ಸೆಟ್ಟೇರಲಿದೆ ಪ್ರೀಮಿಯರ್‌ ಪದ್ಮಿನಿ 2; ಮತ್ತೆ ಜತೆಯಾದ ಶ್ರುತಿ ನಾಯ್ಡು, ಜಗ್ಗೇಶ್‌!

Suvarna News   | Asianet News
Published : Sep 25, 2021, 02:02 PM ISTUpdated : Sep 25, 2021, 02:06 PM IST
ಸೆಟ್ಟೇರಲಿದೆ ಪ್ರೀಮಿಯರ್‌ ಪದ್ಮಿನಿ 2; ಮತ್ತೆ ಜತೆಯಾದ ಶ್ರುತಿ ನಾಯ್ಡು, ಜಗ್ಗೇಶ್‌!

ಸಾರಾಂಶ

ಪ್ರೀಮಿಯರ್ ಪದ್ಮಿನಿ ಸೂಪರ್ ಹಿಟ್ ಆದಂತೆ ಎರಡನೇ ಭಾಗ ನೋಡಬೇಕೆಂದು ಡಿಮ್ಯಾಂಡ್ ಮಾಡುತ್ತಿದ್ದ ಅಭಿಮಾನಿಗಳಿಗೆ ಸಿಕ್ಕಿದೆ ಗುಡ್ ನ್ಯೂಸ್. ಮತ್ತೆ ಒಂದಾದ ಜಗ್ಗೇಶ್ ಆ್ಯಂಡ್ ಪ್ರಮೋದ್....  

ನಿರ್ಮಾಪಕಿ ಶ್ರುತಿ ನಾಯ್ಡು, ನಟ ಜಗ್ಗೇಶ್‌ (Jaggesh), ಪ್ರಮೋದ್‌ ಹಾಗೂ ನಿರ್ದೇಶಕ ರಮೇಶ್‌ ಇಂದಿರಾ (Ramesh Indira) ಮತ್ತೆ ಜತೆಯಾಗಿದ್ದಾರೆ. ಇವರ ಕಾಂಬಿನೇಶನ್‌ನಲ್ಲಿ ‘ಪ್ರೀಮಿಯರ್‌ ಪದ್ಮಿನಿ 2’ (Premier Padmini-2) ಶೀಘ್ರದಲ್ಲೇ ಸೆಟ್ಟೇರಲಿದೆ. ಈ ಸುದ್ದಿಯನ್ನು ಶ್ರುತಿ ನಾಯ್ಡು ಅವರೇ ಅಧಿಕೃತವಾಗಿ ಘೋಷಿಸಿದ್ದಾರೆ.

ಈ ಬಗ್ಗೆ ನಿರ್ಮಾಪಕಿ ಶ್ರುತಿ ನಾಯ್ಡು ಹೇಳಿದ್ದು ಇಷ್ಟು:
- ಪ್ರೀಮಿಯರ್‌ ಪದ್ಮಿನಿ ಚಿತ್ರ ಬಂದು ಎರಡು ವರ್ಷ ಆಯಿತು. ಆ ಸಿನಿಮಾ ನಮಗೆ ದೊಡ್ಡ ಮಟ್ಟದಲ್ಲಿ ಗೆಲುವು ನೀಡಿತು. ಹೀಗಾಗಿ ಅದರ ಮುಂದುವರಿದ ಭಾಗ ಮಾಡಬೇಕು ಎಂದುಕೊಂಡ್ವಿ.
- ಈಗಷ್ಟೇ ಜಗ್ಗೇಶ್‌ ಅವರಿಗೆ ಕತೆ ಹೇಳಿ ಬಂದಿದ್ದೇವೆ. ಕತೆ ಕೇಳಿ ತುಂಬಾ ಚೆನ್ನಾಗಿದೆ ಎಂದು ಜಗ್ಗೇಶ್‌ ಖುಷಿಯಿಂದ ಹೇಳಿಕೊಂಡಿದ್ದಾರೆ. ಚಿತ್ರದ ನಾಯಕ ಗ್ರೀನ್‌ ಸಿಗ್ನಲ್ ಕೊಟ್ಟಾಗಿದೆ. ಇನ್ನು ಉಳಿದ ಕೆಲಸಗಳು ಶುರು ಮಾಡಲಿದ್ದೇವೆ.
- ಚಿತ್ರಕ್ಕೆ ‘ಪ್ರೀಮಿಯರ್‌ ಪದ್ಮಿನಿ 2’ ಅಂತಲೇ ಹೆಸರಿಡಲಿದ್ದೇವೆ. ಈಗ ಕತೆ ಹಾಗೂ ಚಿತ್ರಕಥೆ ರೆಡಿಯಾಗಿದೆ. ಮೊದಲ ಭಾಗದ ಕತೆಯಲ್ಲಿರುವ ಜಗ್ಗೇಶ್‌, ಪ್ರಮೋದ್‌ ಜತೆಗೆ ಹೊಸ ಪಾತ್ರಧಾರಿಗಳೂ ಜತೆಯಾಗಲಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿ (Sankranthi) ಹಬ್ಬದ ಹೊತ್ತಿಗೆ ನಮ್ಮ ಚಿತ್ರ ಸೆಟ್ಟೇರಲಿದೆ.

ಮುರಿದು ಹೋದ ಮನಸ್ಸು, ಅಪ್ಪ-ಅಮ್ಮನ ಹೋರಾಟದಲ್ಲಿ ಕಂಗಾಲಾದ ಮಗ (Son), ನೆಮ್ಮದಿ ಇಲ್ಲದ ಜೀವನ (Life), ವಿಫಲ ಮದುವೆ.. ಹೀಗೆ ಅನೇಕ ವಿಚಾರಗಳನ್ನು ಪ್ರೀಮಿಯರ್ ಪದ್ಮಿನಿ ಚಿತ್ರದ ಮೂಲಕ ಮುಂದಿಟ್ಟಿದ್ದಾರೆ. ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಜಗ್ಗೇಶ್ ಮುಖಾಂತರ ಎಲ್ಲಾ ಕತೆಗಳು ತೆರೆದುಕೊಳ್ಳುತ್ತದೆ. ಚಿತ್ರದಲ್ಲಿ ಒಂದೆರಡು ಡಬ್ಬಲ್ ಮೀನಿಂಗ್ ಡೈಲಾಗ್ ಬಿಟ್ಟರೇ ಜಗ್ಗೇಶ್ ಅವರನ್ನು ತುಂಬಾನೇ ಡಿಫರೆಂಟ್ ಆಗಿ ತೋರಿಸಿದ್ದಾರೆ. 

ಚಿತ್ರ ವಿಮರ್ಶೆ: ಪ್ರೀಮಿಯರ್ ಪದ್ಮಿನಿ

ಚಿತ್ರಕ್ಕೆ ಶಕ್ತಿಯೇ ಪಾತ್ರಧಾರಿಗಳು. ಅದರಲ್ಲೂ ನೋವನ್ನುಅಡಗಿಸಿ ನಗುವ ಪ್ರಮೋದ್, ಸಿಗಬಾರದ ಬಾಲ್ಯವನ್ನು ಅನುಭವಿಸಿದ ವಿವೇಕ್ ಸಿಂಹ, ಸರಿ ಪ್ರೀತಿ ಸಿಗದೆ ಒದ್ದಾಡುವ ಅಸಹಾಯಕ ಹುಡಗಿ ಹಿತಾ ಚಂದ್ರಶೇಖರ್ ಹೈಲೈಟ್ ಆಗುತ್ತಾರೆ.  ಚಿತ್ರ ನೋಡಿದವರಿಗೆ ಇವರು ನಗಿಸುತ್ತಾರೆ, ಅಳಿಸುತ್ತಾರೆ ಹಾಗೂ ಅಯ್ಯೋ ಅನ್ನಿಸುತ್ತಾರೆ. 

"

ಸದ್ಯ ಬ್ಯಾಡ್‌ಮ್ಯಾನ್ಸರ್ (Badmanner) ಚಿತ್ರದಲ್ಲಿ ವಿಲನ್ (Villain) ಆಗಿ ಕಾಣಿಸಿಕೊಳ್ಳುತ್ತಿರುವ ಪ್ರಮೋದ್ ಚಿತ್ರರಂಗದ ಬಹು ಬೇಡಿಕೆಯ ನಟ. ಕಿರುತೆರೆ ಡ್ಯಾನ್ಸ್ ರಿಯಾಲಿಟಿ ಶೋ (Dance Reality Show)ಗಳಲ್ಲಿ ಮಿಂಚುತ್ತಾ ಬ್ಯೂಸಿಯಾಗಿರು ವಿನಯ್ ಸಿಂಹ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಬಾಂಬೆಯಲ್ಲಿ ವಾಸವಾಗಿರುವ ಹಿತಾ ಚಂದ್ರಶೇಖರ್ ಸಣ್ಣ ಪುಟ್ಟ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದಯಷ್ಟೇ ತಾವು ಹೊಸ ಸಿನಿಮಾ ಪ್ರಾಜೆಕ್ಟ್‌ಗೆ ಸಹಿ ಮಾಡಿರುವೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದರು.  ಅರಣ್ಯ ಸಂರಕ್ಷಣೆ, ಧಾರಾವಾಹಿ (Serials) ಚಿತ್ರೀಕರಣ ಹಾಗೂ ಸಮಾಜ ಸೇವೆಯಲ್ಲಿ (Social Work) ನಿರ್ಮಾಪಕ ಶ್ರುತಿ (Shruti Naidu) ತೊಡಗಿಸಿಕೊಂಡಿದ್ದಾರೆ. ಎಲ್ಲೂ ಮತ್ತೆ ಒಟ್ಟಾಗುತ್ತಿರುವ ವಿಚಾರ ಕೇಳಿ ನೆಟ್ಟಿಗರು ಸಂತಸ ವ್ಯಕ್ತ ಪಡಿಸಿದ್ದಾರೆ. 

'ಬ್ಯಾಡ್‌ಮ್ಯಾನರ್ಸ್‌'ಗೆ ಪ್ರೀಮಿಯರ್‌ ಪದ್ಮಿನಿ ಪ್ರಮೋದ್‌ ವಿಲನ್‌!

ಕೆಲವರು ಪ್ರೀಮಿಯರ್ ಪದ್ಮಿನಿ ರಿಮೇಕ್ (Remake) ಸಿನಿಮಾ ಎಂದು ಕೊಂಕು ತೆಗೆದಾಗ, ಜಗ್ಗೇಶ್ ತಿರುಗೇಟು ಕೊಟ್ಟರು. 'ಕೆಲವರಿಗೆ ಸಿನಿಮಾ ಮಾಡುವವರ ಕಷ್ಟ ಗೊತ್ತಿಲ್ಲ. ಬಂಡವಾಳ ಹಾಕುವವರ ನೋವು ಗೊತ್ತಿಲ್ಲ ತಿಂಗಳ ಕಾಲ ಕುಳಿತು ಕಥೆ ಬರೆದವರ ಶ್ರಮ ಗೊತ್ತಿರುವುದಿಲ್ಲ. ಎಲ್ಲೋ ಕುಳಿತು ಇನ್ನೇನೋ ನೋಡಿ ಬಂದು ಸಿನಿಮಾ ರಿಮೇಕ್, ಕದ್ದಿದ್ದು ಅಂತೆಲ್ಲ ಪಟ್ಟ ಕಟ್ಟುವುದು ಆರೋಪ ಮಾಡುವುದು ಗಾಸಿಪ್ (Gossip) ಹಬ್ಬಿಸುವುದು ತುಂಬಾ ಸುಲಭ.  ಇದ್ದು ಶುದ್ಧ ಸ್ವಮೇಕ್ ಸಿನಿಮಾ. ಕೆಲವರಿಗೆ ಹೊಟ್ಟೆಕಿಚ್ಚು. ಅದಕ್ಕೆ ರಿಮೇಕ್ ಎನ್ನುವ ಆರೋಪ ಮಾಡುತ್ತಾರೆ. ಈ ತರಹದ ಕತೆ ಈ ತನಕ ಬಂದಿಲ್ಲ ನಿರ್ದೇಶಕ ರಮೇಶ್ ಇಂದಿje ಅವರೇ ತಿಂಗಳುಗಟ್ಟಲೆ ಕುಳಿತು ಬರೆದ ಕಥೆ ಇದು. ಸಂಸಾರಿಕ ಜೀವನದ (Family Life) ಹಲವು ಕತೆಗಳನ್ನು ಹೇಳುತ್ತಾರೆ. ಪಟ್ಟಕಟ್ಟುವುದು ಸರಿ ಅಲ್ಲ' ಎಂದಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!