ಬಾರು, ದೇವರ ತಾಣದಲ್ಲಿ ನಡೆಯುವ ಎರಡು ಕಾಲದ ಕತೆ: ಸಂದೇಶ್ ಶೆಟ್ಟಿ ಆಜ್ರಿ ಹೇಳೋದೇನು?

Published : Nov 04, 2026, 03:09 PM IST
Sangeetha Bar and Restaurant

ಸಾರಾಂಶ

ನಟ ಕೋಮಲ್‌, ಮೇಘನಾ ರಾಜ್‌ ಮತ್ತು ಅನುಷಾ ರೈ ಅಭಿನಯದ ‘ಸಂಗೀತ ಬಾರ್ ಆಂಡ್ ರೆಸ್ಟೋರೆಂಟ್’ ಚಿತ್ರದ ‘60 ಎಂಎಲ್’ ಟೀಸರ್ ಅನ್ನು ನಟ ಜಗ್ಗೇಶ್ ಬಿಡುಗಡೆ ಮಾಡಿದ್ದಾರೆ. ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ..

ಕೋಮಲ್‌, ಮೇಘನಾ ರಾಜ್‌, ಅನುಷಾ ರೈ ನಟನೆಯ ‘ಸಂಗೀತ ಬಾರ್‌ ಆಂಡ್‌ ರೆಸ್ಟೋರೆಂಟ್‌’ ಚಿತ್ರದ ‘60 ಎಂಎಲ್‌’ ಹೆಸರಿನ ಟೀಸರ್‌ ಅನ್ನು ಜಗ್ಗೇಶ್‌ ಬಿಡುಗಡೆ ಮಾಡಿದರು. ಚಿತ್ರೀಕರಣ ಮುಗಿಸಿರುವ ಈ ಚಿತ್ರವನ್ನು ಸಂದೇಶ್‌ ಶೆಟ್ಟಿ ಆಜ್ರಿ ನಿರ್ದೇಶಿಸಿದ್ದು, ವಿಕಾಸ್‌ ಎಸ್‌. ಶೆಟ್ಟಿ ನಿರ್ಮಿಸಿದ್ದಾರೆ.

ಜಗ್ಗೇಶ್‌, ‘ಈ ಸಿನಿಮಾದ ಕೆಲವು ದೃಶ್ಯಗಳನ್ನು ನಾನು ನೋಡಿದ್ದೇನೆ. ನಿರ್ದೇಶಕ ಸಂದೇಶ್‌ ಶೆಟ್ಟಿ ಮತ್ತು ತಂಡ ಸಾಕಷ್ಟು ಪರಿಶ್ರಮ ಹಾಕಿ ಸಿನಿಮಾ ಮಾಡಿರುವುದು ಕಾಣುತ್ತದೆ’ ಎಂದರು. ಕೋಮಲ್‌, ‘ನಾನು ಆಸ್ಥಾನವೊಂದರ ವರ್ಣಚಿತ್ರ ಕಲಾವಿದನಾಗಿ ನಟಿಸಿದ್ದೇನೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ’ ಎಂದರು.

ಸಂದೇಶ್‌ ಶೆಟ್ಟಿ ಆಜ್ರಿ, ‘ಎರಡು ಕಾಲಘಟ್ಟದ ಕತೆಯನ್ನು ಹೊಂದಿರುವ ಸಿನಿಮಾ. ಈ ಸಿನಿಮಾದಲ್ಲಿ ಎರಡು ಟೈಟಲ್‌ಗಳಿವೆ. ಅದಕ್ಕೆ ಕಾರಣ ಈ ಚಿತ್ರದ ಕತೆ. ಚಿತ್ರದ ಮೊದಲಾರ್ಧ ಬಾರ್‌ನಲ್ಲಿ ಶುರುವಾದರೆ, ದ್ವಿತೀಯಾರ್ಧ ದೇವರ ತಾಣದಲ್ಲಿ ಶುರುವಾಗಿ ಅಲ್ಲೇ ಮುಗಿಯುತ್ತದೆ. ಬಾರ್‌ ಮತ್ತು ದೇವರ ತಾಣದ ಕತೆ’ ಎಂದರು. ಮೇಘನಾ ರಾಜ್‌ ರಾಣಿಯಾಗಿ ಕಾಣಿಸಿಕೊಂಡಿದ್ದಾರೆ. ವಜ್ರಧೀರ್‌ ಜೈನ್‌, ಸಂದೇಶ್‌ ಶೆಟ್ಟಿ, ಪ್ರಕಾಶ್‌ ತುಮ್ಮಿನಾಡು, ರಾಘು ರಾಮನಕೊಪ್ಪ, ಉತ್ಸವ್‌, ಕಾರ್ತಿಕ್‌ ರಾವ್‌ ನಟಿಸಿದ್ದಾರೆ.

ಕೋಮಲ್‌ಗೆ ಡಬಲ್ ಶೇಡ್

ಚಿತ್ರದಲ್ಲಿ ಕೋಮಲ್ ಕುಮಾರ್ ಎರಡು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಪಾತ್ರದಲ್ಲಿ ಆಸ್ಥಾನದ ವರ್ಣಚಿತ್ರ ಕಲಾವಿದನಾಗಿ ಕಾಣಿಸಿಕೊಳ್ಳುವ ಅವರು, ಮತ್ತೊಂದು ಪಾತ್ರದಲ್ಲಿ ಸಿನಿಮಾ ನಿರ್ದೇಶಕನ ಪಾತ್ರ ನಿರ್ವಹಿಸಿದ್ದಾರೆ. ಸುಮಾರು 30 ವರ್ಷಗಳಿಂದ ಚಿತ್ರರಂಗದಲ್ಲಿರುವ ಕೋಮಲ್, ಚಿತ್ರದ ಬಗ್ಗೆ ಮಾತನಾಡುತ್ತಾ, ನಿರ್ದೇಶಕ ಸಂದೇಶ್ ಶೆಟ್ಟಿ ಕಡಿಮೆ ಬಜೆಟ್‌ನಲ್ಲಿಯೇ ಏಳು ವಿಭಿನ್ನ ಸೆಟ್‌ಗಳನ್ನು ನಿರ್ಮಿಸಿರುವುದು ತಮ್ಮ ಗಮನ ಸೆಳೆದಿದೆ ಎಂದರು. ಚಿತ್ರತಂಡ ಸಿನಿಮಾವನ್ನು ಬಹಳ ಇಷ್ಟಪಟ್ಟು ಮಾಡಿದ್ದು, ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಡುಗಡೆ ಹೊತ್ತಲ್ಲಿ 'ರಾಮಾಯಣ' ಚಿತ್ರತಂಡಕ್ಕೆ ನೆಮ್ಮದಿ; ಬಾಂಬೆ ಹೈಕೋರ್ಟ್‌ನಿಂದ ಮಹತ್ವದ ಮಧ್ಯಂತರ ಆದೇಶ ಜಾರಿ
ರಚಿತಾ ರಾಮ್ ಜೊತೆ 'ಸಿದ್ಲಿಂಗು' ವಿಜಯಪ್ರಸಾದ್‌ ಹೊಸ ಸಿನಿಮಾ; ಡಬಲ್ ಮೀನಿಂಗ್ ಇಲ್ಲ, ಆದ್ರೆ ಅದೊಂದು ಫೀಲ್ ಇದೆ!