ಮಗುವಿನ ರೀತಿಯಲ್ಲಿ ಶಿವಣ್ಣನಿಗೆ ಕೈ ತುತ್ತು ಕೊಟ್ಟ ಶ್ರೀಮುರಳಿ!

By Suvarna News  |  First Published Mar 15, 2020, 11:44 AM IST

ಹ್ಯಾಟ್ರಿಕ್‌ ಹೀರೋಗೆ ಮಗುವಿನಂತೆ ಕೈತುತ್ತು ಕೊಟ್ಟ ಭರಾಟೆ ಹುಡುಗ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್‌ ವೈರಲ್...


ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಮತ್ತು ರೋರಿಂಗ್ ಸ್ಟಾರ್ ಶ್ರೀ ಮುರಳಿ ಒಟ್ಟಾಗಿ ಕಾಣಿಸಿಕೊಂಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 

ಕಳೆದ ತಿಂಗಳ ಸ್ನೇಹಿತರ ಜೊತೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದ ಶಿವಣ್ಣ ಈ ತಿಂಗಳು ಯಾತ್ರೆಗೆ ಹೊರಡಬೇಕಿತ್ತು. ಕೊರೋನಾ ವೈರಸ್‌ ಭೀತಿ ಹೆಚ್ಚಾದ ಕಾರಣ ಮನೆಯಲ್ಲೇ ಮಾಲೆ ತೆಗೆದು ಪೂಜೆ ಪುನಸ್ಕಾರಗಳನ್ನು ಮಾಡಲಾಗಿತ್ತು.

Tap to resize

Latest Videos

ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನಸಂತರ್ಪಣೆ ಮಾಡಿಸಿದ ಶಿವಣ್ಣ!

ಈ ವೇಳೆ ಪೂಜಾ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಪಾಲ್ಗೊಂಡಿದ್ದರು. ಅಯ್ಯಪ್ಪ ಸ್ವಾಮಿ ವಿಶೇಷ ಪೂಜೆಯಲ್ಲಿ ನಟ ಶ್ರೀ ಮುರಳಿ ಹಾಗೂ ಪತ್ನಿ ವಿದ್ಯಾ ಭಾಗಿಯಾಗಿದ್ದರು. ಊಟ ಮಾಡುತ್ತಿದ್ದ ವೇಳೆ ಮುರುಳಿ ಅವರನ್ನು ಮಾತನಾಡಿಸಲು ಶಿವರಾಜ್‌ಕುಮಾರ್‌ ಮುಂದಾದಾಗ ಶ್ರೀಮುರುಳಿ ದೋಸೆಯನ್ನು ಮುರಿದು ಮಗುವಿನಂತೆ ತಿನ್ನಿಸುತ್ತಾರೆ. 

ಶಿವಣ್ಣ- ರೋರಿಂಗ್‌ ಬಾಯ್ಸ್‌ ಅಭಿಮಾನಿಗಳು ಈ ವಿಡಿಯೋ ನೋಡಿ ಫುಲ್‌ ಖುಷ್‌ ಆಗಿದ್ದಾರೆ. ವರಸೆಯಲ್ಲಿ ಶಿವರಾಜ್‌ಕುಮಾರ್‌ ಅವರು ಶ್ರೀಮುರಳಿಗೆ ಮಾವ ಆಗಬೇಕು!

"

click me!