ಬಜಾರ್‌ ಹುಡುಗನ ಎರಡನೇ ಚಿತ್ರಕ್ಕೆ ಅದ್ದೂರಿ ಚಾಲನೆ!

Published : Dec 04, 2019, 08:55 AM IST
ಬಜಾರ್‌ ಹುಡುಗನ ಎರಡನೇ ಚಿತ್ರಕ್ಕೆ ಅದ್ದೂರಿ ಚಾಲನೆ!

ಸಾರಾಂಶ

ಧನ್ವೀರ್‌ ನಟನೆಯ ಎರಡನೇ ಚಿತ್ರಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಮೊದಲಿನಿಂದಲೂ ನಟ ದರ್ಶನ್‌ ಅಭಿಮಾನಿಯಾಗಿರುವ ಧನ್ವೀರ್‌, ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆಯ ದಿನವೇ ತನ್ನ ಎರಡನೇ ಚಿತ್ರಕ್ಕೆ ಮುಹೂರ್ತ ಮಾಡಿಕೊಳ್ಳುತ್ತಿದ್ದಾರೆ. 

‘ಒಡೆಯ’ ಚಿತ್ರದ ಬಿಡುಗಡೆಯ ಸಂಭ್ರಮದಲ್ಲೇ ಡಿ.12ರಂದು ಧನ್ವೀರ್‌ ಅವರ ‘ಬಂಪರ್‌’ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ದರ್ಶನ್‌ ಅವರೇ ಮುಖ್ಯ ಅತಿಥಿ. ‘ಭರಾಟೆ’ ಚಿತ್ರದ ನಂತರ ಸುಪ್ರೀತ್‌ ಅವರು ಕೈಗೆತ್ತಿಕೊಂಡು ನಿರ್ಮಾಣ ಮಾಡುತ್ತಿರುವ ಸಿನಿಮಾ ಇದು. ಅಲೆಮಾರಿ ಸಂತು ಅಲಿಯಾಸ್‌ ಹರಿ ಸಂತೋಷ್‌ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.

'ಬಜಾರ್‌'ನಲ್ಲಿ ಮಿಂಚಿದ ಧನ್ವೀರ್‌ ರಿಯಲ್ ಲೈಫ್‌ ಹುಡ್ಗಿ ಯಾರ್ಗೊತ್ತಾ? .

ಸಿಂಪಲ್‌ ಸುನಿ ನಿರ್ದೇಶನದ ‘ಬಜಾರ್‌’ ಚಿತ್ರದ ಮೂಲಕ ಕನ್ನಡಕ್ಕೆ ಬಂದವರು ಧನ್ವೀರ್‌. ‘ಇದೊಂದು ಪಕ್ಕಾ ಆ್ಯಕ್ಷನ್‌ ಕಂ ಮಾಸ್‌ ಸಿನಿಮಾ. ದರ್ಶನ್‌ ಅವರ ಬೆಂಬಲದ ಜತೆಗೆ ಸುಪ್ರೀತ್‌ ಅವರ ಅದ್ದೂರಿ ನಿರ್ಮಾಣ ಇದೆ. ಈ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಮೇಕಿಂಗ್‌ ಮಾಡುವ ಯೋಜನೆ ಇದೆ’ ಎಂಬುದು ನಿರ್ದೇಶಕರ ಮಾತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?