
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ (Dhananjaya) ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ಲೇಡಿ ಡಾಕ್ಟರ್ ಒಬ್ಬರನ್ನು ತಮ್ಮ ಬಾಳ ಸಂಗಾತಿ ಮಾಡಿಕೊಳ್ಳಲಿರುವ ನಟ ಧನಂಜಯ್, ಇತ್ತೀಚೆಗಷ್ಟೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈಗ ನಟ ಧನಂಜಯ್ ಅವರ ಬಗ್ಗೆ ಒಂದೊಂದೇ ಸಂಗತಿಗಳು ಸೋಷಿಯಲ್ ಮೀಡಿಯಾ ಮೂಲಕ ಹೊರಬರುತ್ತಿವೆ. ನಟ ಡಾಲಿ ಧನಂಜಯ್ ಅವರು ನಟನೆಯಲ್ಲಿ ಮಾತ್ರವಲ್ಲ, ಓದಿನಲ್ಲಿ ಕೂಡ ಭಾರೀ ಮುಂದೆ ಇದ್ದರು.
ಎಸ್‌ಎಸ್‌ಎಲ್‌ಸಿ ಯಲ್ಲಿ (SSLC) ಜಿಲ್ಲೆಗೇ ಪ್ರಥಮ ಸ್ಥಾನ ಪಡೆದು ಕಾಲೇಜು ಸೇರಿದ್ದ ಕೆಎ ಧನಂಜಯ್ ಅವರು ಬಳಿಕ ಎಂಜಿನಿಯರಿಂಗ್ ಓದಿದ್ದಾರೆ. ಕೆಲವು ವರ್ಷಗಳ ಕಾಲ ಇಂಪೋಸಿಸ್‌ನಲ್ಲಿ ಕೆಲಸ ಮಾಡಿರುವ ಧನಂಜಯ್ ಬಳಿಕವಷ್ಟೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಧನಂಜಯ್ ತಮ್ಮ ಸ್ಕೂಲು-ಕಾಲೇಜು ಡೇಸ್‌ನಲ್ಲಿಯೇ ನಟನೆ ಬಗ್ಗೆ ಬಹಳಷ್ಟು ಆಸಕ್ತಿ ಹೊಂದಿದ್ದು, ನಾಟಕ ಹಾಗೂ ಸ್ಟೇಜ್ ಪರ್ಫಾಮೆನ್ಸ್‌ಗಳಲ್ಲಿ ಮುಂದಿದ್ದರು. ಆದರೆ, ವಿದ್ಯಾಭ್ಯಾಸದಲ್ಲಿ ಕೂಡ ನಂಬರ್ ಒನ್ ಎಂಬಂತಿದ್ದ ಅವರು ನೀರು ಕುಡಿದಷ್ಟೇ ಸಲೀಸಾಗಿ ಎಂಜನಿಯರಿಂಗ್ ಪದವಿ ಓದಿ ಮುಗಿಸಿದ್ದಾರೆ.
ರಶ್ಮಿಕಾ-ಪುನೀತ್ ಓಲ್ಡ್ ವಿಡಿಯೋ ವೈರಲ್, ಯಾರಿಗೆ ಕ್ಲಾಸ್ ತಗೋತಿದಾರೆ ನೆಟ್ಟಿಗರು?
ಓದು ಮುಗಿದ ಬಳಿಕ ಸಹಜವಾಗಿ ಕೆಲಸಕ್ಕೆ ಸೇರಿಕೊಂಡರೂ ಕೂಡ, ನಟನೆ ಹಾಗೂ ಬಣ್ಣದ ಲೋಕದ ಸೆಳೆತ ಅವರನ್ನು ಬಿಟ್ಟಿಲ್ಲ. ಸ್ವಲ್ಪ ಕಾಲ ಕೆಲಸ ಹಾಗೂ ನಟನೆ ಎರಡನ್ನೂ ಬ್ಯಾಲೆನ್ಸ್ ಮಾಡಲು ನೋಡಿದ್ದಾರೆ, ಆದರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ಕೆಲಸವನ್ನು ಬಿಟ್ಟು ಫುಲ್‌ಟೈಮ್ ಬಣ್ಣದ ಲೋಕಕ್ಕೆ ಜಗಿದು, ಇಲ್ಲಿ ನಿಧಾನಕ್ಕೆ ಸಕ್ಸಸ್ ಕಂಡಿದ್ದಾರೆ ಧನಂಜಯ್. ಶಿವರಾಜ್‌ಕುಮಾರ್ ನಟನೆಯ 'ಟಗರು' ಸಿನಿಮಾದಲ್ಲಿ (Tagaru) ಮಾಡಿದ 'ಡಾಲಿ' ಪಾತ್ರ ನಟ ಧನಂಜಯ್ ಅವರಿಗೆ ಭಾರಿ ಪ್ರಸಿದ್ಧಿ ತಂದುಕೊಟ್ಟಿದೆ. ಅದೆಷ್ಟು ಎಂದರೆ, ಟಗರು ಚಿತ್ರದ ಬಳಿಕ ಅವರು 'ಡಾಲಿ ಧನಂಜಯ್' ಎಂದೇ ಖ್ಯಾತಿ ಪಡೆದರು.
ನಟ ಧನಂಜಯ್ ಹಾಗೂ ಹಿರಿಯ ನಟ ಶಿವಣ್ಣ ಅವರು ಸದ್ಯ 'ಉತ್ತರಕಾಂಡ' ಚಿತ್ರದಲ್ಲಿ ಮತ್ತೆ ಒಟ್ಟಿಗೇ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ನಟ ಡಾಲಿ ಧನಂಜಯ್ ಅವರ ಎದುರು ನಾಯಕಿಯಾಗಿ ಐಶ್ವರ್ಯಾ ರಾಜೇಶ್ ನಟಿಸುತ್ತಿದ್ದಾರೆ. ಈ ಸಿನಿಮಾ ಹೊರತಾಗಿಯೂ ನಟ ಧನಂಜಯ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಇದೀಗ, ಮದುವೆಯಾಗಲಿರುವ ನಟ ಧನಂಝಯ್ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಾಗಿದ್ದಾರೆ.
ನಿರ್ದೇಶಕ ಜೋಗಿ ಪ್ರೇಮ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ದರ್ಶನ್ 'ಕರಿಯ' ಸಿನಿಮಾ ನಟಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.