
'ಕೆಂಡ ಸಂಪಿಗೆ' ಚಿತ್ರಕ್ಕೆ ಫಿದಾ ಆಗಿದ್ದರು ಸಿನಿ ಪ್ರೇಕ್ಷಕರು, 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾ ವೀಕ್ಷಿಸಿದ ನಂತರ ಮುಂದಿನ ಭಾಗಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಇದೇ ವೇಳೆ ದಿನೇಶ್ ಗೌಡರ ನಿರ್ದೇಶನ, ಮುನೇಗೌಡ್ರು ನಿರ್ಮಾಣದ 'ಕಾಗೆ ಬಂಗಾರ' ಚಿತ್ರ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪೋಸ್ಟರ್ ನೋಡಿದ ಪ್ರೇಕ್ಷಕರು ಸಿನಿಮಾ ಟೈಟಲ್ ಅನ್ನೇ ಸೂರಿ ದಾನ ಮಾಡ್ಬಿಟ್ರಾ ಅನ್ನೂ ಕನ್ಫ್ಯೂಷನ್‌ನಲ್ಲಿದ್ದರು. ಆದರೆ ಇದರ ಬಗ್ಗೆ ಸ್ವತಃ ದುನಿಯಾ ಸೂರಿ ಸ್ಪಷ್ಟನೆ ನೀಡಿದ್ದಾರೆ. 'ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈಗಾಗಲೇ ಕೆಂಡ ಸಂಪಿಗೆ, ಕಾಗೆ ಬಂಗಾರ, ಗಿಣಿಮರಿ ಕೇಸ್ ಮತ್ತು ಬ್ಲಾಕ್ ಮ್ಯಾಜಿಕ್ ಹೆಸರುಗಳು ರಿಜಿಸ್ಟರ್ ಆಗಿವೆ. ಇವೆಲ್ಲವೂ ನನ್ನ ಬ್ಯಾನರ್‌ನಲ್ಲೇ ಇವೆ. ವಿಷಯ ತಿಳಿದ ನಂತರ ಚೇಂಬರ್‌ನಲ್ಲಿ ದೂರು ನೀಡಿದ್ದೇನೆ. ಈ ಪ್ರಕರಣವನ್ನು ಬಗೆಹರಿಸಲಾಗಿದೆ,' ಎಂದು ಸೂರಿ ಸ್ಪಷ್ಟನೆ ನೀಡಿದ್ದಾರೆ.
ಸುಕ್ಕಾ ಸೂರಿ ಪಕ್ಕಾ ರಾ ಸಿನಿಮಾ ಪಾಪ್ ಕಾರ್ನ್ ಮಂಕಿ ಟೈಗರ್
ಈಗಾಗಲೇ ಚಿತ್ರದ ಪೇಪರ್ ವರ್ಕ್ ಶುರುವಾಗಿದ್ದು, ಬಜೆಟ್ ಸೆಟ್ ಆದ್ಮೇಲೆ ಶೂಟಿಂಗ್ ಶುರು ಮಾಡಲು ಚಿತ್ರತಂಡ ನಿರ್ಧರಿಸಿದೆ. ನೈಜ ಘಟನೆಯನ್ನು ಮೂರು ಭಾಗವಾಗಿ ವಿಂಗಡಿಸಿ ಚಿತ್ರರೂಪದಲ್ಲಿ ತರಲು ಸೂರಿ ಕೈ ಹಾಕಿದ್ದಾರೆ, ಭಾಗ-3, ಭಾಗ-2 ರ ನಂತರ ಭಾಗ-1 ಬಿಡುಗಡೆಯಾಗಲಿದೆ! ಈಗಾಗಲೇ ಕೆಂಡ ಸಂಪಿಗೆ ಮತ್ತು ಪಾಪ್‌ಕಾರ್ನ್ ಮಂಕಿ ಟೈಗರ್ ಬಿಗ್ ಹಿಟ್ ಆಗಿವೆ. ಮೊದಲ ಭಾಗ ಕಾಗೆ ಬಂಗಾರ ಬರಲಿದ್ದು, ಈಗಾಗಲೇ ಎರಡನೇ ಭಾಗ ಪಾಪ್‌ಕಾರ್ನ್ ಮಂಕಿ ಟೈಗರ್ ಮತ್ತು ಮೂರನೇ ಭಾಗ ಕೆಂಡ ಸಂಪಿಗೆ ರೂಪದಲ್ಲಿ ತೆರೆ ಮೇಲೆ ಬಂದು, ಯಶಸ್ವಿಯಾಗಿವೆ.
ಸೂರಿ ಅಣ್ಣನ ಕಿಕ್ ಗೆ ಕಳೆದೇ ಹೋದ ಟಗರು ಶಿವ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.