Dhruva Sarja: ಮಾರ್ಟಿನ್ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿಲ್ಲ ಎಂದ ಆಕ್ಷನ್ ಪ್ರಿನ್ಸ್

Suvarna News   | Asianet News
Published : Dec 15, 2021, 06:24 PM IST
Dhruva Sarja: ಮಾರ್ಟಿನ್ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿಲ್ಲ ಎಂದ ಆಕ್ಷನ್ ಪ್ರಿನ್ಸ್

ಸಾರಾಂಶ

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಮಾರ್ಟಿನ್' ಚಿತ್ರದಲ್ಲಿ ನಟಿಸುತ್ತಿದ್ದು, ನಿರ್ದೇಶಕ ಎ.ಪಿ ಅರ್ಜುನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಚಿತ್ರದಲ್ಲಿ ಧ್ರುವ ಸರ್ಜಾ ದ್ವಿಪಾತ್ರದಲ್ಲಿ ನಟಿಸುತ್ತಿಲ್ಲ.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) 'ಪೊಗರು' (Pogaru) ಚಿತ್ರದ ನಂತರ 'ಮಾರ್ಟಿನ್' (Martin) ಚಿತ್ರದಲ್ಲಿ ನಟಿಸುತ್ತಿದ್ದು, ನಿರ್ದೇಶಕ ಎ.ಪಿ ಅರ್ಜುನ್ (A.P.Arjun) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಉದಯ್ ಕೆ ಮೆಹ್ತಾ (Uday K.Mehta) ನಿರ್ಮಾಣದ  ಸಿನಿಮಾ ಆಗಸ್ಟ್‌ನಲ್ಲಿ ಸೆಟ್ಟೇರಿ, ಈಗಾಗಲೇ ಚಿತ್ರದ ಮೊದಲ ಹಂತದ ಶೂಟಿಂಗ್ ಕೂಡಾ ಮುಗಿದಿದೆ. ಚಿತ್ರದಲ್ಲಿ ಮರಾಠಿ ಬೆಡಗಿ ವೈಭವಿ ಶಾಂಡಿಲ್ಯ (Vaibhavi Shandilya) ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ದ್ವಿಪಾತ್ರದಲ್ಲಿ  ಧ್ರುವ ಸರ್ಜಾ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಅದರಲ್ಲಿ ಒಂದು ಪಾತ್ರ ಸೈನಿಕನ ಪಾತ್ರ ಎನ್ನಲಾಗಿತ್ತು. ಇದೀಗ 'ಮಾರ್ಟಿನ್' ಚಿತ್ರದಲ್ಲಿ ಧ್ರುವ ಸರ್ಜಾ ದ್ವಿಪಾತ್ರದಲ್ಲಿ ನಟಿಸುತ್ತಿಲ್ಲ.

ಹೌದು! 'ಮಾರ್ಟಿನ್' ಚಿತ್ರದಲ್ಲಿ ಧ್ರುವ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ದ್ವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪಾತ್ರಕ್ಕಾಗಿ ಅವರು ಜಿಮ್‌ನಲ್ಲಿ ಫುಲ್​ ವರ್ಕೌಟ್ ಮಾಡುತ್ತಿದ್ದಾರೆ. ಈಗಾಗಲೇ ಹುರಿಗಟ್ಟಿದ ದೈತ್ಯ ದೇಹ ಹೊಂದಿರುವ ಧ್ರುವ ಯೋಧನ ಪಾತ್ರಕ್ಕೆ ಸಖತ್ ಕಸರತ್ತು ನಡೆಸುತ್ತಿದ್ದರು ಎಂದು ಹಲವರು ಊಹಿಸಿದ್ದರು. ಆದರೆ ತಾವು ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿಲ್ಲ ಎಂದು  ಧ್ರುವ ಸರ್ಜಾ ಸ್ಪಷ್ಟಪಡಿಸಿದ್ದಾರೆ. ನಿರ್ದೇಶಕರ ಸೂಚನೆಯಂತೆ ನನ್ನ ದೇಹವನ್ನು ಬದಲಿಸಿಕೊಂಡಿದ್ದೇನೆ, ಮುಂದಿನ ವಾರದಲ್ಲಿ ಕೆಲವು ಭಾಗದ ಚಿತ್ರೀಕರಣ ನಡೆಯಲಿದೆ. ಹಾಗೂ  ನಿರ್ದಿಷ್ಟವಾಗಿ ನನ್ನ ದೇಹ ಶೇಪ್‌ಗೆ ಬರುವಂತೆ ಡೈರೆಕ್ಟರ್ ತಿಳಿಸಿದ್ದಾರೆ. ಅದಕ್ಕಾಗಿ ನಾನು ರೆಡಿಯಾಗುತ್ತಿದ್ದೇನೆ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

Dhruva Sarja: 'ಮಾರ್ಟಿನ್' ಚಿತ್ರಕ್ಕೆ ನಾಯಕಿಯಾಗಿದ್ದಾರಾ ನಟಿ ವೈಭವಿ ಶಾಂಡಿಲ್ಯ

ಫೆಬ್ರವರಿ ತಿಂಗಳ  ಅಂತ್ಯದ ವೇಳೆಗೆ 'ಮಾರ್ಟಿನ್' ಚಿತ್ರದ ಚಿತ್ರೀಕಣ ಸಂಪೂರ್ಣವಾಗಲಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿಯಲಿದ್ದು ಅದಾದ ನಂತರ ಜೋಗಿ ಪ್ರೇಮ್ ನಿರ್ದೇಶನದ ಮುಂದಿನ ಹೊಸ ಚಿತ್ರದ ಶೂಟಿಂಗ್ ಫೆಬ್ರವರಿಯಲ್ಲಿ ಆರಂಭಗೊಳ್ಳಲಿದೆ. ನಿರ್ದೇಶಕ ಎಪಿ ಅರ್ಜುನ್ ಸದ್ಯ ಹೈದರಾಬಾದ್‌ನಲ್ಲಿದ್ದು, ಚಿತ್ರದ ಸಂಗೀತ ಸಂಯೋಜಕ ಮಣಿ ಶರ್ಮಾ (Mani Sharma) ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಎರಡು ಹಾಡುಗಳ ಚಿತ್ರೀಕರಣ ಮುಗಿದಿದೆ. ಎ.ಪಿ ಅರ್ಜುನ್ 10 ವರ್ಷಗಳ ಹಿಂದೆ 'ಅದ್ಧೂರಿ' (Adduri) ಸಿನಿಮಾ ನಿರ್ದೇಶಿಸಿದ್ದರು. ಇದೀಗ 'ಮಾರ್ಟಿನ್' ಮೂಲಕ ಎರಡನೇ ಬಾರಿಗೆ ಒಂದಾಗುತ್ತಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.

'ಮಾರ್ಟಿನ್' ಚಿತ್ರದ ಟೈಟಲ್ ಟೀಸರ್ ನೋಡಿದವರು ಧ್ರುವ ಸರ್ಜಾ ಅವರ ಖಡಕ್ ಲುಕ್, ಬಾಡಿ ಲಾಂಗ್ವೇಜ್, ಕೈಯಲ್ಲಿ ಕ್ರಾಸ್ ಚೈನ್ ಹಿಡಿದುಕೊಂಡಿರುವುದನ್ನು ನೋಡಿ, ಆ್ಯಕ್ಷನ್ ಪ್ರಿನ್ಸ್ ಅವರೇ 'ಮಾರ್ಟಿನ್' ಎಂದುಕೊಂಡಿದ್ದರು. ಆದರೆ ಈ ಚಿತ್ರದಲ್ಲಿ ನಾನು ಮಾರ್ಟಿನ್​ ಅಲ್ಲ. ಅದು ಯಾರು ಎಂಬುದು ಸಿನಿಮಾ ನೋಡಿದ ಮೇಲೆ ತಿಳಿಯಲಿದೆ. ಅದಕ್ಕಾಗಿಯೇ ಈ ಟೀಸರ್​ನಲ್ಲಿ Who is Martin ಎಂಬ ಡೈಲಾಗ್​ ಇದೆ' ಎಂದು ಧ್ರುವ ಸರ್ಜಾ ಇತ್ತೀಚೆಗೆ ಹೇಳಿದ್ದರು. 

Dhruva Sarja: ಮಾರ್ಟಿನ್‌ ಚಿತ್ರದ ಪಾತ್ರಕ್ಕೆ ಕಸರತ್ತು ನಡೆಸುತ್ತಿರುವ ಆಕ್ಷನ್ ಪ್ರಿನ್ಸ್

ಔಟ್ ಅಂಡ್ ಔಟ್ ಕಮರ್ಶಿಯಲ್ ಆಕ್ಷನ್ ಥ್ರಿಲ್ಲರ್ 'ಮಾರ್ಟಿನ್' ಸಿನಿಮಾ ಕಾಲೇಜ್ ಬ್ಯಾಕ್‌ ಡ್ರಾಪ್‌ನಲ್ಲಿ ನಡೆಯುವ ಕಥೆಯಾಗಿದ್ದು, ಈ ಚಿತ್ರದಲ್ಲಿ ನವಿರಾದ ಪ್ರೇಮಕಥೆಯೂ ಇರಲಿದೆ. ಲವ್ ಸ್ಟೋರಿ ಹಾಗೂ ಥ್ರಿಲ್ಲರ್ ಅಂಶಗಳನ್ನು ಸೇರಿಸಿ ಚಿತ್ರಕಥೆಯನ್ನು ಸಿದ್ಧಪಡಿಸಲಾಗಿದೆ. ಕನ್ನಡ, ತೆಲುಗು, ತಮಿಳು ಭಾಷೆಗಳ ಜೊತೆಗೆ ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲೂ 'ಮಾರ್ಟಿನ್' ಚಿತ್ರ ಬಿಡುಗಡೆಯಾಗಲಿದೆ. ಉದಯ್​ ಕೆ. ಮೆಹ್ತಾ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಸತ್ಯ ಹೆಗಡೆ (Satya Hegde) ಛಾಯಾಗ್ರಹಣ ಮಾಡುತ್ತಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ