ತಿಪಟೂರಿನಲ್ಲಿ ನರಸಿಂಹರಾಜು ಸ್ಮಾರಕ: ನಟ ಜಗ್ಗೇಶ್ ಸಾಥ್!

By Suvarna NewsFirst Published Jan 30, 2020, 3:18 PM IST
Highlights

ಕನ್ನಡ ಚಿತ್ರರಂಗ ಮೀರು ಹಾಸ್ಯ ನಟರಲ್ಲಿ ಒಬ್ಬರಾದ ನರಸಿಂಹ ರಾಜು ಅವರ ಸ್ಮಾರಕ ನಿರ್ಮಿಸಲು ಕಾಮಿಡಿ ಕಿಂಗ್ ಜಗ್ಗೇಶ್‌ ಸಾಥ್‌ ನೀಡಲು ಇಚ್ಛಿಸಿದ್ದಾರೆ.
 

250ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ಕನ್ನಡ ಸಿನಿ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದ ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಅವರು ಜುಲೈ 11,1979ರಲ್ಲಿ ಹೃದಯಾಘಾತದಿಂದ ವಿಧಿವಶರಾದರು. 'ಮಾತು ತಪ್ಪದ ಮಗ' ,'ಕಿಲಾಡಿ ಕಿಟ್ಟಿ', 'ಕಿಟ್ಟು ಪುಟ್ಟು' ಹಾಗೇ ಅನೇಕ ಚಿತ್ರಗಳನ್ನು ನೋಡಿದಾಗ ಈಗಲೂ ಅವರು ಕಣ್ಣೆದುರು ಬಂದಂತಾಗುತ್ತದೆ. 

ಹಿಂದೊಮ್ಮೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟ ಜಗ್ಗೇಶ್‌ ನರಸಿಂಹ ರಾಜು ಅವರ ಸ್ಮಾರಕ ನಿರ್ಮಾಣಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದರು. ಟ್ಟಿಟರ್ ಖಾತೆಯಲ್ಲಿ ಜಯಕುಮಾರ್‌ 'ಜಗ್ಗೇಶ್, ಕರ್ನಾಟಕ ಜನರ ಹೃದಯ ಗೆದ್ದ ಹಾಸ್ಯ ನಟ ದಿ.ನರಸಿಂಹ ರಾಜು ಅವರ ಹೆಸರಲ್ಲಿ ಅವರ ನೆನಪು ಉಳಿಸಲು ತಿಪಟೂರಿನಲ್ಲಿ ಸ್ಮಾರಕ ಮಾಡಲಾಗುವುದು, ಎಂದು ಒಂದು ಕಾರ್ಯಕ್ರಮದಲ್ಲಿ ಅವರ ಶ್ರೀಮತಿಯವರಿಗೆ ಆಶ್ವಾಸನೆ ನೀಡಿದ್ದ ನೆನಪು, ಅದೇನಾದರೂ ಕಾರ್ಯಗತ ಅಗ್ತಿದೆಯಾ? ಮಾನ್ಯ ಯಡಿಯೂರಪ್ಪರವರು ಮನಸ್ಸು ಮಾಡಿದ್ದಾರಾ?' ಎಂದು ಪ್ರಶ್ನಿಸಿದ್ದಾರೆ.

ಸ್ಯಾಂಡಲ್‌ವುಡ್‌ ಯಂಗ್ ಕಪಲ್‌ ಪರಿಮಳ-ಜಗ್ಗೇಶ್ ಇಂಟರೆಸ್ಟಿಂಗ್ ಲವ್ ಸ್ಟೋರಿ!

ಇದನ್ನು ರೀ-ಟ್ಟಿಟ್‌ ಮಾಡಿರುವ ಜಗ್ಗೇಶ್ ಉತ್ತರಿಸಿದ್ದಾರೆ. 'ಖಂಡಿತಾ ನಾನು ಹಾಗೂ ಸನ್ಮಾನ್ಯ ಶಾಸಕ ಮಿತ್ರ ನಾಗೇಶ್ ಅವರು ಈ ಕಾರ್ಯದ ಬಗ್ಗೆ ವಿಶೇಷ ಆಸಕ್ತಿವಹಿಸಿರುವೆವು. ಅದರ ಬಗ್ಗೆ ಸಂಪೂರ್ಣ ಮಾಹಿತಿ ಶ್ರೀಮತಿ ನರಸಿಂಹರಾಜುರವರ ಮಡದಿಗೆ ಕಳೆದ ವಾರ ನೀಡಿರುವೆ. ನಗಿಸಿದ ದೇವರಿಗೆ ಖಂಡಿತಾ ಸ್ಮಾರಕ ನಿರ್ಮಾಣವಾಗುತ್ತದೆ. ಧನ್ಯವಾದಗಳು' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 

ಕಂಡಿತ..ನಾನು ಹಾಗು ಸನ್ಮಾನ್ಯ ಶಾಸಕ ಮಿತ್ರ ನಾಗೇಶ್ ರವರು ಆ ಕಾರ್ಯದ ಬಗ್ಗೆ
ವಿಶೇಷ ಆಸಕ್ತಿವಹಿಸಿರುವೆವು..
ಅದರ ಬಗ್ಗೆ ಸಂಪೂರ್ಣ ಮಾಹಿತಿ ಶ್ರೀಮತಿ
ನರಸಿಂಹರಾಜು ರವರ ಮಡದಿಗೆ ಕಳೆದವಾರ ಮಾಹಿತಿ ನೀಡಿರುವೆ..
ನಗಿಸಿದ ದೇವರಿಗೆ ಕಂಡಿತ ನೆನಪಿನ ಸ್ಮಾರಕ ಆಗುತ್ತದೆ...ಧನ್ಯವಾದಗಳು https://t.co/4wKepS3hEm

— ನವರಸನಾಯಕ ಜಗ್ಗೇಶ್ (@Jaggesh2)
click me!