ರಾಕಿಂಗ್ ಸ್ಟಾರ್ ಯಶ್ ಪರ್ಸನಲ್ ಗುಟ್ಟು ರಿವೀಲ್; ಕೆಜಿಎಫ್ ರಾಕಿ ಭಾಯ್ ಲಕ್ಕಿ ನಂಬರ್ ಇದೇನಾ?

By Shriram Bhat  |  First Published Aug 8, 2024, 12:05 PM IST

ಮೊಗ್ಗಿನ ಮನಸು ಮೂಲಕ ಕನ್ನಡಿಗರ ಹೃದಯ ಗೆದ್ದು, ಕೆ.ಜಿ.ಎಫ್ ಮೂಲಕ ಭಾರತದ ಅಸಂಖ್ಯಾತ ಜನರನ್ನು ಬೆರಗಾಗಿಸಿದ ಸ್ಯಾಂಡಲ್​ವುಡ್​​ನ ಈ ಲಕ್ಕಿ ಯಶ್​ಗೆ ಲಕ್ಕಿ ನಂಬರ್ ಯಾವುದು? ಆ ಸಂಖ್ಯೆಗೂ ಯಶ್​​ಗೂ ಇದೆ ವಿಶೇಷವಾದ ನಂಟು.,, ಅದ್ಯಾವುದು?


ಸೆಲೆಬ್ರಿಟಿಗಳ ಲೈಫ್​ ಬಗ್ಗೆ ತಿಳಿದುಕೊಳ್ಳೋ ಆಸೆ ಅವರ ಫಾಲೋರ್ಸ್​​ಗೆ ಸ್ವಲ್ಪ ಹೆಚ್ಚೇ ಇರುತ್ತೆ. ತೆರೆ ಮೇಲೆ ಹೀರೋ ಆಗಿ ಮಿಂಚೋ ಸ್ಟಾರ್​ ರಿಯಲ್​ ಲೈಫ್​​ನಲ್ಲಿ ಹೇಗಿರುತ್ತಾರೆ ಅನ್ನೋ ಕುತೂಹಲ ಅವರ ಅಭಿಮಾನಿಗಳ ಮನದಾಳದಲ್ಲಿ ಹುದುಗಿರುತ್ತೆ. ಈಗ ರಾಕಿಂಗ್ ಸ್ಟಾರ್ ಯಶ್​​​ (Rocking Star Yash) ಬಗ್ಗೆ ಅವರ ಪರ್ಸನಲ್ ವಿಷಯವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆ ಪರ್ಸನಲ್ ವಿಚಾರವನ್ನ ಬಯಲಿಗೆಳೆದಿದ್ದು ಕೂಡ ಅವರ ಅಭಿಮಾನಿಗಳೇ ಅನ್ನೋದು ಮತ್ತೊಂದು ವಿಶೇಷ. 

ಆ ಬಗ್ಗೆ ಸ್ಪೆಷಲ್ ಸ್ಟೋರಿ ಇಲ್ಲಿದೆ ನೋಡಿ..ರಾಕಿಂಗ್ ಸ್ಟಾರ್​​ ಯಶ್​​​ರ ಪರ್ಸನಲ್ ಗುಟ್ಟು ರಿವೀಲ್.! 
ರಾಕಿಂಗ್ ಸ್ಟಾರ್​ ಯಶ್​ ಪರ್ಸನಲ್ ಲೈಫ್ ತೆರೆದ ಪುಸ್ತಕ. ಅದೆ ಬಗ್ಗೆ ಎಲ್ಲರಿಗು ಗೊತ್ತು. ಯಶ್ ಹೇಗೆ ಬೆಳೆದು ಬಂದ್ರು.? ಪಟ್ಟ ಶ್ರಮ ಎಂಥಾದ್ದು, ಮನೆ ವಿವಾದಗಳು, ಪ್ರೀತಿಸಿ ಮದುವೆ ಆಗಿದ್ದು, ಬಿಗ್ ಸ್ಟಾರ್ ಆಗಿ ಬೆಳೆದ ಮೇಲೆ ಯಶ್​ ಲೈಫ್​ ಸ್ಟೈಲ್ ಹೇಗಿದೆ.? ಆಸ್ತಿ ಎಷ್ಟಿದೆ ಅಲ್ಲವೂ ಅವರ ಫ್ಯಾನ್ಸ್​ಗೆ ಗೊತ್ತಿರೋ ವಿಚಾರ..? ಆದ್ರೆ ಈಗ ರಾಕಿ ಪರ್ಸನಲ್ ಒಂದು ರಿವೀಲ್ ಆಗಿದೆ. ಅದೇ ಎಂಟರ ಗುಟ್ಟು.. 

Tap to resize

Latest Videos

undefined

ಆ್ಯಂಕರ್​ ಅನುಶ್ರೀ ಮದುವೆಗೆ ಹುಡುಗನ ಹುಡುಕ್ತಿದಾರಂತೆ ಶಿವಣ್ಣ; ಮುಂದಿನ ವರ್ಷ ಮದುವೆ ಕನ್ಫರ್ಮ್‌!

ರಾಕಿಂಗ್ ಸ್ಟಾರ್ ಪಾಲಿನ ಲಕ್ಕಿ ನಂಬರ್ ಇದೇನಾ? ಟಾಕ್ಸಿಕ್​ ಹೀರೋಗೆ ಎಂಟರ ಜೊತೆಗಿನ ನಂಟೇನು.?
ಯಶ್​​ ಟಾಕ್ಸಿಕ್ ಸಿನಿಮಾ ಶೂಟಿಂಗ್​ ಮಾಡೋದಕ್ಕಾಗಿ ದೇವರ ಕೃಪೆ ಬೇಡಿ ಧರ್ಮಸ್ಥಳಕ್ಕೆ ಹೋಗಿ ಬಂದಿದ್ದಾರೆ. ಅಗಸ್ಟ್​ 8ರಿಂದ ಟಾಕ್ಸಿಕ್ ಶೂಟಿಂಗ್ ಶುರುವಾಗುತ್ತೆ. ಆದ್ರೆ ಈ ಆಗಸ್ಟ್ 8 ಅನ್ನೋದು ಈಗ ಯಶ್ ಅಭಿಮಾನಿ ಬಳಗದ ಹಾಟ್ ಟಾಪಿಕ್. ಯಾಕಂದ್ರೆ 8ನೇ ತಾರೀಖಿನಂದೇ ಯಶ್​ ಮತ್ತೆ ಬಣ್ಣ ಹಚ್ಚುತ್ತಿರೋದೇಕೆ.?ಈ ಎಂಟು ಯಶ್​​​​​​ ಪಾಲಿಗೆ ಲಕ್ಕಿ ನಂಬರಾ..? ಟಾಕ್ಸಿಕ್​ ಹೀರೋಗೆ ಎಂಟರ ಜೊತೆಗಿನ ನಂಟೇನು ಅಂತ ಹುಡುಕಿದ್ದಾರೆ ಯಶ್ ಫಾಲೋವರ್ಸ್​.. 

ಸ್ಯಾಂಡಲ್​ವುಡ್​ ಲಕ್ಕಿಯ ಲಕ್ಕಿ ನಂಬರ್​ 8, ಯಶ್‌ಗೂ 8ರ ಸಂಖ್ಯೆಗೂ ಇದೆ ವಿಶೇಷ ನಂಟು..!
ಮೊಗ್ಗಿನ ಮನಸು ಮೂಲಕ ಕನ್ನಡಿಗರ ಹೃದಯ ಗೆದ್ದು, ಕೆ.ಜಿ.ಎಫ್ ಮೂಲಕ ಭಾರತದ ಅಸಂಖ್ಯಾತ ಜನರನ್ನು ಬೆರಗಾಗಿಸಿದ ಸ್ಯಾಂಡಲ್​ವುಡ್​​ನ ಈ ಲಕ್ಕಿ ಯಶ್​ಗೆ ಲಕ್ಕಿ ನಂಬರ್​ 8. ಹೀಗಾಗೆ ಯಶ್​​ಗೂ  8ರ ಸಂಖ್ಯೆಗೂ ಇದೆ ವಿಶೇಷವಾದ ನಂಟು. ನಿಮಗೆ ಗೊತ್ತಿರಲಿ ಅಭಿಮಾನಿಗಳ ಆಗ್ರಹದ ಮೇರೆಗೆ ಯಶ್ ತಮ್ಮ 'ಟಾಕ್ಸಿಕ್' ಚಿತ್ರದ ಕುರಿತು ಕಳೆದ ವರ್ಷ ಡಿಸೆಂಬರ್ 08ರಂದು ಮಾಹಿತಿ ಹಂಚಿಕೊಂಡಿದ್ರು. 

ಪುನೀತ್ ಜೊತೆ ನಟಿಸಲು ರಾಘಣ್ಣ ಕೇಳಿದಾಗ ನಟ ದರ್ಶನ್ ಹೇಳಿದ್ದ ಮಾತು ಈಗ ವೈರಲ್!

ಇನ್ನು ಯಶ್ ಜನ್ಮ ದಿನಾಂಕ ಜನವರಿ 08. ಈಗ ಯಶ್ ಟಾಕ್ಸಿಕ್ ಶೂಟಿಂಗ್ ಶುರುಮಾಡುತ್ತಿರೋದು ಕೂಡ 08ನೇ ತಾರೀಖಿನಂದೇ. ಹೀಗಾಗಿ 08ರ ಸಂಖ್ಯೆಯಲ್ಲಿಯೇ ಯಶ್ ಗೆಲುವಿನ ಗುಟ್ಟು ಅಡಗಿದೆ ಅನ್ನೋ ಟಾಕ್ ಶುರುವಾಗಿದೆ. ಒಟ್ನಲ್ಲಿ ಕಾಯಿಸಿ, ಸತಾಯಿಸಿ ಕೊನೆಗೂ ಯಶ್ ತಮ್ಮ ಹೊಸ ಕನಸು 'ಟಾಕ್ಸಿಕ್' ಚಿತ್ರೀಕರಣವನ್ನ ನಾಳೆಯಿಂದ ಶುರು ಮಾಡುತ್ತಿದ್ದಾರೆ ಅನ್ನೋದೇ ಯಶ್​ ಫ್ಯಾನ್ಸ್​ಗೆ ಸದ್ಯಕ್ಕೆ ಸಿಕ್ಕಿರೋ ನೆಮ್ಮದಿ.

click me!