ನಮ್ಮ ಅಭಿಮಾನಿಗಳು ನಮ್ಮದೇ ಪ್ರತಿಬಿಂಬ; ಕಿಚ್ಚ ಸುದೀಪ್ ಮಾತಿಗೆ ಬಿತ್ತು ಭಾರೀ ಚಪ್ಪಾಳೆ!

By Shriram Bhat  |  First Published Sep 2, 2024, 3:25 PM IST

ಯಾವತ್ತೂ ನಾವು ಸಂಪಾದನೆ ಮಾಡಿರೋ ನಮ್ಮ ಹೆಸರಿಗೆ ಕಳಂಕ ತರೋ ಯಾವ ಕೆಲಸನೂ ಇವ್ರು ಮಾಡಿಲ್ಲ, ಮಾಡೊದೂ ಇಲ್ಲ. ಅದು ಬಹಳ ಮುಖ್ಯ ಆಗುತ್ತೆ.. ಇದನ್ನ ಯಾಕೆ ನಾನು ಪದೇ ಪದೇ ಹೇಳ್ತೀನಿ ಅಂದ್ರೆ, ಸಿನಿಮಾ ನಾವೆಲ್ಲರೂ ಮಾಡ್ತೀವಿ....


ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ಇಂದು (02 ಸೆಪ್ಟೆಂಬರ್) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ಗೊತ್ತೇ ಇದೆ. ಜಯನಗರದ ಗ್ರೌಂಡ್‌ನಲ್ಲಿ ಇಂದು ತಮ್ಮ ಬರ್ತ್‌ಡೇ ಸೆಲೆಬ್ರೇಶನ್‌ ಮಾಡಿ, ಅಲ್ಲಿ ಸೇರಿದ್ದ ಅಭಿಮಾನಿಗಳ ಮುಂದೆ ಅವರನ್ನು ಹೊಗಳಿ ನಟ ಸುದೀಪ್ ಮಾತನ್ನಾಡಿದ್ದಾರೆ. ಅಭಿಮಾನಿಗಳ ಶಿಸ್ತಿನ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿ ನಟ ಸುದೀಪ್ ಮಾತನ್ನಾಡಿದ್ದಾರೆ. 

ನಟ ಸುದೀಪ್ 'ಮೇಡಂ, ನೀವು ಹೇಳ್ತಾ ಇದ್ರಿ, ನಿಮ್ ಡಿಸಿಪ್ಲೇನ್ ನೋಡ್ಬಿಟ್ಟು ಅದ್ರಲ್ಲಿರೋ ಒಂದ್ ಪರ್ಸಂಟ್ ಅಂತ.. ಇಲ್ಲ ಮೇಡಂ, ಅವ್ರು ತೋರಿಸುವಂತಹ ಪ್ರೀತಿ, ಅದ್ರಲ್ಲಿರೋ ವ್ಯಕ್ತಿತ್ವದ ತೂಕದಲ್ಲಿ ಒಂದ್ ಪರ್ಸಂಟ್‌ ಇರೋದ್ರಿಂದ ನಾನು ಇಲ್ಲದೀನಿ.. ಅಭಿಮಾನಿಗಳು ನಮ್ಮ ಪ್ರತಿಬಿಂಬ.. ಇಲ್ಲಿ ನಾವು ಹೋದಲ್ಲೆಲ್ಲಾ ತಲೆ ಎತ್ಕೊಂಡು ಓಡಾಡೋಕೆ ಆಗುತ್ತೆ ಅಂದ್ರೆ ನನ್ ಅಭಿಮಾನಿಗಳೇ ಕಾರಣ. 

Tap to resize

Latest Videos

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್‌ ಹುಟ್ಟುಹಬ್ಬ; ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ!

ಯಾವತ್ತೂ ನಾವು ಸಂಪಾದನೆ ಮಾಡಿರೋ ನಮ್ಮ ಹೆಸರಿಗೆ ಕಳಂಕ ತರೋ ಯಾವ ಕೆಲಸನೂ ಇವ್ರು ಮಾಡಿಲ್ಲ, ಮಾಡೊದೂ ಇಲ್ಲ. ಅದು ಬಹಳ ಮುಖ್ಯ ಆಗುತ್ತೆ.. ಇದನ್ನ ಯಾಕೆ ನಾನು ಪದೇ ಪದೇ ಹೇಳ್ತೀನಿ ಅಂದ್ರೆ, ಸಿನಿಮಾ ನಾವೆಲ್ಲರೂ ಮಾಡ್ತೀವಿ.. ಸಕ್ಸಸ್ ನಾನೊಬ್ಬನೇ ಅಲ್ಲ, ಕನ್ನಡ ಚಿತ್ರರಂಗದಲ್ಲಿ ಇರೋ ದೊಡ್ಡ ಕಲಾವಿದರು, ಮೊದಲಿದ್ದ ಕಲಾವಿದರು, ಈಗ ಬಂದಿರುವಂತಹ ಕಲಾವಿದರು, ಪ್ರತಿಯೊಬ್ಬರೂ ದೊಡ್ಡ ದೊಡ್ಡ ಸಿನಿಮಾಗಳನ್ನು ಕೊಡ್ತಾರೆ, ಸಕ್ಸಸ್‌ಫುಲ್ ನಾಯಕನಟರು ಆಗ್ತಾರೆ. 

ಆದ್ರೆ, ವ್ಯಕ್ತಿತ್ವದಲ್ಲಿ ನಾವು ದೊಡ್ಡವ್ರಾಗ್ಬೇಕಾದ್ರೆ ಬರೀ ಸಿನಿಮಾ ಮಾತ್ರ ಸಾಕಾಗಲ್ಲ. ನನ್ನ ಅಕ್ಕಪಕ್ಕ ಇರೋ ಸ್ನೇಹಿತರು, ನನ್ನ ಕುಟುಂಬ ಮತ್ತು ಪ್ರತಿಯೊಬ್ಬರೂ, ನಾನು ತಪ್ಪಿದಾಗಲೆಲ್ಲ ಅಲ್ಲಲ್ಲೇ ತಿದ್ದಿದ ನಮ್ಮ ಮಾಧ್ಯಮದ ಮಿತ್ರರು, ಇವ್ರೆಲ್ಲರೂ ನನ್ನ ಜೀವನದಲ್ಲಿ ಚೆನ್ನಾಗಿದೀನಿ ಮೇಡಂ. ಅದಕ್ಕೇ ನಾನು ಚೆನ್ನಾಗಿದೀನಿ.. ಮೊದಲನೆಯದಾಗಿ ನನ್ ಮನೆ ಹತ್ರ ನಿಮ್ಮನ್ನು ಭೇಟಿ ಮಾಡೋದಕ್ಕೆ ಆಗಿಲ್ಲ. 

ಕಾರಣ, ನನ್ನ ತಂದೆ-ತಾಯಿಗೆ 85-75 ವರ್ಷ ವಯಸ್ಸಾಗಿದೆ. ಹಾಗೇ ನಮ್ಮ ಅಕ್ಕಪಕ್ಕದ ಮನೆಯವ್ರನ್ನೂ ತಲೆಲ್ಲಿ ಇಟ್ಕೊಂಡಾಗ, ಹೀಗೆ ಮಾಡೋದು ಬೆಟರ್ ಅನ್ನಿಸ್ತು.. ಲಾಸ್ಟ್ ಟೈಮ್ ನನ್ನ ಹುಟ್ಟುಹಬ್ಬ ಚೆನ್ನಾಗಿಯೇ ಆದ್ರೂ ಆ ಬ್ಯಾರಿಕೇಡ್‌ಗಳು ಒಡೆದು ಎಲ್ಲಾ ತೊಂದ್ರೆಗಳಾದಾಗ, ನನ್ನ ಪೊಲೀಸ್ ಸಿಬ್ಬಂಧಿ ಮಿತ್ರರಿಗಾದ ತೊಂದರೆ ನೋಡಿದಾಗ, ಎಲ್ಲರೂ ಹೇಳಿದ್ರು, ಮನೆ ಹತ್ರ ಬೇಡ. 

ಶೀಘ್ರದಲ್ಲೇ 'ಸುಬ್ರಹ್ಮಣ್ಯ' ಪ್ರಪಂಚದ ಪರಿಚಯ; ಇದು ನಟ ರವಿಶಂಕರ್ ಪುತ್ರ ಅದ್ವೆ ಸಿನಿಮಾ!

ಅದಕ್ಕೋಸ್ಕರ ಇಲ್ಲಿಗೆ ಬಂದಿದೀನಿ.. ತಮ್ಮನ್ನ ಭೇಟಿ ಮಾಡಬಾರದು ಅಂತಲ್ಲ, ಈ ಕ್ಷಮೆ ನನ್ನ ಮೇಲಿರಲಿ, ಬಟ್, ಇದನ್ನ ಸಾಧ್ಯ ಮಾಡೋದಕ್ಕೆ ಕೆಲಸ ಮಾಡಿದ ಎಲ್ಲರಿಗೂ ನಾನು ಕೃತಜ್ಞತೆ ಅರ್ಪಿಸುತ್ತಿದ್ದೇನೆ' ಎಂದಿದ್ದಾರೆ ಕನ್ನಡದ ಪ್ಯಾನ್ ಇಂಡಿಯಾ ಖ್ಯಾತಿಯ ನಟ ಸುದೀಪ್. ನಟ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಇಂದು ಅಲ್ಲಿ ಬಹಳಷ್ಟು ಅಭಿಮಾನಿಗಳು ಸೇರಿದ್ದರು. 

click me!