ನಟ ದರ್ಶನ್ ಸ್ಪರ್ಶಕ್ಕೆ ಕಾದಿದ್ದ ಕೆ.ಆರ್.ನಗರ ಬಸವನಿಗೆ ಅನಾರೋಗ್ಯ

Suvarna News   | Asianet News
Published : May 01, 2020, 11:06 AM ISTUpdated : May 01, 2020, 11:17 AM IST
ನಟ ದರ್ಶನ್ ಸ್ಪರ್ಶಕ್ಕೆ ಕಾದಿದ್ದ  ಕೆ.ಆರ್.ನಗರ  ಬಸವನಿಗೆ ಅನಾರೋಗ್ಯ

ಸಾರಾಂಶ

ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಕಾಳಮ್ಮನ ಕೊಪ್ಪಲುಗೆ ಆಗಮಿಸಿದ ದರ್ಶನ್‌ ಸ್ಪರ್ಶಕ್ಕೆ ಕಾದಿದ್ದ ಬಸವ ಈಗ  ಅನಾರೋಗ್ಯದಿಂದ ಬಳಲುತ್ತಿದೆ. 

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಪರ ಪ್ರಚಾರ ಮಾಡುತ್ತಿದ್ದ ಯಶ್‌, ದರ್ಶನ್‌ ಹಾಗೂ ಅಭಿಷೇಕ್‌ ಅಂಬರೀಶ್‌ ಅವರಿಗೆ ಅನೇಕ ಮನಕಲುಕುವಂಥ ಘಟನೆಗಳು ಎದುರಾಗಿತ್ತು . 

ಕೆ. ಆರ್‌. ನಗರ ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಪ್ರಚಾರ ಮಾಡುತ್ತಿದ್ದ ದರ್ಶನ್‌ ವಾಹನವನ್ನು ಅಡ್ಡ ಹಾಕಿ ಸ್ಪರ್ಶಕ್ಕೆ ಕಾಯುತ್ತಿದ್ದ ಬಸವ ಇಂದು ಅನಾರೋಗ್ಯದಿಂದ ಬಳಲುತ್ತಿದೆ. ಮೇವು, ನೀರು  ಬಿಟ್ಟು ನಿತ್ರಾಣವಾಗಿರುವ  ದೃಶ್ಯ ಇಲ್ಲಿದೆ..

ಪ್ರಚಾರದ ವೇಳೆ ರಸ್ತೆಯಲ್ಲಿ ವಾಹನ ಸವಾರಿ ಹೋಗುತ್ತಿದ್ದ ದರ್ಶನ್‌ರನ್ನು ಅಡ್ಡ ಹಾಕಿದ ಬಸವ ಗ್ರಾಮಸ್ಥರು . ಗದರಿಸಿ , ಹೊಡೆದರೂ ದಾರಿ ಬಿಡದೆ ಸತಾಯಿಸಿತ್ತು. ವಾಹನದಿಂದ ಕೆಳಗಿಳಿದು ದರ್ಶನ್‌ ಬಸವನನ್ನು ಮುಟ್ಟುತ್ತಿದ್ದಂತೆಯೇ ದಾರಿ ಬಿಟ್ಟಿತ್ತು.  ಇದೀಗ ಅದೇ ಬಸವ ಅನಾರೋಗ್ಯದಿಂದ ಬಳಲುತ್ತಿದ್ದು  ಕೊರೋನಾ ಲಾಕ್‌ಡೌನ್‌ ಪರಿಸ್ಥಿತಿ ನಡುವೆಯೂ ಕಾಳಮ್ಮನ ದೇವಾಲಯ ಆವರಣದಲ್ಲಿ ಗ್ರಾಮಸ್ಥರು ಬಸವನ ಶೀಘ್ರ ಚೇತರಿಕೆಗೆ ಆರೈಕೆ ಮಾಡುತ್ತಾ  ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ . 

ರಿಲೀಸ್ ಆಯ್ತು ಚಾಲೆಂಜಿಂಗ್ ಸ್ಟಾರ್ ಕೀನ್ಯಾದ ಅದ್ಭುತ ವಿಡಿಯೋ

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಪ್ರಾಣಿ ಪ್ರೇಮಿ ಎಂದು ಎಲ್ಲರಿಗೂ ತಿಳಿದಿರುವ ವಿಚಾರವೇ ಅದರಲ್ಲೂ ಕುದುರೆ, ನಾಯಿ ಹಾಗೂ ಹಸು ಕಂಡರೆ ಪಂಚ ಪ್ರಾಣ. ಶೂಟಿಂಗ್‌ ಇಲ್ಲದ ಅಥವಾ ಬಿಡುವಿನ ಸಮಯದಲ್ಲಿ ದರ್ಶನ್‌ ತಮ್ಮ ಮೈಸೂರಿನ ಫಾರ್ಮ್‌ ಹೌಸ್‌ನಲ್ಲಿ ಪ್ರಾಣಿಗಳಿಗೆ ಆರೈಕೆ ಮಾಡಿಕೊಂಡು ಸಮಯ ಕಳೆಯುತ್ತಾರೆ. 

ಇದೇ ಕೆ.ಆರ್. ಪೇಟೆ ಪ್ರಚಾರದಲ್ಲಿ ದರ್ಶನ್‌ಗೆ ಗ್ರಾಮಸ್ಥರು ಹಾಲು ಕರಿಯಲು ಸವಾಲ್‌ ಹಾಕಿದ್ದರು . ಹೌದು! ಸೋಮನಹಳ್ಳಿಯಲ್ಲಿರುವ ರೈತನೊಬ್ಬ ಹಾಲು ಕರೆಯುವಂತೆ ಸವಾಲು ಹಾಕಿದರು. ಸವಾಲು ಸ್ವೀಕರಿಸಿದ ದರ್ಶನ್‌ ಹಾಲು ಕರಿಯುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು. 

ಫಾರ್ಮ್‌ ಹೌಸ್‌ನಲ್ಲಿ ಮಗನ ಜೊತೆ ಒಡೆಯನ ಕುದುರೆ ಸವಾರಿ - ವಿಡಿಯೋ!

ಕುರುಕ್ಷೇತ್ರ ಚಿತ್ರದ ಹಿಟ್‌ ನಂತರ ದರ್ಶನ್‌ ಕೆಲ ಕಾಲ ಬ್ರೇಕ್‌ ತೆಗೆದುಕೊಂಡು ಕೀನ್ಯಾದ ಮಾಸಿಯಾ ಮಾರಾ ದತ್ತ ಹೊರಟಿದ್ದರು. ನಟನೆಯಷ್ಟೇ ಫೋಟೋಗ್ರಾಫಿಯನ್ನು ಇಷ್ಟ ಪಡುವ ದರ್ಶನ್‌ ಹಾಟ್‌ ಏರ್‌ ಬಲೂನ್‌ನಲ್ಲಿ ಚಲಾಯಿಸುತ್ತ  ಕ್ಯಾಮೆರಾ ಬಳಸುತ್ತಿರುವ ವಿಡಿಯೋ  ಎಲ್ಲೆಡೆ ವೈರಲ್‌ ಆಗಿತ್ತು. ಅದಾದ ನಂತರ ಚಿತ್ರತಂಡ ದರ್ಶನ್‌ ಕೀನ್ಯಾದಲ್ಲಿದ ಕ್ಷಣಗಳನ್ನು ವಿಡಿಯೋ ಮೂಲಕ ರಿಲೀಸ್‌ ಮಾಡಲಾಗಿತ್ತು.

ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾದ ದರ್ಶನ್‌ ಬೇರೆ ದೇಶಗಳಿಗೆ ತೆರಳಿ ಪ್ರಾಣಿಗಳ ಬಗ್ಗೆ ತಿಳಿದುಕೊಂಡು ತೋರಿಸುವ ಕಾಳಜಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ಡಿ-ಬಾಸ್‌ ನಾಯಿಗಳೆಂದರೂ  ಅಷ್ಟೇ ಇಷ್ಟ. ದಿವಂಗತ ನಟ ಅಂಬರೀಶ್‌ ಸಾಕಿದ ನಾಯಿ ಕನ್ವರ್‌ ಹಾಗೂ ಬುಲ್ ಬುಲ್ ಜೊತೆ ಕಾಲ ಕಳೆದಿದ್ದಾರೆ.  ದರ್ಶನ್‌ ಕನ್ವರ್‌ ಒಟ್ಟಾಗಿರುವ  ಪೋಟೋವನ್ನು ಅಭಿಮಾನಿಗಳು ಫ್ಯಾನ್  ಪೇಜಿನಲ್ಲಿ ಹಂಚಿಕೊಂಡಿದ್ದರು .

ಅಂಬಿ ಮನೆಗೆ ರಾಬರ್ಟ್‌ ವಿಸಿಟ್; ಕನ್ವರ್‌ ಲಾಲ್‌ ಜೊತೆ ಫೋಟೋ ಸೂಪರ್!

ಇನ್ನು ತನ್ನ ಪ್ರಾಣಿ ಒಲವು ಮಗ ವಿನೀಶ್‌ಗೂ ಇರಲಿ ಎಂದು ದರ್ಶನ್‌ ಚಿಕ್ಕ ವಯಸ್ಸಿನಿಂದಲೇ ಮಗನನ್ನ ಪ್ರಾಣಿಗಳ ಜೊತೆ ಹೆಚ್ಚು ಒಡನಾಟ ಮೂಡುವಂತೆ ಬೆಳೆಸುತ್ತಿದ್ದಾರೆ . 2020ರ ಯುಗಾದಿಯಲ್ಲಿ ಕುದುರೆಗಳಿಗೆ ಕಿಚ್ಚು ಹಾಯಿಸಿದ ಕೆಲ ದಿನಗಳ ನಂತರ ಪುತ್ರನಿಗೆ ಕುದುರೆ ಸವಾರಿ ಹೇಳಿಕೊಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!