
ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ಕೇಸರಿ ಬಿಕಿನಿ ವಿವಾದದ ಬಗ್ಗೆ ಸ್ಯಾಂಡಲ್ ವುಡ್ ನಟ ಚೇತನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ವಿವಾದ ಅಥವಾ ಘಟನೆಗಳ ಬಗ್ಗೆ ನಟ ಚೇತನ್ ತನ್ನ ಅಭಿಪ್ರಾಯ ಹೊರಹಾಕುತ್ತಾರೆ. ಇದೀಗ ಪಠಾಣ್ ವಿವಾದದ ಬಗ್ಗೆಯೂ ಮಾತನಾಡಿದ್ದಾರೆ. ಕೇಸರಿ ಬಣ್ಣ ತ್ಯಾಗದ ಸಂಕೇತ, ಹಿಂದುತ್ವದ ಸಂಕೇತ ಆಗಬಾರದು ಎಂದು ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ನಟ ಚೇತನ್, 'ಬಸವಣ್ಣ, ಬುದ್ದ ಸೇರಿ ಬಹಳ ಜನ ಹಾಕಿದ್ದಾರೆ. ಇಂತಹ ಬಣ್ಣವನ್ನ ಒಂದು ಸಿದ್ದಾಂತಕ್ಕೆ ಸೀಮಿತ ಮಾಡೋದು ಸರಿಯಲ್ಲ. ಯಾರೂ ಕೂಡ ಇದನ್ನ ಹೈಜಾಕ್ ಮಾಡಬಾರದು' ಎಂದು ಹೇಳಿದರು.
'ಕೇಸರಿ ಹಿಂದುತ್ವದ ಬಣ್ಣ ಆಗಲಾರದು. ನಮ್ಮ ದೇಶದ ತ್ರಿವರ್ಣ ಧ್ವಜದಲ್ಲೂ ಕೇಸರಿ ಇದೆ. ಹಾಗಾಗಿ ಇದು ಅನ್ಯಾಯದ ಹೋರಾಟ. ಹಸಿರು ಬಣ್ಣ ಕೂಡ ಒಂದು ವರ್ಗದ ಬಣ್ಣ ಅಲ್ಲ. ಸಣ್ಣ ಸಣ್ಣದಕ್ಕೂ ತಪ್ಪು ಹುಡುಕೋದು ಇವರ ಪ್ರೇಮ್ ವರ್ಕ್ ಆಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಹುನ್ನಾರ. ಇದನ್ನು ರಾಜಕೀಯವಾಗಿ ಬಳಸುತ್ತಿರೋದು, ವಿರೋಧ ಮಾಡುತ್ತಿರುವವರ ವಿಚಾರದ ಕೊರತೆಯನ್ನು ತೋರಿಸುತ್ತದೆ' ಎಂದು ಹೇಳಿದರು.
ಪಂಚಮಸಾಲಿಗಳ ಹೋರಾಟ ನ್ಯಾಯ ಸಮ್ಮತವಲ್ಲ: ಮೀಸಲಾತಿ ವಿಚಾರ ಚೇತನ್ ಮಾತು
ನಟ ಚೇತನ್ ಕುಮಾರ್ ಇತ್ತೀಚೆಗಷ್ಟೆ ಒಡನಾಡಿ ಸಂಸ್ಥೆಗೆ ಭೇಟಿ ನೀಡಿದ್ದರು. ಮೈಸೂರಿನ ಹೂಟಗಹಳ್ಳಿಯಲ್ಲಿರುವ ಸಂಸ್ಥೆ. ಒಡನಾಡಿ ಸಂಸ್ಥೆ ಮುಖ್ಯಸ್ತರು ಹಾಗೂ ಸ್ಯಾಂಟ್ರೋ ರವಿ ಪತ್ನಿ ಜೊತೆ ಮಾತುಕತೆ ನಡೆಸಿದರು. ಒಡನಾಡಿ ಸಂಸ್ಥೆ 32 ವರ್ಷಗಳಿಂದ ಅನ್ಯಾಯದ ವಿರುದ್ಧ ಕೆಲಸ ಮಾಡಿಕೊಂಡು ಬಂದಿದೆ. ಬಲಹೀನರ ಪರ ನಿಂತು ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಮುರುಘಾ ಮಠ ಹಾಗೂ ಸ್ಟ್ಯಾನ್ಲಿ ಪ್ರಕರಣದಲ್ಲಿ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಿ ನಾನು ಕುಟುಂಬ ಸಮೇತ ಅವರನ್ನು ನೋಡಲು ಬಂದಿದ್ದೇನೆ. ನಾನು ಎಂದೆಂದಿಗೂ ಅವರ ಜೊತೆ ಇರುತ್ತೇನೆ' ಎಂದು ಹೇಳಿದ್ದಾರೆ.
'ಪಾಕ್ ಜಿಂದಾಬಾದ್' ಪರ ವಿವಾದಾತ್ಮಕ ಪೋಸ್ಟ್: ವಿವಾದಕ್ಕೆ ಕಾರಣವಾದ ನಟ ಚೇತನ್ ಕುಮಾರ್ ಹೇಳಿಕೆ
'2018ರಲ್ಲಿ ಮೀ ಟೂ ಹೋರಾಟ ಆದಾಗ ಮಹಿಳೆಗೆ ಘನತೆ ತರಬೇಕು ಅಂತ ಹೋರಾಡಿದ್ದೇವೆ. ಮಹಿಳೆಗೆ ಅನ್ಯಾಯ ಆದಾಗ ಆಕೆಯನ್ನ ಅವಮಾನ ಮಾಡಿ ನಿಂದಿಸೋರು ಇದ್ದಾರೆ. ಮುರಾಘಾ ಪ್ರಕರಣದಲ್ಲೂ ಹೆಣ್ಣು ಮಕ್ಕಳ ಜೊತೆ ನಿಂತು ನ್ಯಾಯ ಹೊದಗಿಸುವ ಕೆಲಸ ಮಾಡಿದೆ ಒಡನಾಡಿ ಮಾಡದೆ. ಇಂತಹ ಸಂಸ್ಥೆಗಳು ರಾಜ್ಯದಲ್ಲಿ ಹೆಚ್ಚು ಹೆಚ್ಚು ಬೆಳೆಯಬೇಕು' ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.