Dhanveer ಫಸ್ಟ್‌ ರಿಯಾಕ್ಷನ್, ಪಿತೂರಿ ಮಾಡೋರನ್ನು ಬಿಡೋಲ್ಲ!

Suvarna News   | Asianet News
Published : Feb 20, 2022, 10:09 AM IST
Dhanveer ಫಸ್ಟ್‌ ರಿಯಾಕ್ಷನ್, ಪಿತೂರಿ ಮಾಡೋರನ್ನು ಬಿಡೋಲ್ಲ!

ಸಾರಾಂಶ

ಸಿನಿಮಾ ಬಿಡುಗಡೆ ದಿನವೇ ಜಗಳ ಮಾಡಿರುವುದು ದುರದ್ದೇಶದಿಂದ ಕೂಡಿದೆ, ಎಂದು ಗಲಾಟೆ ಬಗ್ಗೆ ಸ್ಪಷ್ಟನೆ ಕೊಟ್ಟ ನಟ ಧನ್ವೀರ್.   

ನಟ ಧನ್ವೀರ್ (Dhanveer) ಮತ್ತು ಶ್ರೀಲೀಲಾ (Sreeleela) ಜೋಡಿಯಾಗಿ ನಟಿಸಿರುವ ಸಿನಿಮಾ 'ಬೈಟು ಲವ್' (Bytwo Love) ರಾಜ್ಯಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ನಿರ್ದೇಶಕರು ವಿಭಿನ್ನ ಕಾನ್ಸೆಪ್ಟ್‌ ಮೂಲಕ ಯುವಕರ ಮನಸ್ಸು ಮುಟ್ಟಿದೆ. ಹಾಗೇ ಪ್ರತಿಯೊಬ್ಬರೂ ಕುಟುಂಬ ಸಮೇತರಾಗಿ ನೋಡಬೇಕಾದ ಸಿನಿಮಾವಿದು ಎಂದು ಪ್ರೀ-ರಿಲೀಸ್ ಕಾರ್ಯಕ್ರಮ ಮತ್ತು ಖಾಸಗಿ ಸಂದರ್ಶನಗಳಲ್ಲಿ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಹೇಳಿದ್ದಾರೆ.

ಇನ್ನೇನು ಸಿನಿಮಾ ರಿಲೀಸ್ ಅಗಬೇಕು, ಹಿಂದಿನ ದಿನ ತಯಾರಿ ಹೇಗಿದೆ ಎಂದು ನೋಡಿಕೊಂಡು ಬರಲು ಧನ್ವೀರ್ ಮತ್ತು ಟೀಂ ಅನುಪಮಾ ಟಾಕೀಸ್‌ಗೆ (Anupama Talkies) ಭೇಟಿ ನೀಡಿತ್ತು. ಈ ವೇಳೆ ಹುಡುಗರ ಗುಂಪೊಂದು ಸೆಲ್ಫೀ ಕೇಳಿದ್ದರು. ಆಗ ಧನ್ವೀರ್ ನಿರಾಕರಿಸಿದ್ದಕ್ಕೆ ಜೋರಾಗಿ ಜಗಳ ಮಾಡಿದ್ದಾರೆ. ಹಲ್ಲೆ ಮಾಡಿ, ಬಾತ್‌ರೂಮ್‌ನಲ್ಲಿ ಒಂದು ಗಂಟೆ ಕೂಡಿ ಹಾಕಿದ್ದಾರೆ ಎಂದೆಲ್ಲಾ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಧನ್ವೀರ್ ವಿರುದ್ಧ ಎಫ್‌ಐಆರ್‌ (FIR) ಕೂಡ ದಾಖಲಾಗಿದೆ. 

Film Review: ಬೈಟು ಲವ್

ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಧನ್ವೀರ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಖಾಸಗಿ ಯುಟ್ಯೂಬ್‌ ಚಾನೆಲ್ ವೆಬ್‌ಬಝ್‌ನಲ್ಲಿ ಫೋನ್‌ಕಾಲ್ ಮೂಲಕ ಕೊಟ್ಟಿರುವ ಸ್ಪಷ್ಟನೆ ವೈರಲ್ ಆಗುತ್ತಿದೆ. ಸಿನಿಮಾ ಪ್ರಚಾರ ನಡೆದ ನಂತರ ಬೆಂಗಳೂರಿಗೆ ಆಗಮಿಸಿ, ಆದಷ್ಟು ಬೇಗ ಪ್ರೆಸ್‌ಮೀಟ್ ಮಾಡುವುದಾಗಿಯೂ ಹೇಳಿದ್ದಾರೆ.

ಧನ್ವೀರ್ ಮಾತು:
'ಇದರ ಹಿಂದೆ ಯಾರು ನಿಂತು ಏನು ಮಾಡಿಸುತ್ತಿದ್ದಾರೋ ಗೊತ್ತಿಲ್ಲ. ಆದರೆ ಅಲ್ಲಿ ನಡೆದಿದ್ದು ಇಷ್ಟೇ. ನಮ್ಮ ಇಡೀ ಟೀಂ ಚಿತ್ರಮಂದಿರದ ಬಳಿ ಹೋಗಿ ಪ್ರಮೋಷನಲ್‌ ವಿಡಿಯೋಗಾಗಿ ಚಿತ್ರೀಕರಣ ಮಾಡ್ತಿದ್ವಿ. ಆಗ ಒಂದಿಷ್ಟು ಜನ ಗೇಟ್‌ ಹತ್ರ ಬಂದಿದ್ದರು. ಪೋಟೋ ಕೇಳಿದಾಗ, ಇರಪ್ಪ ಇದೆಲ್ಲಾ ಮುಗಿಸಿಕೊಂಡು ನಾವು ಬರ್ತೀನಿ ಅಂತ ಹೇಳಿದ್ದೀನಿ. ಆಗ ಅಲ್ಲಿ ಎಲ್ಲರೂ ಸುಮ್ಮನೆ ಇದ್ದರು. ಮಧ್ಯದಲ್ಲಿ ಇಬ್ಬರು ಕಿಡಿಗೇಡಿಗಳು ಬಂದರು. ರೆಕಾರ್ಡ್‌ ಆಗಲು ಶುರು ಮಾಡಿದ ಅರ್ಧ ಗಂಟೆಗೇ ಒಂದು ಹೆಣ್ಣು ಮಗೂಗೆ ತೀರಾ ಕೆಟ್ಟ ಪದಗಳಿಂದ ನಿಂದಿಸುತ್ತಿದ್ದರು. ರೆಕಾರ್ಡಿಂಗ್ ಬೇಗ ಮುಗಿಸಿ, ನಾನು ಅಲ್ಲಿಗೆ ಹೋದೆ. ನಾನು ಅವನಿಗೆ ಹೊಡೆದಿಲ್ಲ, ಮುಟ್ಟಿ ಹೇಳಿದ್ದೀನಿ. ಅವನು ಮೊದಲೇ ನಶೆಯಲ್ಲಿದ್ದ. ಬೇರೆ ಏನೋ ತಿಂದು ಮತ್ತೂ ನಶೆ ಏರಿಸಿಕೊಂಡು ಬಂದಂತೆ ಕಾಣಿಸುತ್ತಿತ್ತು. ಏನ್ ಮಾತನಾಡುತ್ತಿದ್ದಾನೆ ಅನ್ನೋ ಪರಿಜ್ಞಾನವೂ ಅವನಿಗೆ ಇರಲಿಲ್ಲ. ಹೆಣ್ಣು ಮಗು ಬಗ್ಗೆ ಪಬ್ಲಿಕ್‌ನಲ್ಲಿ ಕೆಟ್ಟದಾಗಿ ಮಾತನಾಡಬೇಡ, ನೀವು ಅಕ್ಕ ತಂಗಿ ಜೊತೆ ಇದ್ಯಾ ಕಣೋ ಅಂತ ಹೇಳಿದೆ. ಸುಮ್ಮನೆ ಹಿಂದೆ ಹೋಗಿದ್ದಾನೆ ಆ ಕ್ಷಣದಲ್ಲಿ. ಅವನ ಸ್ನೇಹಿತರೂ ಸುಮ್ಮನಾಗುತ್ತಾರೆ, ಜಗಳ ಬೇಡ ಅಂತ. ಅವನ ಸ್ನೇಹಿತ ಫೋಟೋ ತೆಗೆದುಕೊಂಡು ಹೊರಡುತ್ತಾನೆ. ಆಗ ಇವನು ದೂರದಿಂದಲೇ ನಿಂತ್ಕೊಂಡು ನೀನು ಯಾವ ಹೀರೋನೋ? ನಮ್ ಹೀರೋ ನಮಗೇ ಇದ್ದಾನೆ, ಮಾಡಿ ತೋರಿಸುತ್ತೀನಿ ನೋಡು ಅಂತ ಹೇಳ್ತಾನೆ. ಈ ಎಲ್ಲಾ ಗಲಾಟೆ ಹಿಂದೆ ಬೇರೆ ಏನೋ ಇದೆ ಎನ್ನುವ ಅನುಮಾನ ವ್ಯಕ್ತಪಡಿಸಿದರು ನಿರ್ದೇಶಕರು. ನಾವು ಅಲ್ಲಿಂದ ಹೊರಟ್ವಿ. ಚಿತ್ರಮಂದಿರದೊಳಗೆ ಹೋದ್ವಿ,' ಎಂದು ಧನ್ವೀರ್ ಹೇಳಿದ್ದಾರೆ.

ಅಭಿಮಾನಿ ಮೇಲೆ ನಟ Dhanveer ಹಲ್ಲೆ, FIR ದಾಖಲು!

'ಇದರ ಹಿಂದೆ ಕುಮ್ಮಕ್ಕಿದೆ. ನಾನು ಅದಕ್ಕೆ ಪ್ರೆಸ್‌ಮೀಟ್ ಮಾಡ್ತೀನಿ. ಅವನು ದೂರು ನೀಡಿದ್ದಾನೆ. ಅಗ ಎರಡು-ಮೂರು ಗಂಟೆ ಕಾಲ ಚೆನ್ನಾಗಿಯೇ ಇದ್ದ. ಆಗಲೇ ಅಲ್ಲಿನ ಪೊಲೀಸರಿಗೆ ಕಾಫಿ ಟೀ ಕುಡಿಯಲು ಕರೆದಿದ್ದಾನೆ. ಆಮೇಲೆ ಕೆಸಿ ಜನರಲ್ ಆಸ್ಪತ್ರೆಗೆ (KC General hospital) ಹೋಗಿ ಅಡ್ಮಿಟ್ ಆಗಿದ್ದಾನೆ. ಇವನದ್ದು ಮೆಡಿಕಲ್ ರಿಪೋರ್ಟ್ (medical report) ಮಾಡಿಸಿದ್ದಾರೆ. ಆ ರಿಪೋರ್ಟ್‌ನಲ್ಲಿ ಏನ್ ಮಾಡಿದ್ದಾನೆಂದು ಅದು ಬಂದಿಲ್ಲ. ಅದಾದ ಮೇಲೆ ಪೊಲೀಸ್ ಠಾಣೆಗೆ ಬಂದು ಆರಾಮ್ ಆಗಿಯೇ ಇದ್ದ. ಆಮೇಲೆ ಮತ್ತು ಗ್ಲೋಕೋಸ್ ಹಾಕಿಸಿಕೊಳ್ಳೋಕೆ ಅವನೇ ಹೋಗುತ್ತಾನೆ. 100% ನನ್ನ ಹಿಂದೆ ಷಡ್ಯಂತ್ರ ನಡೀತಿದೆ. ಯಾರ್ ಮಾಡ್ತಿದ್ದಾರೆ, ಅಂತಾನೂ ಗೊತ್ತಾಗಿದೆ. ಅದೆಲ್ಲಾ ಮಾಹಿತಿ ಪಡೆದುಕೊಂಡು, ನಿಮ್ಮ ಮುಂದೆ ಕೂರುತ್ತೇನೆ. ಆ ಪ್ರೆಸ್‌ಮೀಟ್‌ನಲ್ಲಿ ಎಲ್ಲವನ್ನೂ ಬಹಿರಂಗ ಮಾಡ್ತೀನಿ. ಸಿನಿಮಾ ಯಶಸ್ಸು ಆದ ಮೇಲೆ ಈ ಸುದ್ದಿ ಆಗುತ್ತೆ. ಪಕ್ಕದಲ್ಲೇ ಉಪ್ಪಾರಪೇಟೆ ಪೊಲೀಸ್‌ ಠಾಣೆ ಇತ್ತು .ಅಷ್ಟು ದೊಡ್ಡ ಜಗಳ ಆಗಿದ್ದರೆ, ಪೊಲೀಸರು ಬಂದಿರುತ್ತಿದ್ದರು. ನಾನು ಜನರನ್ನ ಇಷ್ಟ ಪಡ್ತೀನಿ. ಅದಿಕ್ಕೆ ಎರಡನೇ ಸಿನಿಮಾಗೆ ನನ್ನ ಇಷ್ಟು ಪ್ರೀತಿ ಕೊಡುತ್ತಿರುವುದು. ಕೆಲವರು ರೌಡಿಸಮ್ ಮಾಡದಕ್ಕೆ ಅಂತಾನೇ ಬಂದು ಕೂತಿದ್ದಾರೆ,' ಎಂದು ಧನ್ವೀರ್ ಕ್ಲಾರಿಟಿ ಕೊಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಒಂದೇ ದಿನದಲ್ಲಿ ದಾಖಲೆ ಬರೆದ ಸುದೀಪ್​ Mark ಟ್ರೈಲರ್​: ಇಷ್ಟೊಂದು ವ್ಯೂವ್ಸ್​ ಆಗಿದ್ದು ನಿಜನಾ? ಏನಿದು ಚರ್ಚೆ?
ಸಲಗ Vs ರೂಲರ್: ಅಳಿದು ಉಳಿದವರ ಲ್ಯಾಂಡ್ ಲಾರ್ಡ್ ದುನಿಯಾದಲ್ಲಿ ಶೆಟ್ಟರ ವಾರ್!