Vineesh Birthday : ದರ್ಶನ್ ಪುತ್ರ ವಿನೀಶ್​ಹುಟ್ಟುಹಬ್ಬ; ವಿಜಯಲಕ್ಷ್ಮೀ 'ಸ್ಪೆಷಲ್ ಬುದ್ದಿಮಾತು' ಸಖತ್ ವೈರಲ್ ಆಯ್ತು!

Published : Oct 31, 2026, 10:48 AM IST
Vineesh Thoogudeepa

ಸಾರಾಂಶ

ದರ್ಶನ್ ಪುತ್ರ ವಿನೀಶ್ 18ನೇ ಹುಟ್ಟುಹಬ್ಬ ಆಚರಿಸಿಕೊಳ್ದಳುತ್ತಿದ್ದಾರೆ. ದರ್ಶನ್ ಪುತ್ರ ವಿನೀಶ್ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಿದ್ದರೂ, ಆಗಾಗ್ಗೆ ಮಾತ್ರ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಮಗನ ಹುಟ್ಟುಹಬ್ಬದಂದು ಅಮ್ಮ ವಿಜಯಲಕ್ಷ್ಮೀ ಸ್ಪೆಷಲ್ ವಿಶ್ ಹಂಚಿಕೊಂಡಿದ್ದಾರೆ.

Vineesh Birthday : ದರ್ಶನ್ ಪುತ್ರ ವಿನೀಶ್​ ಹುಟ್ಟುಹಬ್ಬ; ವಿಜಯಲಕ್ಷ್ಮೀ ಸ್ಪೆಷಲ್ ವಿಶ್‌

ಕನ್ನಡದ ಸ್ಟಾರ್ ನಟ ದರ್ಶನ್ ಪುತ್ರ ವಿನೀಶ್ ತೂಗುದೀಪ್ ಇಂದು (ಅಕ್ಟೋಬರ್ 31) ತಮ್ಮ 18ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು ತಾಯಿ ವಿಜಯಲಕ್ಷ್ಮೀ ದರ್ಶನ್ ಅವರು ಮಗನಿಗೆ ಪ್ರೀತಿಯಿಂದ ಶುಭಾಶಯ ಕೋರಿದ್ದಾರೆ. ಆದರೆ ಈ ಬಾರಿಯ ಹುಟ್ಟುಹಬ್ಬದ ಆಚರಣೆ ಕೊಂಚ ಭಿನ್ನವಾಗಿತ್ತು. ಪತಿ ದರ್ಶನ್ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮೀ ಅವರು ಮಧ್ಯರಾತ್ರಿಯೇ ಮಗನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಮಗನೊಂದಿಗಿನ ಸುಂದರ ಕ್ಷಣಗಳ ಫೋಟೊಗಳನ್ನು ಹಂಚಿಕೊಂಡು ಭಾವುಕ ಸಂದೇಶವೊಂದನ್ನು ಬರೆದಿದ್ದಾರೆ.

ವಿನೀಶ್ ಜೀವನದ 18ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ವಿಜಯಲಕ್ಷ್ಮೀ ಅವರ ಶುಭಾಶಯದ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ. ಕೇವಲ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುವುದಷ್ಟೇ ಅಲ್ಲದೆ, ಜೀವನದಲ್ಲಿ ಎದುರಾಗುವ ಕಷ್ಟಗಳು ಮತ್ತು ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆಯೂ ಮಗನಿಗೆ ಕೆಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ.

"ನೀನು ಉತ್ತಮ ಚಾರಿತ್ರ್ಯ, ಧೈರ್ಯ ಮತ್ತು ದಯಾಗುಣವುಳ್ಳ ವ್ಯಕ್ತಿಯಾಗಿ ಬೆಳವಣಿಗೆ ಹೊಂದಬೇಕು. ಜೀವನ ನಿನಗೆ ಸಾಕಷ್ಟು ಪಾಠಗಳನ್ನು ಕಲಿಸುತ್ತದೆ. ಹಾಗಾಗಿ ಪ್ರತಿಯೊಂದು ಸವಾಲನ್ನೂ ಶಕ್ತಿಯಿಂದ ಎದುರಿಸು. ನಿನ್ನಲ್ಲಿರುವ ಒಳ್ಳೆಯತನವನ್ನು ಎಂದಿಗೂ ಕಳೆದುಕೊಳ್ಳಬೇಡ. 18ನೇ ಹುಟ್ಟುಹಬ್ಬದ ಶುಭಾಶಯಗಳು ವಿನೀಶ್ ಬಂಗಾರು" ಎಂದು ವಿಜಯಲಕ್ಷ್ಮೀ ಬರೆದುಕೊಂಡಿದ್ದಾರೆ.

ಬ್ಲ್ಯಾಕ್ ಅಂಡ್ ವೈಟ್ ಥೀಮ್‌ನಲ್ಲಿ ಬರ್ತ್‌ಡೇ ಸೆಲೆಬ್ರೇಷನ್

ಮಗನ ವಿಶೇಷ ದಿನವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಲು ವಿಜಯಲಕ್ಷ್ಮೀ ವಿಶೇಷ ಸಿದ್ಧತೆ ಮಾಡಿಕೊಂಡಿದ್ದರು. ಬ್ಲ್ಯಾಕ್ ಅಂಡ್ ವೈಟ್ ಥೀಮ್‌ನಲ್ಲಿ ಹುಟ್ಟುಹಬ್ಬದ ಅಲಂಕಾರ ಮಾಡಿಸಿ ಮಧ್ಯರಾತ್ರಿಯೇ ವಿನೀಶ್ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ತಾಯಿ ಮತ್ತು ಮಗ ಒಟ್ಟಿಗೆ ಇರುವ ಹಲವು ಫೋಟೊಗಳನ್ನು ಹಂಚಿಕೊಂಡಿರುವ ಅವರು, ತಮ್ಮ ಪ್ರೀತಿಯನ್ನು ವಿಶೇಷವಾಗಿ ವ್ಯಕ್ತಪಡಿಸಿದ್ದಾರೆ.

ವಿಜಯಲಕ್ಷ್ಮೀ ಅವರ ಈ ಪೋಸ್ಟ್‌ಗೆ ದರ್ಶನ್ ಅಭಿಮಾನಿಗಳು ಹಾಗೂ ವಿನೀಶ್ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. 18ನೇ ವಯಸ್ಸಿಗೆ ಕಾಲಿಟ್ಟಿರುವ ವಿನೀಶ್‌ಗೆ ಉತ್ತಮ ಭವಿಷ್ಯ ಸಿಗಲಿ ಎಂದು ಹಲವರು ಹಾರೈಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಕಡಿಮೆ ಸಕ್ರಿಯವಾಗಿರುವ ವಿನೀಶ್

ಇನ್ನು ದರ್ಶನ್ ಪುತ್ರ ವಿನೀಶ್ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಿದ್ದರೂ, ಆಗಾಗ್ಗೆ ಮಾತ್ರ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ತಂದೆಯಂತೆ ಸಿನಿಮಾ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಯೂಟ್ಯೂಬರ್‌ಗಳ ವಿಡಿಯೋಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ಇದೀಗ 18ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ.

ಒಟ್ಟಿನಲ್ಲಿ, ಮಗನ ಹುಟ್ಟುಹಬ್ಬದಂದು ವಿಜಯಲಕ್ಷ್ಮೀ ಹಂಚಿಕೊಂಡಿರುವ ಫೋಟೊಗಳು ಮತ್ತು ಜೀವನದ ಮೌಲ್ಯಗಳನ್ನು ತಿಳಿಸುವ ಸಂದೇಶ ಅಭಿಮಾನಿಗಳ ಮನಮುಟ್ಟಿದೆ. ಮಗನ ಮುಂದಿನ ಜೀವನ ಧೈರ್ಯ, ಒಳ್ಳೆಯತನ ಮತ್ತು ಯಶಸ್ಸಿನಿಂದ ಕೂಡಿರಲಿ ಎಂಬ ತಾಯಿಯ ಹಾರೈಕೆ ಈ ಬರ್ತ್‌ಡೇ ಪೋಸ್ಟ್‌ನ ವಿಶೇಷ ಆಕರ್ಷಣೆಯಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿ: ಸಾವಿತ್ರಿ, ಜಮುನಾಗೂ ಪೈಪೋಟಿ ನೀಡಿದ್ದ ಕನ್ನಡದ ಈ ನಟಿ ಯಾರು?
ಡಾ. ವಿಷ್ಣುವರ್ಧನ್‌, ಬಿ. ಸರೋಜಾದೇವಿಗೆ ʻಕರ್ನಾಟಕ ರತ್ನʼ ಪ್ರಶಸ್ತಿ ಪ್ರಧಾನ; ರಜನಿಕಾಂತ್‌ ಮುಖ್ಯ ಅತಿಥಿ? ನಟಿಯರಲ್ಲಿ ಯಾರು?