೇಳಲಿದ್ದಾರೆ. ಅಲ್ಲಿಂದ ನಂತರ ತಿಂಗಳಿಗೆ ಏಳು ವಿವಿಧ ಕಾರ್ಯಕ್ರಮಗಳು ಈ ಚಾನಲಲ್ಲಿ ಪ್ರಸಾರವಾಗಲಿದೆ.

ಸೃಜನ್ ಲೋಕೇಶ್ ಒಳ್ಳೆಯ ನಟ, ನಿರೂಪಕನಷ್ಟೇ ಅಲ್ಲ. ಅವರು ರೈಡರ್, ಟ್ರಾವೆಲರ್ ಮತ್ತು ಒಳ್ಳೆಯ ಕುಕ್ ಕೂಡ. ಅವರ ಈ ಎಲ್ಲಾ ಪ್ರತಿಭೆಯ ಅನಾವರಣ ಇಲ್ಲಿ ನಡೆಯಲಿದೆ. ಅಲ್ಲದೇ ಗಿರಿಜಾ ಲೋಕೇಶ್ ಅವರು ಕೂಡ ನಿಯಮಿತವಾಗಿ ಇಲ್ಲಿ ಕತೆ ಹೇಳಲಿದ್ದಾರೆ. ಅನುಭವ ಹಂಚಿಕೊಳ್ಳಲಿದ್ದಾರೆ.

ಶ್ವೇತಾ ಚಂಗಪ್ಪ ಹುಟ್ಟು ಹಬ್ಬಕ್ಕೆ ಮಧ್ಯರಾತ್ರಿ ಸರ್ಪ್ರೈಸ್‌ ಕೊಟ್ಟ ಸೃಜನ್ ಲೋಕೇಶ್! 

‘ನನಗೆ ಅನೇಕ ಐಡಿಯಾಗಳು ಬರುತ್ತಿರುತ್ತವೆ. ಅದನ್ನು ಜಗತ್ತಿಗೆ ಹೇಳಬೇಕು. ಬದುಕಿನ ಕತೆಯನ್ನು ನಿರೂಪಿಸಬೇಕು. ಈ ಮೂಲಕ ಜನರಿಗೆ ಹೊಸ ರೀತಿಯ ಮನರಂಜನೆ ಜೊತೆಗೆ ಕಿಂಚಿತ್ ಆದರೂ ಜ್ಞಾನ ಹಂಚುವ ಕೆಲಸ ಸಾಧ್ಯವಾದರೆ ಅದೇ ಈ ಪ್ರಯತ್ನದ ಸಾರ್ಥಕತೆ’ ಎನ್ನುತ್ತಾರೆ ಸೃಜನ್ ಲೋಕೇಶ್. ಮೂಲತಃ ಕನಸುಗಾರನಾದ ಸೃಜನ್ ಅವರಿಗೆ ಈ ಯೂಟ್ಯೂಬ್ ಚಾನಲ್ ಮುಖಾಂತರ ಅನೇಕ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಮಾಡುವ ಆಲೋಚನೆ ಇದೆ. ಕುತೂಹಲ ಇರುವವರು ಸೃಜನ್ ಲೋಕೇಶ್ ಅಫೀಷಿಯಲ್ ಯೂಟ್ಯೂಬ್ ಚಾನಲ್ ಸಬ್‌ಸ್ಕ್ರೈಬ್ ಮಾಡಿಕೊಳ್ಳಬಹುದು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!