'ರಾಷ್ಟ್ರಪ್ರಶಸ್ತಿ ಪುರಸ್ಕೃತ, ಹಳ್ಳಿ ಹುಡುಗ ವಿಜಯ್ ನಮ್ಮೊಂದಿಗೆ ಇಲ್ಲ'

Published : Jun 14, 2021, 04:20 PM IST
'ರಾಷ್ಟ್ರಪ್ರಶಸ್ತಿ ಪುರಸ್ಕೃತ, ಹಳ್ಳಿ ಹುಡುಗ ವಿಜಯ್ ನಮ್ಮೊಂದಿಗೆ ಇಲ್ಲ'

ಸಾರಾಂಶ

* ಅಪೊಲೋ ಆಸ್ಪತ್ರೆ ಬಳಿ ಮಾಜಿ ಶಾಸಕ ವೈ ಎಸ್ ವಿ ದತ್ತ ಹೇಳಿಕೆ * ಸಂಚಾರಿ ವಿಜಯ್ ರಾಷ್ಟ್ರ ಪ್ರಶಸ್ತಿ ವಿಜೇತ, ಪ್ರತಿಭಾವಂತ ಕಲಾವಿದ *  ನನ್ನ ಹಳ್ಳಿಯ ಹುಡುಗ, ನನ್ನ ಕಣ್ಣ ಮುಂದೆ ಬೆಳೆದ ಹುಡುಗ * ಅವರ ನಿಧನವನ್ನು ಅಧಿಕೃತವಾಗಿ ಘೋಷಣೆ ಮಾಡುವ ನೋವಿನ ಸಂದರ್ಭ  

ಬೆಂಗಳೂರು(ಜೂ.  14)  ಅಪೊಲೋ ಆಸ್ಪತ್ರೆ ಬಳಿ ಮಾಜಿ ಶಾಸಕ ವೈ ಎಸ್ ವಿ ದತ್ತ  ಮಾತನಾಡಿದ್ದಾರೆ. ಸಂಚಾರಿ ವಿಜಯ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಪ್ರತಿಭಾವಂತ ಕಲಾವಿದ ಅವನು ಅಷ್ಟಿದ್ರು ನನ್ನ ಹಳ್ಳಿಯ ಹುಡುಗ. ನನ್ನ ಕಣ್ಣ ಮುಂದೆ ಬೆಳೆದ ಹುಡುಗ. ರಾಷ್ಟ್ರ ಪ್ರಶಸ್ತಿ ಬಂದಾಗ ನಾವು ಪುಳಕಿತರಾಗಿದ್ದೆವು. ಅವರು ಈಗ ನಮ್ಮ ಜೊತೆಗಿಲ್ಲ ಎಂದಿದ್ದಾರೆ.

ಅಧಿಕೃತವಾಗಿ  ಸಾವನ್ನು ಘೋಷಣೆ ಮಾಡಬೇಕಿದೆ. ಅಂಗಾಂಗ ದಾನ ಮಾಡಬೇಕಾಗಿದೆ. ಆರೋಗ್ಯವಾಗಿರುವ ಅಂಗಾಂಗ ದಾನ ಮಾಡಬೇಕು. ಇದನ್ನು ವೈದ್ಯರು ಪರೀಕ್ಷೆ ಮಾಡಬೇಕಾಗುತ್ತದೆ. ಇದು ಇವತ್ತು 11 ಗಂಟೆ ರಾತ್ರಿ ಆಗುತ್ತದೆ. ಅದು ಪೂರ್ಣ ಆದ ಮೇಲೆ ನಾಳೆ ಬೆಳಗ್ಗೆ ಪೋಸ್ಟ್ ಮಾರ್ಟಮ್ ಮಾಡಬೇಕು. ಎಲ್ಲಾ ಸಹೋದ್ಯೋಗಿಗಳು ಮಾತಾಡಿದ್ದಾರೆ.

ವಿಜಯ್ ಗೆ ಅಪಘಾತ ಹೇಗಾಯಿತು? 

ನಾಳೆ ಅಂತಿಮ ದರ್ಶನ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. 10 ರಿಂದ 12 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು  ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದರು. 

 ಅಪಘಾತದಿಂದ ಗಾಯಗೊಂಡು ಚಿಕಿತ್ಸೆ  ಪಡೆದುಕೊಳ್ಳುತ್ತಿರುವ ನಟ ಸಂಚಾರಿ ವಿಜಯ್ ಪರಿಸ್ಥಿತಿ ಗಂಭೀರವಾಗಿದೆ ಎಂಬ ವಿಚಾರವನ್ನು ಡಿಸಿಎಂ ಅಶ್ವತ್ಥ ನಾರಾಯಣ ಸಹ ತಿಳಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್