ಬಾಲ್ಯದಲ್ಲೇ ನಾನು ಸಿನೆಮಾದ ಕಡೆ ಆಕರ್ಷಿತನಾಗಿದ್ದೆ: ಯುವ ರಾಜ್‌ಕುಮಾರ್‌

Published : May 25, 2022, 03:46 PM IST
ಬಾಲ್ಯದಲ್ಲೇ ನಾನು ಸಿನೆಮಾದ ಕಡೆ ಆಕರ್ಷಿತನಾಗಿದ್ದೆ: ಯುವ ರಾಜ್‌ಕುಮಾರ್‌

ಸಾರಾಂಶ

ದೊಡ್ಡ ಪ್ರಾಜೆಕ್ಟ್‌ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಯುವ ರಾಜ್‌ಕುಮಾರ್. ಮುಂಬೈನಲ್ಲಿ ನಟನೆ ತರಬೇತಿ ಪಡೆದ ಯುವ...  

ಕನ್ನಡ ಚಿತ್ರರಂಗದ ವರನಟ ಡಾ. ರಾಜ್‌ಕುಮಾರ್ (Dr Rajkumar) ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಪುತ್ರನಾಗಿರುವ ಯುವ ರಾಜ್‌ಕುಮಾರ್‌ (Yuva Rajkumar) ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವುದು ಎಲ್ಲರಿಗೂ ಗೊತ್ತಿದೆ ಆದರೆ ಯುವ ಯಾವ ಸಿನಿಮಾ ಮೊದಲು ಬೆಳ್ಳಿ ಪರದೆ ಮೇಲೆ ಬಂದು ಡೆಬ್ಯೂ ಆಗಲಿದೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಯುವ ಸಹೋದರಿ ಧನ್ಯರಾಮ್‌ಕುಮಾರ್ (Dhanya) ಮತ್ತು ಧಿರೇನ್‌ ರಾಮ್‌ಕುಮಾರ್‌, ವಿನಯ್ (Vinay) ರಾಜ್‌ಕುಮಾರ್‌ ಕೂಡ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ (Niveditha) ನಿರ್ಮಾಪಕಿಯಾಗಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. 

ಹೀಗೆ ಸಂಪೂರ್ಣ ಕುಟುಂಬ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದ ನಂತರ ಅಪ್ಪು ಕೆಲವೊಂದು ಗುಣಗಳನ್ನು ಯುವ ರಾಜ್‌ನಲ್ಲಿ ನೋಡಬಹುದು ಎಂದು ಅಭಿಮಾನಿಗಳು ಹೇಳುವುದನ್ನು ಕೇಳಿದ್ದೀವಿ. ಅಲ್ಲದೆ ಅಪ್ಪು ಒಪ್ಪಿಕೊಂಡಿದ್ದ ಕೊನೆ ಸಿನಿಮಾ ಇದೀಗ ಯುವ ಪಾಲಾಗಿದೆ. ಅಪ್ಪು ಚಿಕ್ಕಪ್ಪ ಒಪ್ಪಿಕೊಂಡ ಕಥೆಯಲ್ಲಿ ನಟಿಸುತ್ತಿರುವುದಕ್ಕೆ ಮಿಕ್ಸಡ್‌ ಫೀಲಿಂಗ್ ವ್ಯಕ್ತ ಪಡಿಸಿದ್ದರು. ಸಂತೋಷ್ ಆನಂದ್‌ರಾಮ್‌ ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ಯುವ ರಾಜ್‌ನ ಪಾತ್ರದ ಬಗ್ಗೆ ಸುಳಿವು ಕೊಟ್ಟಿಲ್ಲ. 

ಯುವರಾಜ್ ಕುಮಾರ್ ಎದುರು ತೊಡೆತಟ್ಟಲಿದ್ದಾರೆ ಡಾಲಿ ಧನಂಜಯ್?

ಅಭಿಮಾನಿಗಳ ಪ್ರೀತಿ:

'ನಾನು ಸಿನಿಮಾರಂಗಕ್ಕೆ ಕಾಲಿಟ್ಟ ಆರಂಭದಿಂದಲ್ಲೂ ಅಭಿಮಾನಿಗಳು ಕೊಡುತ್ತಿರುವ ಪ್ರೀತಿ ಅಪಾರ. ನನ್ನ ತಾತ ಡಾ.ರಾಜ್‌ಕುಮಾರ್ ಮತ್ತು ಚಿಕ್ಕಪ್ಪ ಪುನೀತ್‌ ರಾಜ್‌ಕುಮಾರ್‌ ಅವರಿಂದ ಜನರು ನಮ್ಮ ಕುಟುಂಬದ ಮೇಲೆ ಅಪಾರ ಗೌರವ ಹೊಂದಿದ್ದಾರೆ ಹೀಗಾಗಿ ಅದೆಲ್ಲವೂ ನನಗೆ ತುಂಬಾನೇ ಸ್ಪೆಷಲ್ ಆಗುತ್ತದೆ. ನಮ್ಮಿಂದ ಏನು ನಿರೀಕ್ಷೆ ಮಾಡುತ್ತಾರೆ ಅದನ್ನು ನಾನು ಈಡೇರಿಸಬಹುದು  ಎಂದು ಭಾವಿಸಿರುವೆ' ಎಂದಿದ್ದಾರೆ  ಟೈಮ್ಸ್‌ ಸಂದರ್ಶನದಲ್ಲಿ ಯುವ ರಾಜ್‌ಕುಮಾರ್ ಮಾತನಾಡಿದ್ದಾರೆ. 

ನಿರೀಕ್ಷೆ ಹೇಗಿದೆ:

'ಅಭಿಮಾನಿಗಳು, ನಿರ್ದೇಶಕರು ಮತ್ತು ನಿರ್ಮಾಪಕರ ನಿರೀಕ್ಷೆಗೆ ನಾವು ಮ್ಯಾಚ್ ಮಾಡಬೇಕಿದೆ. ಪ್ರತಿಯೊಂದು ಸಿನಿಮಾ ಮಾಡುವಾಗಲ್ಲೂ ಹೆಗಲೆ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ. ನಮ್ಮಿಂದ ಆಗುವ ಎಲ್ಲಾ ಬೆಸ್ಟ್‌ಗಳನ್ನು ಸಿನಿಮಾದ ಮೇಲೆ ಹಾಕುತ್ತಿದ್ದೀವಿ. ಸದ್ಯಕ್ಕೆ ಚಿತ್ರ ಪೋಸ್ಟ್‌- ಪ್ರೊಡಕ್ಷನ್‌ ಸ್ಟೇಜ್‌ನಲ್ಲಿ ಇದೆ' ಎಂದು ಯುವ ರಾಜ್‌ ಹೇಳಿದ್ದಾರೆ.

ಸಿನಿಮಾ ನಂಟು:

ಸಿನಿಮಾ ವರ್ಕ್‌ಶಾಪ್‌ ಮತ್ತು ಇನ್ನಿತ್ತರ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಯುವ ರಾಜ್‌ಕುಮಾರ್ ಸಿನಿಮಾ ಜೊತೆಗಿರುವ ನಂಟಿನ ಬಗ್ಗೆ ಹೇಳಿದ್ದಾರೆ. 'ವರ್ಕ್‌ಶಾಪ್‌ ಹೊರತು ಪಡಿಸಿ ಹೆಚ್ಚಿನ ಮಾಹಿತಿ ಹಂಚಿಕೊಂಡರೆ ಇಡೀ ಕಥೆ ನಿಮಗೆ ಗೊತ್ತಾಗುತ್ತದೆ. ಆದರೆ ನಾನು ಯಾವಾಗಲೂ ನಟನೆಯನ್ನೇ ಮಾಡಬೇಕೆಂದು ನನಗೆ ಮೊದಲೇ ತಿಳಿದಿತ್ತು. ನಾನು ಬಾಲ್ಯದಲ್ಲಿ ಸಿನಿಮಾ ಸೆಟ್‌ಗಳಿಗೆ ಭೇಟಿ ನೀಡುತ್ತಾ ಬೆಳೆದವನು ಮತ್ತು ಅವುಗಳಿಂದ ಆಕರ್ಷಿತನಾಗಿದ್ದೆ, ಆದ್ದರಿಂದ ಇದು ಸಹಜ. ನಾನು ಮುಂಬೈನಲ್ಲಿ ಒಂದು ವರ್ಷ  ನಟನಾ ತರಬೇತಿ ಪಡೆದಿದ್ದೇನೆ ಮತ್ತು ನಾನು ಬೆಂಗಳೂರಿಗೆ ಮರಳಿದ ಬಳಿಕ ನನ್ನ ಕೌಶಲ್ಯಗಳನ್ನು ಹೆಚ್ಚಿಸಿಕೊಂಡಿದ್ದೇನೆ'  ಎಂದಿದ್ದಾರೆ ಯುವ ರಾಜ್‌ಕುಮಾರ್.

ಚಿಕ್ಕಪ್ಪ ಅಪ್ಪುಗಾಗಿ ಸಿದ್ಧವಾಗಿದ್ಧ ಕಥೆಯಲ್ಲಿ ಯುವರಾಜ್ ಕುಮಾರ್...!

ಯುವ ಗಾಯನ:

ರಾಜ್‌ಕುಮಾರ್ ಕುಟುಂಬದಿಂದ ಚಿತ್ರರಂಗಕ್ಕೆ ಬಂದವರು ಒಮ್ಮೆಯಾದರೂ ಹಾಡುವ ಪ್ರಯತ್ನ ಮಾಡಿರುತ್ತಾರೆ. 'ನಾನು ನಾನು ವೃತ್ತಿಪರ ಗಾಯಕನಲ್ಲ, ಇಷ್ಟು ಮಾತ್ರ ಧೈರ್ಯವಾಗಿ ಹೇಳಬಹುದು ಆದರೆ ಕುಟುಂಬದ ಕಾರ್ಯಕ್ರಮಗಳಲ್ಲಿ ನಾವೆಲ್ಲರೂ ಸೇರಿಕೊಂಡು ಹಾಡುತ್ತೀವಿ' ಎಂದು ಯುವ ಹೇಳಿದ್ದಾರೆ. ಯುವ ಎರಡು ಮೂರು ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿದೆ. 'ನನ್ನ ಸಿನಿಮಾಗಳು ಯಾವಾಗ ರಿಲೀಸ್ ಅಗುತ್ತೆ ಗೊತ್ತಿಲ್ಲ ಆದರೆ ನಾವು ವರ್ಕ್‌ಶಾಪ್‌, ಕಾಸ್ಟಿಂಗ್‌ ಮತ್ತು ಪ್ರೊಡಕ್ಷನ್‌ ಕೆಲಸಗಳಲ್ಲಿ ಬ್ಯುಸಿಯಾಗಿದ್ದೀವಿ. ಶೀಘ್ರದಲ್ಲಿ ಮುಹೂರ್ತ ನಡೆಸಿ ಸಿನಿಮಾ ಲಾಂಚ್ ಮಾಡುವ ಪ್ಲ್ಯಾನ್‌ ಇದೆ. ನನ್ನ ಹಿಂದಿನ ಸಿನಿಮಾ YR01 ಕೂಡ ರೆಡಿಯಾಗಿದೆ. ಸದ್ಯಕ್ಕೆ ನನ್ನ ಡೆಬ್ಯೂ ಸಿನಿಮಾ ಮೇಲೆ ಗಮನ ಹರಿಸುತ್ತಿರುವೆ. ಈ ಸಿನಿಮಾ ಜನರಿಗೆ ಇಂಪ್ರೆಸ್‌ ಮಾಡಿದ ನಂತರ ನಾನು ಮುಂದಿನ ಪ್ರಾಜೆಕ್ಟ್‌ಗೆ ಕಾಲಿಡಬಹುದು' ಎಂದು ಯುವ ಮಾತು ಮುಗಿಸಿದ್ದಾರೆ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?