ಸುದೀಪ್ - MN ಕುಮಾರ್​ ವಿವಾದ: ಕುಮಾರ್ ಭುಜದ ಮೇಲೆ ಗನ್ ಇಟ್ಟು ಹೊಡಿತ್ತಿದ್ದಾರೆ- ಜಾಕ್ ಮಂಜು ಕಿಡಿ

Published : Jul 09, 2023, 01:31 PM IST
ಸುದೀಪ್ - MN ಕುಮಾರ್​ ವಿವಾದ: ಕುಮಾರ್ ಭುಜದ ಮೇಲೆ ಗನ್ ಇಟ್ಟು ಹೊಡಿತ್ತಿದ್ದಾರೆ- ಜಾಕ್ ಮಂಜು ಕಿಡಿ

ಸಾರಾಂಶ

ಸುದೀಪ್  ಮತ್ತು ನಿರ್ಮಾಪಕ MN ಕುಮಾರ್​ ವಿವಾದ: ಕುಮಾರ್ ಭುಜದ ಮೇಲೆ ಗನ್ ಇಟ್ಟು ಹೊಡಿತ್ತಿದ್ದಾರೆ ಎಂದು ಕಿಚ್ಚ ಸುದೀಪ್ ಆಪ್ತ ಜಾಕ್ ಮಂಜು ಆಕ್ರೋಶ ಹೊರಹಾಕಿದ್ದಾರೆ. 

ನಟ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಮ್​​ ಎನ್ ಕುಮಾರ್​ ಅವರ ಹಣಕಾಸಿನ ವಿವಾದ ಇದೀಗ ಕೋರ್ಟ್ ಮೆಟ್ಟಿಲೇರಿದೆ. ಈ ಬಗ್ಗೆ ಕಿಚ್ಚ ಸುದೀಪ್ ಅವರ ಆಪ್ತ ಜಾಕ್ ಮಂಜು ಪ್ರೆಸ್‌ಮೀಟ್ ಮಾಡಿ ಎಮ್ ಎನ್ ಕುಮಾರ್  ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಏನಿದ್ದರೂ ಕಾನೂನಿನ ಮೂಲಕ ಉತ್ತರ ಕೊಡುತ್ತೇವೆ ಎಂದು ಜಾಕ್ ಮಂಜು ಹೇಳಿದ್ದಾರೆ. ಪಾರ್ಥ ಸಿನಿಮಾದಿಂದ ವಿಕ್ರಾಂತ್ ರೋಣವರೆಗೂ ಕೆಲಸ ಮಾಡಿದ್ದಾರೆ. ಸುದೀಪ್ ಅವರಿಗೆ ಸಹಾಯ ಅಂತ ಮಾಡಲು ಹೋಗಿದ್ದು ಈಗ ತೊಂದರೆ ಆಗಿದೆ. ಇದು ಸುದೀಪ್ ಅವರಿಗೆ ತುಂಬಾ ಹರ್ಟ್ ಆಗಿದೆ ಎಂದು ಹೇಳಿದ್ದಾರೆ. 

'ರನ್ನ ಸಿನಿಮಾ ಸಮಯದಲ್ಲಿ ಇಬ್ರು ಭೇಟಿಯಾಗಿದ್ದು ನಿಜ. ಕುಮಾರ್ ಕಷ್ಟದಲ್ಲಿದ್ದಾರೆ ಗೊತ್ತು. ಎಮ್ ಎನ್ ಕುಮಾರ್ ಪ್ರಿಯಾ ಅವರನ್ನು ಮೊದಲು ಭೇಟಿಯಾಗಿ ಮಾತನಾಡಿದ್ರು. ಬಳಿಕ ಪ್ರಿಯಾ, ಸುದೀಪ್ ಅವರ ಬಳಿ ಮಾತನಾಡಿದ್ರು. ನಂತರ ಕುಮಾರ್, ಸುದೀಪ್ ಜೊತೆ ಮಾತುಕತೆ ಮಾಡಿದ್ರು. ಎಮ್ ಎನ್ ಕುಮಾರ್ ಅವರಿಗೆ 5 ಕೋಟಿ ರೂಪಾಯಿ ಸಹಾಯ ಮಾಡುವುದಾಗಿ ಹೇಳಿದರು. ಇದನ್ನು ಎನ್ ಎನ್ ಕುಮಾರ್ ಭಿಕ್ಷೆ ಎಂದು ಹೇಳಿದರು. ಭಿಕ್ಷೆ ಕೊಡೊಕೆ ಬಂದಿದ್ಯಾ ಅಂತ ಎಮ್ ಎನ್ ಕುಮಾರ್ ಹೇಳಿದ್ದು ಸುದೀಪ್ ಅವರಿಗೆ ಬೇಸರ ಆಗಿದೆ. ಕಷ್ಟದಲ್ಲಿದ್ದಾರೆ ಸಹಾಯ ಮಾಡೋಣ ಅಂದುಕೊಂಡಿದ್ದೇ ಈಗ ದೊಡ್ಡ ಸಮಸ್ಯೆ ಆಗಿದೆ' ಎಂದು ಜಾಕ್ ಮಂಜು ಹೇಳಿದರು. 

ಎಮ್ ಎನ್ ಕುಮಾರ್ ಹಣ ವಾಪಾಸ್ ಬೇಡ ಸಿನಿಮಾನೇ ಮಾಡಿ ಎಂದು ಪಟ್ಟು ಹಿಡಿದರು. ಅದರಂತೆ ಅನೇಕ ನಿರ್ದೇಶಕರ ಜೊತೆ ಮಾತುಕತೆ ಕೂಡ ನಡೆಯಿತು. ಆದರೆ ಕಥೆ ಅಷ್ಟು ಆಗಿಲ್ಲ. 5 ವರ್ಷಗಳಾಗಿದೆ. ನೂರಾರು ಮೀಟಿಂಗ್ ಗಳನ್ನು ಮಾಡಿದ್ದೇವೆ. ಆದರೀಗ ಫಿಲ್ಮ್ ಚೇಂಬರ್‌ಗೆ ಹೋಗಿದ್ದಾರೆ. ಅರೋಪಗಳನ್ನು ಮಾಡುತ್ತಿದ್ದಾರೆ. ಸುದೀಪ್ ಯಾವುದೇ ಹಣ ತೆಗೆದುಕೊಂಡಿಲ್ಲ. ದಾಖಳೆಗಳಿಲ್ಲದೆ ಮಾತನಾಡುತ್ತಿದ್ದಾರೆ. ಅದಕ್ಕಾಗಿ ನಾವು ಕಾನೂನು ಹೋರಾಟಕ್ಕೆ ಹೋಗಿದ್ದೀವಿ' ಎಂದು ಜಾಕ್ ಮಂಜು ಹೇಳಿದರು. 

ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯನ್ನು ಭೇಟಿಯಾದ ಕಿಚ್ಚ ಸುದೀಪ್‌

'ಆತ್ಮಹತ್ಯೆ ಮಾಡಿಕೊಂಡಾಗ ನೀವೆ ಕಾರಣ ಎಂದು ಹೇಳುವುದು ತಪ್ಪು. ಎಮ್ ಎನ್ ಕುಮಾರ್ ಹೀಗೆ ಹೇಳುವುದು ದೊಡ್ಡ ತಪ್ಪು. ಮಾನವಿಯಾತೆ ದೃಷ್ಟಿಯಿಂದ ಅವರ ಜೊತೆ ಮಾತುಕತೆ ನಡೆಸಿದ್ದೇವೆ. ಸುದೀಪ್ ಮತ್ತೆ ಮಾತುಕತೆಗೆ ಸಿದ್ಧರಿಲ್ಲ. ಇಷ್ಟೆಲ್ಲ ಮಾಡಿದ ಮೇಲೆ ಮತ್ತೆ ಮಾತುಕತೆ ಮಾಡಲ್ಲ. ಕಾನೂನು ಹೋರಾಟ ಮಾಡುತ್ತೇವೆ ಅಷ್ಟೆ. ಏನೇ ಇದ್ದರೂ ಅಲ್ಲೇ ಉತ್ತರ ಕೊಡಲಿ. ಸುದೀಪ್ ಅನೇಕರಿಗೆ ಸಹಾಯ ಮಾಡಿದ್ದಾರೆ. ಎಷ್ಟೋ ಕೋಟಿ ಹಣ ಬಿಟ್ಟಿದ್ದಾರೆ. ಆದರೆ ಇವತ್ತು ಅನೇಕ ನಿರ್ಮಾಪಕರು ಎಮ್ ಎನ್ ಕುಮಾರ್ ಕಷ್ಟವನ್ನು ಬಗೆಹರಿಸುವ ಬದಲು ಅವರ ಭುಜದ ಮೇಲೆ ಗನ್ ಇಟ್ಟು ಹೊಡೆಯುತ್ತಿದ್ದಾರೆ' ಎಂದು ಜಾಕ್ ಮಂಜು ಆಕ್ರೋಶ ಹೊರಹಾಕಿದರು.

Sudeep: ಕೊನೆಗೂ ರಿಲೀಸ್ ಆಯ್ತು ಸುದೀಪ್ 46ನೇ ಸಿನಿಮಾದ ಟೀಸರ್: ಕಿಚ್ಚನ ಆರ್ಭಟಕ್ಕೆ ಫ್ಯಾನ್ಸ್ ಫಿದಾ

ಇನ್ನೂ ಶಿವರಾಜ್ ಕುಮಾರ್, ರವಿಚಂದ್ರನ್ ಅವರ ಮೂಲಕ ಸಮಸ್ಯೆ ಬಗೆಹರಿಸುವ ಬಗ್ಗೆ ಎಮ್ ಎನ್ ಕುಮಾರ್ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಜಾಕ್ ಮಂಜು ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಯಾವುದೇ ಮಾತುಕತೆ ಮಾಡಲ್ಲ. ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ' ಎಂದು ಜಾಕ್ ಮಂಜು ಹೇಳಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈಗ್ಲೇ ದರ್ಶನ್ 'ಡೆವಿಲ್'ಗೆ ಯಾಕೆ ಟೆನ್ಷನ್..? ನರ್ತಕಿ ಚಿತ್ರಮಂದಿರದ ಮೇಲೆ ಬೇರೆ ಸ್ಟಾರ್‌ಗಳ ಕಣ್ಣು ಬಿತ್ತಾ?
ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!