Upendra Birthday; ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರಿಯಲ್ ಸ್ಟಾರ್‌‌ಗೆ ಶುಭಾಶಯಗಳ ಮಹಾಪೂರ

Published : Sep 18, 2022, 10:20 AM IST
Upendra Birthday; ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರಿಯಲ್ ಸ್ಟಾರ್‌‌ಗೆ ಶುಭಾಶಯಗಳ ಮಹಾಪೂರ

ಸಾರಾಂಶ

ಸ್ಯಾಂಡಲ್ ವುಡ್‌ನ ರಿಯಲ್ ಸ್ಟಾರ್, ವಿಭಿನ್ನ ನಿರ್ದೇಶಕ, ನಟ ಉಪೇಂದ್ರ ಅವರಿಗೆ ಇಂದು (ಸೆಪ್ಟೆಂಬರ್ 18) ಹುಟ್ಟುಹಬ್ಬದ ಸಂಭ್ರಮ. ಉಪ್ಪಿ ಇಂದು ತಮ್ಮ 54ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಈ ಬಾರಿ ರಿಯಲ್ ಸ್ಟಾರ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜತೆ ಆಚರಿಸಿಕೊಳ್ಳುತ್ತಿದ್ದಾರೆ.

ಸ್ಯಾಂಡಲ್ ವುಡ್‌ನ ರಿಯಲ್ ಸ್ಟಾರ್, ವಿಭಿನ್ನ ನಿರ್ದೇಶಕ, ನಟ ಉಪೇಂದ್ರ ಅವರಿಗೆ ಇಂದು (ಸೆಪ್ಟೆಂಬರ್ 18) ಹುಟ್ಟುಹಬ್ಬದ ಸಂಭ್ರಮ. ಉಪ್ಪಿ ಇಂದು ತಮ್ಮ 54ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಈ ಬಾರಿ ರಿಯಲ್ ಸ್ಟಾರ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜತೆ ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ಕೊರೊನಾ ಕಡಿಮೆಯಾಗಿದೆ. ಹಾಗಾಗಿ ಉಪೇಂದ್ರ ತನ್ನ ಅಭಿಮಾನಿಗಳ ಜೊತೆ ಈ ವಿಶೇಷ ದಿನವನ್ನು ಕಳೆಯುತ್ತಿದ್ದಾರೆ. ಅಭಿಮಾನಿಗಳ ಪ್ರೀತಿಯ ಶುಭಹಾರೈಕೆ ಸ್ವೀಕರಿಸುತ್ತಿದ್ದಾರೆ. ರಿಯಲ್ ಸ್ಟಾರ್ ನೋಡಲು, ವಿಶ್ ಮಾಡಲು ಅಭಿಮಾನಿಗಳ ದಂಡೆ ನೆರೆದಿದೆ. ಸಾಮಾಜಿಕ ಜಾಲತಾಣದಲ್ಲೂ ಅಭಿಮಾನಿಗಳು ಉಪ್ಪಿ ಫೋಟೋ, ವಿಡಿಯೋ ಶೇರ್ ಮಾಡಿ ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳು ಸಹ ಬರ್ತ್​ಡೇ ವಿಶ್ ಮಾಡುತ್ತಿದ್ದಾರೆ. 

ಉಪೇಂದ್ರ ನಿವಾಸದ ಬಳಿ ಅಭಿಮಾನಗಳ ಸಾರವೇ ಹರಿದುಬಂದಿದೆ. ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ನಿವಾಸದಲ್ಲಿ ಅಭಿಮಾನಿಗಳು ರಿಯಲ್ ಸ್ಟಾರ್ ದರ್ಶನಕ್ಕೆ ಕಾದು ನಿಂತಿದ್ದಾರೆ. ರಾತ್ರಿಯಿಂದನೆ ಅಭಿಮಾನಿಗಳು ಉಪೇಂದ್ರ ಅವರ ನಿವಾಸದ ಬಂದು ಜಮಾಯಿಸಿದ್ದಾರೆ. ಮಧ್ಯೆ ರಾತ್ರಿಯೆ ಉಪೇಂದ್ರ ಅಭಿಮಾನಿಗಳನ್ನು ಭೇಟಿಯಾಗಿ ಪ್ರೀತಿಯ ಶುಭಾಹಾರೈಕೆಗಳನ್ನು ಸ್ವೀಕರಿಸಿದ್ದಾರೆ. ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಸಹ ಫುಲ್ ಖುಷ್ ಆಗಿದ್ದಾರೆ. ರಾತ್ರಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇಂದು ಕೂಡ ರಿಯಲ್ ಸ್ಟಾರ್ ಪ್ರೀತಿಯ ಅಭಿಮಾನಿಗಳ ಜೊತೆ ಸಮಯ ಕಳೆಯಲಿದ್ದಾರೆ. ಅಭಿಮಾನಿಗಳಿಗಾಗಿ ಈ ದಿನವನ್ನು ಮೀಸಲಿಟ್ಟಿದ್ದಾರೆ. 

ಇನ್ನು ರಿಯಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಈಗಾಗಲೇ ಬಹುನಿರೀಕ್ಷೆಯ ಕಬ್ಜ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ನಿನ್ನೆ (ಸೆಪ್ಟಂಬರ್ 17) ಕಬ್ಜ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈಗಾಗಲೇ ಕಬ್ಜ ಟೀಸರ್ ಟ್ರೆಂಡಿಂಗ್ ನಲ್ಲಿದೆ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ನಾಯಕಿಯಾಗಿ ಶ್ರಿಯಾ ಶರಣ್ ಕಾಣಸಿಕೊಂಡಿದ್ದಾರೆ. ಆರ್ ಚಂದ್ರು ನಿರ್ದೇಶನದಲ್ಲಿ ಕಬ್ಜ ಸಿನಿಮಾ ಮೂಡಿಬಂದಿದೆ. ಕಬ್ಜ ಟೀಸರ್ ರಿಯಲ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. 

Kabzaa Teaser; ಅದ್ದೂರಿಯಾಗಿ ಎಂಟ್ರಿ ಕೊಟ್ಟ ಉಪೇಂದ್ರ-ಸುದೀಪ್, ಹೇಗಿದೆ ನೋಡಿ ಟೀಸರ್?

ಇನ್ನು ಇದೇ ಸಮಯದಲ್ಲಿ ರಿಯಲ್ ಸ್ಟಾರ್ ನಿರ್ದೇಶನದ ಯುಐ ಸಿನಿಮಾದಿಂದ ಏನಾದರೂ ವಿಶೇಷ ಗಿಫ್ಟ್ ಸಿಗುವ ಸಾಧ್ಯತೆ ಇದೆ. ಅನೇ ವರ್ಷಗಳ ಬಳಿಕ ರಿಯಲ್ ಸ್ಟಾರ್ ಯುಐ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಹಾಗಾಗಿ ಈಸಿನಿಮಾದ ಮೋಲು ನಿರೀಕ್ಷೆ ಹೆಚ್ಚಾಗಿದೆ. 

ಡಾ.ವಿಷ್ಣುವರ್ಧನ್ ಜನ್ಮದಿನೋತ್ಸವ; ಸ್ಯಾಂಡಲ್‌ವುಡ್ 'ಯಜಮಾನ'ನನ್ನು ಸ್ಮರಿಸಿದ ಅಭಿಮಾನಿಗಳು, ಗಣ್ಯರು

ವಿಷ್ಣುವರ್ಧನ್‌ರನ್ನ ಸ್ಮರಿಸಿದ ರಿಯಲ್ ಸ್ಟಾರ್ 

ಅಂದಹಾಗೆ ರಿಯಲ್ ಸ್ಟಾರ್ ಹಟ್ಟುಹಬ್ಬದ ದಿನವೇ ವಿಷ್ಣುದಾದಾ ಸಾಹಸಸಿಂಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಕೂಡ. ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿ ವಿಷ್ಣುವರ್ಧನ್ ಅವರಿಗೆ ವಿಶ್ ಮಾಡುವುದನ್ನು ಮರೆತಿಲ್ಲ. ವಿಷ್ಣುದಾದಾ ಜೊತೆ ಇರುವ ಫೋಟೋ ಶೇರ್ ಮಾಡಿ ಸಾಹಸಸಿಂಹನನ್ನು ಸ್ಮರಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ