
ಪತ್ರಕರ್ತ ಹಾಗೂ ಕಲಾವಿದ ಯತಿರಾಜ್ ನಿರ್ದೇಶನದ "ಸತ್ಯಂ ಶಿವಂ" ಚಿತ್ರ ಫೆಬ್ರವರಿ 2 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಟ್ರೇಲರ್ ಹಾಗೂ ಹಾಡುಗಳ ಮೂಲಕ ಈ ಚಿತ್ರ ಈಗಾಗಲೇ ಜನಪ್ರಿಯವಾಗಿದೆ. ಚಿತ್ರದ ಬಿಡುಗಡೆ ಬಗ್ಗೆ ಮಾತನಾಡಿದ ನಿರ್ದೇಶಕ ಯತಿರಾಜ್ , ವಿಭಿನ್ನ ಕಥಾಹಂದರ ಹೊಂದಿರುವ 'ಸತ್ಯಂ ಶಿವಂ' ಚಿತ್ರ ಫೆಬ್ರವರಿ 2ರಂದು ಬಿಡುಗಡೆಯಾಗುತ್ತಿದೆ.
ಈ ಬಗ್ಗೆ ಪತ್ರಕರ್ತ ಹಾಗು ಈ ಚಿತ್ರದ ನಿರ್ದೇಶಕರಾದ ಯತಿರಾಜ್ 'ನಮ್ಮ ಚಿತ್ರದ ನಿರ್ಮಾಪಕ ಬುಲೆಟ್ ರಾಜು ಅವರೆ ನಾಯಕರಾಗಿಯೂ ನಟಿಸಿದ್ದಾರೆ. ಸಂಜನಾ ನಾಯ್ಡು ಈ ಚಿತ್ರದ ನಾಯಕಿ. ಮೈಕೋ ನಾಗರಾಜ್, ಬಾಲ ರಾಜವಾಡಿ, ಅರವಿಂದ್ ರಾವ್, ಸಂಗೀತ, ಸುಂದರಶ್ರೀ, ತೇಜಸ್ವಿನಿ, ತನುಜಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಾನು ಕೂಡ ನಟಿಸಿದ್ದೇನೆ.
ಮಾಜಿ ಭುವನ ಸುಂದರಿಗೆ ಮ್ಯಾಸಿವ್ ಹಾರ್ಟ್ ಅಟ್ಯಾಕ್; ಹೃದಯದಿಂದ ಬಂದವು ಗೋಲ್ಡನ್ ಟಿಪ್ಸ್!
ವಿದ್ಯಾ ನಾಗೇಶ್ ಛಾಯಾಗ್ರಹಣ, ವಿ.ಮನೋಹರ್ ಸಂಗೀತ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಈ (Satyma Shivam) ಚಿತ್ರಕ್ಕಿದೆ. ಸಸ್ಪೆನ್ಸ್, ಸೆಂಟಿಮೆಂಟ್, ಥ್ರಿಲ್ಲರ್ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಫೆಬ್ರವರಿ 2 ರಂದೆ ತೆರೆಗೆ ಬರುತ್ತಿರುವ ನಮ್ಮ ಚಿತ್ರವನ್ನು ನೋಡಿ. ಪ್ರೋತ್ಸಾಹ ನೀಡಿ' ಎಂದರು.
ಹೊಸ ಹೆಜ್ಜೆ ಹಾಕಲಿರುವ 'ಪ್ರಾಣಸಖಿ' ಭಾವನಾ; ಸಾಥ್ ಕೊಡ್ತಾರಾ ಸಿದ್ದರಾಮಯ್ಯ-ಡಿಕೆಶಿ, ನಟ ದರ್ಶನ್!
'ನಾನು ಈ ಹಿಂದೆ ಬಿಕ್ಷುಕ ಎಂಬ ಸಿನಿಮಾ ಮಾಡಿದ್ದೆ. ಇದು ಎರಡನೇ ಸಿನಿಮಾ. ಯತಿರಾಜ್ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಬಂದಿದೆ. ಸೆನ್ಸಾರ್ ಮಂಡಳಿ ಯಾವುದೇ ಕಟ್ ಇಲ್ಲದೆ ಯು/ಎ ಅರ್ಹತಾಪತ್ರ ನೀಡಿದೆ' ಎಂದು ತಿಳಿಸಿದ ನಿರ್ಮಾಪಕ ಮತ್ತು ನಾಯಕ ಬುಲೆಟ್ ರಾಜು, ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು.
ನಾಯಕಿ ಸಂಜನಾ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಸಿರಿ ಮ್ಯೂಸಿಕ್ ಸುರೇಶ್ ಚಿಕ್ಕಣ್ಣ ಈ ಚಿತ್ರದ ಹಾಡುಗಳು ಈಗಾಗಲೇ ಎಲ್ಲರ ಮನ ಗೆದ್ದಿದೆ ಎಂದರು. ಛಾಯಾಗ್ರಾಹಕ ವಿದ್ಯಾ ನಾಗೇಶ್, ಸಹ ನಿರ್ದೇಶಕರಾದ ಅರುಣ್ ಕುಮಾರ್ ಮತ್ತು ಸೋನು ಸಾಗರ , ಮುಂತಾದ ತಂತ್ರಜ್ಞರು ಹಾಗೂ ಕಲಾವಿದರು 'ಸತ್ಯಂ ಶಿವಂ' ಬಗ್ಗೆ ಮಾತನಾಡಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.