Kichcha Sudeep: ಜಾಕ್ವೆಲಿನ್‌ ಹೇಳಿದ 'ವಿಕ್ರಾಂತ್‌ ರೋಣ' ಡೈಲಾಗ್‌ ವೈರಲ್‌!

Published : May 27, 2022, 03:27 AM IST
Kichcha Sudeep: ಜಾಕ್ವೆಲಿನ್‌ ಹೇಳಿದ 'ವಿಕ್ರಾಂತ್‌ ರೋಣ' ಡೈಲಾಗ್‌ ವೈರಲ್‌!

ಸಾರಾಂಶ

‘ಊರಲ್ಲೆಲ್ಲ ಒಬ್ಬನ ಹೆಸರೇ ಚಾಲ್ತಿಯಲ್ಲಿರೋದು.. ವಿಕ್ರಾಂತ್‌ ರೋಣ’. ಹೀಗೆ ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ ಚಿತ್ರದ ಕೀ ಡೈಲಾಗ್‌ ಅನ್ನು ಉದುರಿಸಿರುವ ಬಾಲಿವುಡ್‌ ನಟಿ ಜಾಕ್ವೆಲಿನ್‌ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

‘ಊರಲ್ಲೆಲ್ಲ ಒಬ್ಬನ ಹೆಸರೇ ಚಾಲ್ತಿಯಲ್ಲಿರೋದು.. ವಿಕ್ರಾಂತ್‌ ರೋಣ’. ಹೀಗೆ ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ ಚಿತ್ರದ ಕೀ ಡೈಲಾಗ್‌ ಅನ್ನು ಉದುರಿಸಿರುವ ಬಾಲಿವುಡ್‌ ನಟಿ ಜಾಕ್ವೆಲಿನ್‌ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸುದೀಪ್‌ ಜೊತೆಗಿನ ಸಂದರ್ಶನವೊಂದರಲ್ಲಿ ಫೋನ್‌ ಮೂಲಕ ಮಾತನಾಡಿದ ಜಾಕ್ವೆಲಿನ್‌, ಸುದೀಪ್‌ ಸಹಕಾರದಿಂದ ಈ ಡೈಲಾಗ್‌ ಹೊಡೆದರು. ‘ಗಡಂಗ್‌ ರಕ್ಕಮ್ಮ ಹಾಡು ರಿಲೀಸ್‌ ಆದ ಅರ್ಧ ಗಂಟೆಯೊಳಗೆ ನನ್ನ ಲುಕ್‌ ಮೆಚ್ಚಿಕೊಂಡು ಕಾಲ್‌ಗಳು ಬರಲಾರಂಭಿಸಿದವು. ಚಿತ್ರದಲ್ಲಿ ಸುದೀಪ್‌ ಎನರ್ಜಿ ಮ್ಯಾಚ್‌ ಮಾಡಲಾಗದ್ದು’ ಎಂದು ಈ ವೇಳೆ ಮೆಚ್ಚುಗೆಯ ಮಾತಾಡಿದರು.

‘ಡ್ಯಾನ್ಸ್‌ ಅನ್ನು ಒಂದೋ ಖುಷಿಗಾಗಿ ಇಲ್ಲವೇ ದುಡ್ಡಿಗಾಗಿ ಅಥವಾ ಮರ್ಯಾದೆ ಉಳಿಸಿಕೊಳ್ಳೋದಕ್ಕೋಸ್ಕರ ಮಾಡ್ತಾರೆ. ಇದರಲ್ಲಿ ನನ್ನದು ಮೂರನೇ ರೀತಿ. ಹೇಳಿಕೊಳ್ಳುವಂಥಾ ಉತ್ತಮ ಡ್ಯಾನ್ಸರ್‌ ನಾನಲ್ಲ. ಆದರೆ ಜಾನಿ ಮಾಸ್ಟರ್‌ ನನ್ನ ಕಂಫರ್ಟ್ ಅರ್ಥ ಮಾಡಿಕೊಂಡು ಸ್ಟೆಫ್ಸ್‌ ಕಲಿಸಿದ್ದಾರೆ. ಹೀಗಾಗಿ ಡ್ಯಾನ್ಸ್‌ ಉತ್ತಮವಾಗಿ ಮೂಡಿಬಂದಿದೆ’ ಎಂದು ಗಡಂಗ್‌ ರಕ್ಕಮ್ಮ ಹಾಡಿನ ಬಗ್ಗೆ ಈ ವೇಳೆ ಸುದೀಪ್‌ ಪ್ರತಿಕ್ರಿಯೆ ನೀಡಿದ್ದಾರೆ.

'ವಿಕ್ರಾಂತ್ ರೋಣ' ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ಗೆ ಕಾರ್ ಗಿಫ್ಟ್ ಮಾಡಿದ ಕಿಚ್ಚ ಸುದೀಪ್

ಗಡಾಂಗ್ ರುಕ್ಕಮ್ಮ ಹಾಡು ರಿಲೀಸ್‌: ನಟ ಸುದೀಪ್‌ ಅವರ ವಿಕ್ರಾಂತ್‌ ರೋಣ ಸಿನಿಮಾದ ಗಡಾಂಗ್‌ ರುಕ್ಕಮ್ಮ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಈ ಹಾಡನ್ನು ಬಾಲಿವುಡ್‌ ಬೆಡಗಿ ಜಾಕ್ವೆಲಿನ್‌ ಫರ್ನಾಡಿಸ್‌  ಹಾಗೂ ಸುದೀಪ್ ಈ ಹಾಡಿನಲ್ಲಿದ್ದು, ಸದ್ಯ ಲಿರೀಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಬಿಡುಗಡೆಯಾದ ಸ್ವಲ್ಪ ಹೊತ್ತಿನಲ್ಲೇ ಮೂರು ಲಕ್ಷಕ್ಕೂ ಅಧಿಕ ಜನ ಈ ಹಾಡನ್ನು ವೀಕ್ಷಿಸಿದ್ದಾರೆ. ಗಡಾಂಗ್ ರುಕ್ಕಮ್ಮ ಹಾಡನ್ನು ಮುಂಗಾರು ಮಳೆ ಖ್ಯಾತಿಯ ಹಾಗೂ ಸುನಿಧಿ ಚೌಹಾಣ್‌ ಎ.ಆರ್ ರೆಹಮಾನ್‌ ಜತೆ ಕೆಲಸ ಮಾಡಿರುವ ನಕಾಶ್ ಅಜೀಜ್ ಅವರು ಹಾಡಿದ್ದಾರೆ. 



ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತಾ ನಿರ್ದೇಶನ ಮಾಡಿದ್ದಾರೆ. ಅನುಪ್ ಭಂಡಾರಿ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ  ಕಿಚ್ಚ ಸುದೀಪ್ ಜೊತೆ ನಿರೂಪ್ ಭಂಡಾರಿ , ನೀತಾ ಅಶೋಕ್ ಹಾಗೂ ಜಾಕ್ವೆಲಿನ್ ಫರ್ನಾಡೀಂಸ್ ತಾರಾಗಣದಲ್ಲಿದ್ದಾರೆ. ನಟ ಸುದೀಪ್‌ ಅವರ ‘ವಿಕ್ರಾಂತ್‌ ರೋಣ’ ಸಿನಿಮಾ ತೆರೆಗೆ ಬರುವುದಕ್ಕೆ ಹತ್ತಿರವಾಗುತ್ತಿರುವಂತೆ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಚಿತ್ರದ ವಿತರಣೆ ಹಕ್ಕು, ವಿದೇಶಗಳಲ್ಲಿ ಬಿಡುಗಡೆ ಮಾಡುವ ಪ್ಲಾನು, ಸಲ್ಮಾನ್‌ ಖಾನ್‌ ಜತೆಯಾಗಿರುವುದರ ಜೊತೆ ಪಿವಿಆರ್‌ ಸಂಸ್ಥಯೂ ಉತ್ತರ ಭಾರತದ ರಾಜ್ಯಗಳಲ್ಲಿ ಈ ಚಿತ್ರದ ವಿತರಣೆ ಹಕ್ಕು ಪಡೆದುಕೊಂಡಿದೆ. ಈ ಮೂಲಕ ಸಾಕಷ್ಟು ಸುದ್ದಿಯಾಗುತ್ತಿದೆ. 

Vikranth Rona ಸಿನಿಮಾದ ಇಂಗ್ಲೀಷ್ ವರ್ಷನ್‌ಗೆ ಕಿಚ್ಚ ಸುದೀಪ್ ಡಬ್ಬಿಂಗ್!

ಅನೂಪ್‌ ಭಂಡಾರಿ ನಿರ್ದೇಶನದ ಈ ಚಿತ್ರವನ್ನು ಶಾಲಿನಿ ಆರ್ಟ್ಸ್‌ ಮೂಲಕ ಜಾಕ್‌ ಮಂಜು ಅವರು ನಿರ್ಮಿಸಿದ್ದಾರೆ. ಅಲಾಂಕಾರ್‌ ಪಾಂಡ್ಯನ್‌ ಅವರು ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಜುಲೈ 28ರಂದು ಪ್ರಪಂಚದಾದ್ಯಂತ ಈ ಸಿನಿಮಾ ತೆರೆಗೆ ಬರುತ್ತಿದೆ. ಅಭಿನಯ ಚಕ್ರವರ್ತಿ ಅಂತ ಕರೆಸಿಕೊಳ್ಳೋ ಸುದೀಪ್‌ ಅವರನ್ನ ಟೀಂ ಇಂಡಿಯಾ ದಿಗ್ಗಜ, ಸಿಡಿಲ ಮರಿ ಖ್ಯಾತಿಯ ವೀರೇಂದ್ರ ಸೆಹ್ವಾಗ್ ಅವರು ಈ ಹಿಂದೆ ಈ ಸಿನಿಮಾ ವಿಚಾರವಾಗಿ ಹಾಡಿ ಹೊಗಳಿದ್ದರು. 3 ವರ್ಷಗಳ  ಹಿಂದೆ ಸ್ಯಾಂಡಲ್​ವುಡ್​​​​​​ ಬಾದ್‌ಷಾ ಮತ್ತು ಕ್ರಿಕೆಟ್​ ಬಾದ್‌ಷಾ ನಡುವೆ ಫ್ರೆಂಡ್ಸಿಪ್‌​ ಚಿಗುರೊಡೆದಿತ್ತು. ಸದ್ಯ ಇಬ್ಬರ ಸ್ನೇಹ ಎಷ್ಟೊಂದು ಸ್ಟ್ರಾಂಗ್ ಅನ್ನೋದು ಗೊತ್ತಾಗಿದೆ. ಕಿಚ್ಚ ನಟನೆಯ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಟೀಸರ್​ ರಿಲೀಸ್ ವೇಳೆ ಟೀಸರ್‌ ನೋಡಿದ ಸೆಹ್ವಾಗ್ ಹಾಡಿ ಹೊಗಳಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?