ನಟ ದರ್ಶನ್ ಅವರು ರೋಡ್ ಮಧ್ಯೆ ಪಶ್ಚಾತ್ತಾಪದ ಮಾತುಗಳನ್ನು ಆಡಿದ್ದಾರಂತೆ. ಅಕ್ಕಪಕ್ಕದಲ್ಲಿದ್ದ ಪೊಲೀಸ್ ಜತೆ ಸಹಜವಾಗಿ ಮಾತಿಗಿಳಿದ ನಟ ದರ್ಶನ್, ತಮ್ಮ ಹಿಂದಿನ ಜೀವನವನ್ನು ಮೆಲುಕು ಹಾಕಿ ಪಶ್ಚಾತ್ತಾಪದ ನುಡಿಗಳನ್ನು ಆಡಿದ್ದಾರೆ ಎನ್ನಲಾಗಿದೆ.
ಕನ್ನಡದ ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಯಾಗಿದ್ದು, ಈಗ ಬಳ್ಳಾರಿ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿರುವುದು ಗೊತ್ತೇ ಇದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಂದ ಬಳ್ಳಾರಿ ಜೈಲಿಗೆ ಮೊನ್ನೆಯಷ್ಟೇ ಶಿಫ್ಟ್ ಆಗಿರುವ ನಟ ದರ್ಶನ್ ಅವರು ರೋಡ್ ಮಧ್ಯೆ ಪಶ್ಚಾತ್ತಾಪದ ಮಾತುಗಳನ್ನು ಆಡಿದ್ದಾರಂತೆ. ಅಕ್ಕಪಕ್ಕದಲ್ಲಿದ್ದ ಪೊಲೀಸ್ ಜತೆ ಸಹಜವಾಗಿ ಮಾತಿಗಿಳಿದ ನಟ ದರ್ಶನ್, ತಮ್ಮ ಹಿಂದಿನ ಜೀವನವನ್ನು ಮೆಲುಕು ಹಾಕಿ ಪಶ್ಚಾತ್ತಾಪದ ನುಡಿಗಳನ್ನು ಆಡಿದ್ದಾರೆ ಎನ್ನಲಾಗಿದೆ. ಅವುಗಳಲ್ಲಿ ಹತ್ತು ಅಂಶಗಳು ಅಡಕವಾಗಿದ್ದು, ಅವೀಗ ವೈರಲ್ ಆಗುತ್ತಿವೆ.
ಹಾಗಿದ್ದರೆ ನಟ ದರ್ಶನ್ ಬೆಂಗಳೂರಿಂದ ಬಳ್ಳಾರಿಗೆ ಹೋಗುವ ಮಾರ್ಗ ಮಧ್ಯೆ ಹೇಳಿರುವ ಆ ಹತ್ತು ಮಾತುಗಳು ಯಾವವು? ಇಲ್ಲಿದೆ ನೋಡಿ ನಟ ದರ್ಶನ್ ಬಾಯಿಂದ ಬಂದ ಮಾತುಗಳು:-
undefined
* ನನ್ನ ಟೈಮ್ ಸರಿ ಇಲ್ಲ, ಗ್ರಹಚಾರ ಕೆಟ್ಟು ಇವೆಲ್ಲಾ ಆಗ್ತಿದೆ
* ವಿಧಿಬರಹ ಏನಿದ್ಯೋ ಅದೆಲ್ಲವನ್ನೂ ಅನುಭವಿಸಲೇಬೇಕಿದೆ
* ಡೆವಿಲ್ ಅನ್ನೋ ಒಳ್ಳೆಯ ಸಿನಿಮಾ ಕೈನಲ್ಲಿತ್ತು, ಅದು ಈ ಕಾರಣಕ್ಕೆ ನಿಂತೋಗಿದೆ.
* ಈ ಪರಿಸ್ಥಿತಿಯಿಂದ ಪ್ಯಾನ್ ಇಂಡಿಯಾ ಸಿನಿಮಾ ಪ್ಲಾನ್‌ಗಳೆಲ್ಲವೂ ತಲೆಕಳೆಗಾಯ್ತು
* ಹೆಂಡತಿ, ಮಗನೊಂದಿಗೆ ನಾನು ಆರಾಮಾಗಿ ಇರಬಹುದಾಗಿತ್ತು
* ಬೇಡವಾಗಿದ್ದ ಸಹವಾಸ ಮಾಡಿ ಜೈಲು ಸೇರುವ ಪರಿಸ್ಥಿತಿ ಬಂತು
* ಆ ಸಾವು ಆಗಬಾರದಿತ್ತು, ಆಗಿ ಹೋಗಿದೆ. ಈಗ ಏನು ಹೇಳಿದರೂ ಪ್ರಯೋಜನವಿಲ್ಲ
* ನಾನಿರುವ ಈ ಸಂದರ್ಭದಲ್ಲಿ ಆ ಸಾವಿನ ಬಗ್ಗೆ ನಾನು ಏನೇ ಅಂದ್ರೂ ಅದು ನಾಟಕ ಅನ್ನಿಸುತ್ತೆ, ಹೀಗಾಗಿ ಸುಮ್ಮನೇ ಇರೋದೇ ಒಳ್ಳೆಯದು.
* ವೈಯಕ್ತಿಕವಾಗಿ ಆ ಕುಟುಂಬಕ್ಕೆ ನನ್ನಿಂದ ಏನಾದ್ರೂ ಸಹಾಯ ಮಾಡುವ ಮನಸ್ಸಿದೆ
* ತಪ್ಪು ಆಗಿದ್ಯೋ ಇಲ್ಲವೋ, ಆದ್ರೆ ನನ್ನ ಮೇಲೆ ಒಂದಿಷ್ಟು ಹೊಣೆಯಂತೂ ಇದ್ದೇ ಇದೆ.
ಕೊಲೆ ಆರೋಪಿಯಾಗುವ ಮೊದಲು ನಟ ದರ್ಶನ್ ಅವರು ಸದಾ ಸ್ನೇಹಿತರ ಬಳಗದೊಂದಿಗೆ ಓಡಾಡುತ್ತಿದ್ದರು. ಅವರ ಜೊತೆ ಕೆಲವರು ಖಾಯಮ್ಮಾಗಿ ಇರುತ್ತಿದ್ದರೆ, ಹಲವರು ಆಗಾಗ ಜೊತೆಯಾಗುತ್ತಿದ್ದರು. ಅವರದೊಂದು ಗುಂಪು ಸದಾ ಜೊತೆಗಿರುತ್ತಿತ್ತು. ಅದನ್ನು ಪಟಾಲಂ, ಗ್ಯಾಂಗ್, ಸಹಚರರು ಹೀಗೆ ಯಾವುದೇ ಹೆಸರಿನಿಂದ ಕರೆದರೂ ಅದೊಂದು ದರ್ಶನ್ ಆಪ್ತರ ಬಳಗ. ಆದರೆ, ಈಗ ಅವರಾರೂ ಜೊತೆಗಿಲ್ಲದೇ ಜೈಲಿನಲ್ಲಿ ನಟ ದರ್ಶನ್ ಒಬ್ಬಂಟಿಯಾಗಿ ಕಾಲ ಕಳೆಯುತ್ತಿದ್ದಾರೆ.
ಬಾಹುಬಲಿ ಚಿತ್ರದಲ್ಲಿ ಕಾಲಕೇಯ ಮಾತಾಡೋ ಭಾಷೆ ಯಾವುದು; ಸೃಷ್ಟಿಕರ್ತ ಯಾರು ಗೊತ್ತಾ?
ಪಟ್ಟಣಗೆರೆ ಶೆಡ್‌ನಲ್ಲಿ ಎಲ್ಲರೂ ಒಟ್ಟಾಗಿ ಆ ಕೃತ್ಯದಲ್ಲಿ ಭಾಗಿಯಾಗಿದ್ದರೂ, ಈಗ ಜೈಲಿನಲ್ಲಿ ಅವರೆಲ್ಲರೂ ಬೇರೆಬೇರೆ ವ್ಯಕ್ತಿಗಳಾಗಿಯೇ ಇದ್ದಾರೆ. ಇಡೀ ಘಟನೆಗೆ ಕಾರಣಕರ್ತೆ ಪವಿತ್ರಾ ಗೌಡ ಆಗಿದ್ದರೂ, ನಡೆದ ಕೊಲೆ ಕೃತ್ಯದಲ್ಲಿ ಅವರದು ನೇರವಾದ ಪಾತ್ರವಿದೆಯೇ, ಅಥವಾ ಅವರೀಗ ಸೇಫ್ ಜೋನ್ ಸೇರಿಕೊಂಡಿದ್ದಾರೆಯೇ ಎಂಬುದು ತನಿಖೆ ಮುಗಿದ ಬಳಿಕ ತಿಳಿಯಬೇಕಿದೆ. ಆದರೆ, ಈಗ ಪವಿತ್ರಾ ಹಾಗೂ ದರ್ಶನ್ ಕೃತ್ಯಕ್ಕಿಂತ ಮೊದಲಿದ್ದಂತೆ ಸ್ನೇಹಿತರಾಗಿ ಉಳಿದಿಲ್ಲ ಎನ್ನುತ್ತವೆ ಮೂಲಗಳು.
ಇಡೀ ಕೇಸ್ ತನಿಖೆ ಹಂತದಲ್ಲಿ ಇರುವುದರಿಂದ, ಸದ್ಯಕ್ಕೆ ಯಾವುದೇ ಮಾಹಿತಿಯನ್ನು ಅಧೀಕೃತ ಎನ್ನುವಂತಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ತನಿಖೆ ಮಾಡಿರುವ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಲಿದ್ದಾರೆ. ಆಮೇಲೆ ಘನ ನ್ಯಾಯಾಲಯವು ಆರೋಪಿಗಳು ಯಾರು ಅಪರಾಧಿಗಳು ಯಾರು ಎಂದು ಘೋಷಿಸಲಿದೆ. ಅಲ್ಲಿಯವರೆಗೆ ಹೊರಬಂದ ಮಾಹಿತಿ ಮೂಲಕ ಈ ಹಂತದಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯಂತೂ ಇದ್ದೇ ಇರುತ್ತದೆ.
ಧ್ಯಾನ್-ರಮ್ಯಾ 'ಅಮೃತಧಾರೆ'ಯಲ್ಲಿ ನಟಿಸಲು ಬಿಗ್ ಅಮಿತಾಭ್ ಬಚ್ಚನ್ ಹಾಕಿದ್ದ ಕಂಡೀಷನ್ ಏನಿತ್ತು?
ಸದ್ಯ ನಟ ದರ್ಶನ್ ಪಶ್ಚಾತ್ತಾಪದಲ್ಲಿ ಬೇಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅದೂ ಕೂಡ ಬೆಂಗಳೂರಿಂದ ಬಳ್ಳಾರಿಗೆ ಶಿಫ್ಟ್ ಆಗುವ ಮಾರ್ಗ ಮಧ್ಯೆ ತಮ್ಮದೇ ಜೀವನವನ್ನು ಅವಲೋಕಿಸಿಕೊಂಡು ನಟ ದರ್ಶನ್ ಅಕ್ಕಪಕ್ಕದಲ್ಲಿದ್ದ ಪೊಲೀಸರ ಜತೆ ಮಾತನಾಡುವ ವೇಳೆ ಹೀಗೆ ಹೇಳಿದ್ದಾರೆ ಎನ್ನಲಾಗುತ್ತಿದೆ. ಅದೇನೇ ಆದರೂ, ಆರೋಪ ಸಾಬೀತಾದರೆ, ಅಪರಾಧಿ ಎನಿಸಿಕೊಂಡು ಶಿಕ್ಷೆ ಅನುಭವಿಸಲೇಬೇಕು. ಇಲ್ಲವೆಂದರೆ, ಬಿಡುಗಡೆ ಭಾಗ್ಯ ಎಲ್ಲ ಆರೋಪಿಗಳಿಗೂ ಇದ್ದೇ ಇದೆ!