ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಪರೂಪದ ಕಲಾ ಆರಾಧಕ, ತಮ್ಮ ಸಹಜ ನಟನೆಯಿಂದಲೇ ಪ್ರೇಕ್ಷಕರನ್ನು ನಕ್ಕು ನಲಿಸುವ ವಿಶಿಷ್ಟ ನಟರ ಪೈಕಿ ರಂಗಾಯಣ ರಘು ಮೊದಲು ನಿಲ್ತಾರೆ.
ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಪರೂಪದ ಕಲಾ ಆರಾಧಕ, ತಮ್ಮ ಸಹಜ ನಟನೆಯಿಂದಲೇ ಪ್ರೇಕ್ಷಕರನ್ನು ನಕ್ಕು ನಲಿಸುವ ವಿಶಿಷ್ಟ ನಟರ ಪೈಕಿ ರಂಗಾಯಣ ರಘು ಮೊದಲು ನಿಲ್ತಾರೆ. ಪಾತ್ರಗಳಿಗೆ ತಕ್ಕಂತೆ ಅಭಿನಯ, ಕಾಲ ಕಾಲಕ್ಕೂ ಬದಲಾಗುತ್ತಾ ಇಂದಿಗೂ ಅದೇ ನಟನಾ ಎನರ್ಜಿ ಉಳಿಸಿಕೊಂಡಿರುವ ರಂಗಾಯಣ ರಘು, ಇಲ್ಲಿವರೆಗೂ ನಟಿಸಿದ ಪ್ರತಿ ಸಿನಿಮಾದಲ್ಲೂ ವಿಶೇಷ ಬಗೆಯ ಪಾತ್ರಗಳನ್ನು ಪೋಷಿಸುತ್ತಾ ಬಂದಿದ್ದಾರೆ. ಈ ಎಲ್ಲಾ ಪಾತ್ರಗಳು ವಿಶೇಷತೆಯಿಂದ ಕೂಡಿರುತ್ತದೆ ಅನ್ನೋದು ಮತ್ತೊಂದು ವಿಶೇಷತೆ..
ಈಗ ಅಂತಹ ನಿರೀಕ್ಷೆ ಹುಟ್ಟುಹಾಕಿರೋದು ಜಾಕ್ ಮಾಮಾ ಪಾತ್ರ. ಕೇಳೋದಿಕ್ಕೆ ಸಖತ್ ಮಜಾ ಅನಿಸುವ ಈ ಪಾತ್ರ ವೀಲ್ ಚೇರ್ ರೋಮಿಯೋ ಚಿತ್ರದ್ದು. ನಿರೀಕ್ಷೆಯ ಒಡ್ಡೋಲಗದ ನಡುವೆ ಇದೇ 27ರಂದು ತೆರೆಗೆ ಬರ್ತಿರುವ ವೀಲ್ ಚೇರ್ ರೋಮಿಯೋದಲ್ಲಿ ರಂಗಾಯಣ ರಘು ಜಾಕ್ ಮಾಮಾ ಎಂಬ ವಿಭಿನ್ನ ಪಾತ್ರವೊಂದನ್ನು ಮಾಡಿದ್ದಾರೆ. ನಿರ್ದೇಶಕ ನಟರಾಜ್, ಸಿನಿಮಾದ ಕಥೆ ಬರೆಯುವಾಗಲೇ ರಂಗಾಯಣ ರಘು ಅವರನ್ನು ತಲೆಯಲ್ಲಿ ಇರಿಸಿಕೊಂಡು ಜಾಕ್ ಮಾಮಾ ಪಾತ್ರ ಸೃಷ್ಟಿಸಿದ್ದಾರೆ. ನಟರಾಜ್ ಸೃಷ್ಟಿಸಿದ ಪಾತ್ರವನ್ನು ರಂಗಾಯಣ ರಘು ಅಷ್ಟೇ ಅದ್ಭುತವಾಗಿ ಪೋಷಿಸಿದ್ದಾರೆ ಅನ್ನೋದು ಟ್ರೇಲರ್ ಮೂಲಕ ಈಗಾಗಲೇ ಅನಾವರಣಗೊಂಡಿದೆ.
ಜಾಕ್ ಮಾಮಾ ರಂಗಾಯಣ ರಘು ಅವರ ಪಾಲಿಗೆ ಸಿಕ್ಕಿರುವ ವಿಶೇಷ ಪಾತ್ರ. ಇಂತಹ ಪಾತ್ರ ಮಾಡಿರುವ ತೃಪ್ತಿ ರಂಗಾಯಣ ರಘು ಅವರಿಗೂ ಇದೆ. ಈ ಪಾತ್ರ ಸಂಪೂರ್ಣವಾಗಿ ಹೇಗೆ ಇರಲಿ ಅನ್ನೋದ್ರ ಕಂಪ್ಲೀಟ್ ಪಿಕ್ಚರ್ ಇದೇ ತಿಂಗಳ 27ಕ್ಕೆ ಗೊತ್ತಾಗಲಿದೆ. ಅಂದಹಾಗೇ ವೀಲ್ ಚೇರ್ ರೋಮಿಯೋ ಸಿನಿಮಾವನ್ನು ಅಗಸ್ತ್ಯ ಬ್ಯಾನರ್ ಅಡಿಯಲ್ಲಿ ತಿಮ್ಮಪ್ಪ ವೆಂಕಟಾಚಲಯ್ಯ ನಿರ್ಮಾಣ ಮಾಡಿದ್ದು, ಮಯೂರಿ-ರಾಮ್ ಚೇತನ್ ನಾಯಕಿ-ನಾಯಕನಾಗಿ ಅಭಿನಯಿಸಿದ್ದಾರೆ.