
ಪ್ರತಿ ವರ್ಷ ಫೆಬ್ರವರಿ 16 ಬಂತು ಅಂದ್ರೆ ನಟ ದರ್ಶನ್ ತೂಗುದೀಪ ಮನೆ ಮುಂದೆ ಜನವೋ ಜನ. ತಮ್ಮ ನೆಚ್ಚಿನ ನಾಯಕನಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಲು ಅಭಿಮಾನಿಗಳು ಮಧ್ಯ ರಾತ್ರಿಯೇ ಸರದಿಸಾಲಿನಲ್ಲಿ ನಿಲ್ಲುತ್ತಿದ್ದರು. ಆದರೆ ಈ ವರ್ಷ ದರ್ಶನ್ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ತಿಲ್ಲ. ಹೌದು, ಈ ಬಗ್ಗೆ ಅವರೇ ವಿಶೇಷ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟ ದರ್ಶನ್ ಹೇಳಿದ್ದೇನು?
ನನ್ನ ಅಭಿಮಾನಿಗಳಿಗೆ ಧನ್ಯವಾದ ಹೇಳಲಾ? ಥ್ಯಾಂಕ್ಸ್ ಹೇಳಲಾ? ಯಾವ ಪದ ಬಳಸಬೇಕು ಅಂತ ಗೊತ್ತಾಗ್ತಿಲ್ಲ. ನೀವು ತೋರಿಸಿದ ಪ್ರೀತಿಗೆ ಬೆಲೆ ಕಟ್ಟೋಕೆ ಆಗೋದಿಲ್ಲ. ನಾನು ಈ ವಿಡಿಯೋ ಮಾಡೋಕೆ ಜನ್ಮದಿನ ಕಾರಣ. ಪ್ರತಿಸಲವೂ ನಾನು ನಿಂತುಕೊಂಡು ನಿಮಗೆ ಶೇಕ್‌ಹ್ಯಾಂಡ್ ಕೊಟ್ಟು ಶುಭಾಶಯ ಹೇಳ್ತಿದ್ದೆ. ಆದರೆ ಈ ಸಲ ಜನ್ಮದಿನ ಆಚರಿಸಿಕೊಳ್ತಿಲ್ಲ. ಯಾವತ್ತೂ ಒಂದು ಇಂಜೆಕ್ಷನ್ ತಗೊಂಡು ನಿಂತುಕೊಳ್ತಿದ್ದೆ, ಹದಿನೈದು ಆರಾಮ್ ಇರ್ತಿದ್ದೆ. ಆದರೆ ಈ ಸಲ ಆಗ್ತಿಲ್ಲ. ಇದೊಂದು ಸಲ ನನ್ನನ್ನು ಕ್ಷಮಿಸಿ. ನಾನು ಇನ್ನು ಸ್ವಲ್ಪ ದಿನಗಳ ಬಳಿಕ ನಿಮ್ಮೆಲ್ಲರನ್ನು ವೈಯಕ್ತಿಕವಾಗಿ ಭೇಟಿ ಆಗ್ತೀನಿ.
ಸ್ಪೈನಲ್ ಕಾರ್ಡ್ ಸಮಸ್ಯೆ ಆಗಿರೋದು ಎಲ್ಲರಿಗೂ ಗೊತ್ತಿದೆ. ನಾನು ಆಪರೇಶನ್ ಮಾಡಿಸಲೇಬೇಕು. ನನ್ನ ಕಾಲು ಈಗಾಗಲೇ ನಂಬ್ ಆಗ್ತಿದೆ. ಹೀಗಾಗಿ ಆರೋಗ್ಯದ ಕಡೆಗೆ ಗಮನ ಕೊಡಲೇಬೇಕು.
ಜನ್ಮದಿನದ ಆಚರಣೆಯ ಫೋಟೋಗಳನ್ನು ಹಂಚಿಕೊಂಡ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ! Photos ಇಲ್ಲಿವೆ.!
ಸೂರಪ್ಪ ಬಾಬು ಅವರ ಹಣವನ್ನು ನಾನು ಮರಳಿ ನೀಡಿದ್ದೇನೆ. ಸೂರಪ್ಪ ಬಾಬು ಅವರಿಗೆ ಆರ್ಥಿಕ ಸಮಸ್ಯೆ ಇದ್ದಾಗಲೇ ನನ್ನ ಜೊತೆ ಸಿನಿಮಾ ಮಾಡಬೇಕು ಅಂತ ಮುಂದೆ ಬಂದರು. ಈ ಸಿನಿಮಾ ಮಾಡಿದ್ರೆ ಅವರ ಸಮಸ್ಯೆ ಬಗೆಹರಿಯತ್ತೆ ಅಂತ ಅವರು ಅಂದುಕೊಂಡಿದ್ದರು. ನಾನು ಆಗ ಸಿನಿಮಾ ಮಾಡೋಣ ಅಂತ ಒಪ್ಪಿಕೊಂಡೆ. ಆದರೆ ಈಗ ಇಷ್ಟು ಸಮಯ ವ್ಯರ್ಥ ಆಗಿದೆ. ಇನ್ನು ಕೂಡ ನಾನು ಸೂರಪ್ಪ ಬಾಬು ಹಣ ಇಟ್ಕೊಂಡರೆ ಸರಿ ಇರೋದಿಲ್ಲ ಅಂತ ಮರಳಿ ಹಣ ನೀಡಿದ್ದೇನೆ. ಮುಂದೊಂದು ದಿನ ಅವಕಾಶ ಸಿಕ್ಕರೆ, ಸ್ಕ್ರಿಪ್ಟ್ ಸಿಕ್ಕರೆ ನಾನು ಸೂರಪ್ಪ ಬಾಬು ಜೊತೆ ಸಿನಿಮಾ ಮಾಡ್ತೀನಿ.
ರಕ್ಷಿತಾ ಪ್ರೇಮ್ ಪೋಸ್ಟ್ ವೈರಲ್... ನನ್ನ ತಮ್ಮನ ಮದುವೆಗೆ ದರ್ಶನ್ ಬರ್ತಾನೆ..!
ನಾನು ಹಾಗೂ ಜೋಗಿ ಪ್ರೇಮ್ ಮತ್ತೆ ಸಿನಿಮಾ ಮಾಡ್ತೀವಿ. ನಮ್ಮ ಗುರುಗಳು, ರಕ್ಷಿತಾ ಆಸೆ ಆಗಿದ್ದಕ್ಕೆ ನಾನು ಖಂಡಿತ ಪ್ರೇಮ್ ಜೊತೆ ಸಿನಿಮಾ ಮಾಡ್ತೀನಿ. ಕೆವಿಎನ್ ಪ್ರೊಡಕ್ಷನ್ಸ್ ಅವರು ಈಗಾಗಲೇ ಬೇರೆ ಸಿನಿಮಾ ಮಾಡುತ್ತಿದ್ದಾರೆ. ಯಾವುದೇ ಪ್ರೊಡಕ್ಷನ್ಸ್ ಆಗಿರಲೀ, ಇಂದಿನ ಕಾಲಘಟಕ್ಕೆ ಸಿನಿಮಾ ಮಾಡೋದು ಸುಲಭ ಇಲ್ಲ. ದುಡ್ಡು ಹೊಂದಿಸೋದು ಒಂದೇ ನಿರ್ಮಾಪಕನ ಕೆಲಸ ಅಲ್ಲ, ಇನ್ನೂ ಕೆಲಸ ಇರತ್ತೆ. ಅಡ್ವಾನ್ಸ್ ಹಣ ಕೊಟ್ಟು, ರಿಲೀಸ್ ಆಗುವವರೆಗೆ ನಿರ್ಮಾಪಕನ ಕೆಲಸ ಜಾಸ್ತಿ ಇರುತ್ತದೆ.
ಬೇರೆ ಸಿನಿಮಾ ಜೊತೆ ನನ್ನ ಸಿನಿಮಾ ಮಾಡೋದು ಕೂಡ ಸವಾಲಿನ ಕೆಲಸ ಆಗತ್ತೆ. ನನ್ನಂಥವನ ಮೇಲೆ ನೀವು ಕೊಟ್ಟ ಪ್ರೀತಿಗೆ ಬೆಲೆ ಕಟ್ಟೋಕೆ ಆಗೋದಿಲ್ಲ. ನನ್ನ ನಂಬಿಕೊಂಡ ಎಲ್ಲರಿಗೂ ಧನ್ಯವಾದಗಳು. ಎಲ್ಲ ಟೈಮ್‌ನಲ್ಲೂ ಜೊತೆಗಿದ್ದ ನಟ ಧನ್ವೀರ್, ಪ್ರಾಣಸ್ನೇಹಿತೆ ರಕ್ಷಿತಾ ಪ್ರೇಮ್, ಬುಲ್‌ಬುಲ್ ರಚಿತಾ ಪ್ರೇಮ್‌ಗೆ ಧನ್ಯವಾದಗಳು.
ನಟ ದರ್ಶನ್-ಕಿಚ್ಚ ಸುದೀಪ್ ವಿಷಯ; ʼತಿರುಪತಿಯಲ್ಲಿ ಗುಂಡು ಹೊಡೆಸ್ಕೊಳ್ತೀನಿʼ ಎಂದ Bigg Boss ರಜತ್
ನಾನು ಬೇರೆ ಭಾಷೆಗೆ ಹೋಗ್ತೀನಿ ಅಂತ ಹೇಳಲಾಗಿತ್ತಂತೆ. ನನಗೆ ಇಲ್ಲೇ ಇಷ್ಟು ಪ್ರೀತಿ ಸಿಕ್ಕಿದೆ ಅಂದ್ಮೇಲೆ ನಾನ್ಯಾಕೆ ಬೇರೆ ಕಡೆ ಹೋಗಲಿ? ಸಾಯೋವರೆಗೂ ನಾನು ಇಲ್ಲೇ ಇರ್ತೀನಿ. ಕಾವೇರಿ ಕೊಡಗಿನಲ್ಲಿ ಹುಟ್ಟಿ ಬೇರೆ ಕಡೆ ಹರಿಯುತ್ತಾಳೆ. ನಾನು ಕೊಡಗಿನಲ್ಲಿ ಹುಟ್ಟಿದ್ದೇನೆ. ನಾನು ಸೀಮಿತ ಆಗಿರೋದು ಮೇಕೆದಾಟುವರೆಗೆ ಮಾತ್ರವೇ. ನನ್ನ ಸಿನಿಮಾಗಳು ಬೇರೆ ಭಾಷೆಗೆ ಡಬ್ ಆಗಬಹುದು, ಆದರೆ ನಾನು ಇಲ್ಲೇ ಇರ್ತೀನಿ. ನಾನು ಕನ್ನಡದಲ್ಲಿಯೇ ಇರ್ತೀನಿ, ಕನ್ನಡದಲ್ಲೇ ಸಿನಿಮಾ ಮಾಡ್ತೀನಿ. ನನ್ನ ಜನ್ಮದಿನಕ್ಕೆ ಶುಭಾಶಯ ತಿಳಿಸಿದ ಎಲ್ಲರಿಗೂ ಧನ್ಯವಾದಗಳು. ಆದಷ್ಟು ಬೇಗ ನಿಮ್ಮೆಲ್ಲರಿಗೂ ತಿಳಿಸುವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.