
ದರ್ಶನ್ ವರವಾಗುತ್ತಾ ರೇಣುಕಾಸ್ವಾಮಿ ತಾಯಿ ಹೇಳಿಕೆ?
ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Case) ನಲ್ಲಿ ಒಂದು ಬಿಗ್ ಟ್ವಿಸ್ಟ್ ನಡೆದಿದೆ. ಕೋರ್ಟ್ನಲ್ಲಿ ಕೊಲೆಯಾದ ರೇಣುಕಾಸ್ವಾಮಿ ಪೋಷಕರ ಕ್ರಾಸ್ ಎಕ್ಸಾಮಿನೇಷನ್ ನಡೆದಿದೆ. ಅದ್ರಲ್ಲಿ ರೇಣುಕಾ ತಾಯಿ ಕೊಟ್ಟಿರೋ ಗೊಂದಲಕರ ಹೇಳಿಕೆಗಳಿಂದ ಕೇಸ್ಗೆ ಮುಳುವಾಗೋ ಸಾಧ್ಯತೆ ಇದೆ. ದರ್ಶನ್ಗೆ ಬಚಾವ್ ಆಗೋದಕ್ಕೆ ಒಂದು ಚಾನ್ಸ್ ಸಿಕ್ಕಂತೆ ಆಗಿದೆ.
ರೇಣುಕಾಸ್ವಾಮಿ ಕೇಸ್‌ನಲ್ಲಿ ಟ್ವಿಸ್ಟ್.. ದರ್ಶನ್ ಬಚಾವ್..?
ಹೌದು, ಸ್ಯಾಂಡಲ್ವುಡ್ ನಟ ದರ್ಶನ್ ಎರಡನೇ ಆರೋಪಿ ಆಗಿರೋ ರೇಣುಕಾಸ್ವಾಮಿ ಕೊಲೆ ಕೇಸ್ ಟ್ರಯಲ್ ನಿರಂತರವಾಗಿ ನಡೀತಾ ಇದೆ. ಮಂಗಳವಾರ ಸೆಷೆನ್ಸ್ ಕೋರ್ಟ್ನಲ್ಲಿ ರೇಣುಕಾಸ್ವಾಮಿ ತಂದೆ - ತಾಯಿ ಕ್ರಾಸ್ ಎಕ್ಸಾಮಿನೇಷನ್ ನಡೆದಿದೆ.
ಹತ್ಯೆಯಾದ ರೇಣುಕಾಸ್ವಾಮಿ ತಾಯಿ ರತ್ನಪ್ರಭಾರನ್ನ ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ರತ್ನಪ್ರಭಾ ಅವರು ಜಡ್ಜ್ ಎದುರು ಹೇಳಿಕೆ ನೀಡಿದ್ರು. ಈ ವೇಳೆ ಅವರನ್ನ ಆರೋಪಿ ಪರ ವಕೀಲರಾದ ಬಾಲನ್, ಸಿ.ವಿ.ನಾಗೇಶ್ ಅವರು ಕ್ರಾಸ್ ಎಕ್ಸಾಮಿನೇಷನ್ ಮಾಡಿದ್ರು.
ಹೌದು ರೇಣುಕಾಸ್ವಾಮಿ ಸಿಮ್, ಮೊಬೈಲ್ ಹಾಗೂ ಕಾಲ್ ಗಳ ಬಗ್ಗೆ ಅವರ ತಾಯಿ ರತ್ನಪ್ರಭಾ ದ್ವಂದ್ವ ಹೇಳಿಕೆ ನೀಡಿದ್ದಾರೆ. ತನ್ನ ಮಗನ ಮೊಬೈಲ್ ನಂಬರ್ ಗೊತ್ತಿಲ್ಲ ಅಂತ ರತ್ನಪ್ರಭಾ ಹೇಳಿದ್ದಾರೆ. ಪೊಲೀಸ್ ತನಿಖೆ ವೇಳೆ ಮೊಬೈಲ್ ನಲ್ಲಿ ಸೇವ್ ಆಗಿದೆ ಅಂತ ಹೇಳಿಕೆ ನೀಡಿದ್ರು. ಮೊಬೈಲ್ ನಲ್ಲಿನ ನಂಬರ್ ನೋಡಿ ಇದೇ ನಂಬರ್ ಅಂತ ಕನ್ಫರ್ಮ್ ಮಾಡಿ ಪೊಲೀಸರಿಗೆ ಹೇಳಿದ್ದರು. ಆದರೇ, ಬೆಂಗಳೂರಿನ ಕೋರ್ಟ್ ನಲ್ಲಿ ಕ್ರಾಸ್ ಎಕ್ಸಾಮಿನೇಷನ್ ಮಾಡುವಾಗ ನನಗೆ ಮೊಬೈಲ್ ನಂಬರ್ ಗೊತ್ತಿಲ್ಲ ಅನ್ನುವ ಉತ್ತರ ನೀಡಿದ್ದಾರೆ. ಇನ್ನೂ ಹಲವು ಹೇಳಿಕೆಗಳನ್ನ ಗೊಂದಲಕರವಾಗಿ ನೀಡಿದ್ದಾರೆ.
ಹೋಸ್ಟೈಲ್ ವಿಟ್ನೆಸ್ಅಂತ ಪರಿಗಣಿಸಲು SPP ಮನವಿ
ಹೌದು ರೇಣುಕಾಸ್ವಾಮಿ ತಾಯಿ ರತ್ನಪ್ರಭಾರನ್ನ Hostile witness ಅಂತ ಪರಿಗಣಿಸಬೇಕು ಅಂತ ಎಸ್ಪಿಪಿ ಪ್ರಸನ್ನಕುಮಾರ್ ಕೋರ್ಟ್ ಗೆ ಮನವಿ ಮಾಡಿದ್ದಾರೆ. ಪ್ರಾಸಿಕ್ಯೂಷನ್ ಅಂದರೇ, ಪೊಲೀಸರಿಗೆ ಪ್ರತಿಕೂಲವಾಗುವಂತೆ ಸಾಕ್ಷಿ ಹೇಳಿದ ಕಾರಣಕ್ಕಾಗಿ ರತ್ನಪ್ರಭಾ ಅವರನ್ನ ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸುವಂತೆ ಕೋರ್ಟ್ ಗೆ ಎಸ್.ಪಿ.ಪಿ. ಪ್ರಸನ್ನಕುಮಾರ್ ಮನವಿ ಮಾಡಿದ್ದಾರೆ. ಈ ಮನವಿಯ ಬಗ್ಗೆ ಕೋರ್ಟ್ ಮುಂದಿನ ಸೋಮವಾರ ನಿರ್ಧಾರ ಮಾಡಲಿದೆ.
ಏನಿದು ಹೋಸ್ಟೈಲ್ ವಿಟ್ನೆಸ್..? ದಾಸನಿಗೆ ವರವಾಗುತ್ತಾ?
ಹೋಸ್ಟೈಲ್ ವಿಟ್ನೆಸ್ಎಂದರೆ, ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳುವ ವ್ಯಕ್ತಿ, ತನನ್ನು ಕರೆದ ಪಕ್ಷದ ಪರವಾಗಿ ನಿಲ್ಲದೆ, ಅವರ ಮಾತಿಗೆ ವಿರುದ್ಧವಾಗಿ ಹೇಳಿಕೆ ನೀಡುವ ಸಾಕ್ಷಿ. ಸರಳವಾಗಿ ಹೇಳೋದಾದರೆ, ಒಬ್ಬ ಸಾಕ್ಷಿಧಾರನನ್ನ ಒಂದು ಪಾರ್ಟಿ ನ್ಯಾಯಾಲಯಕ್ಕೆ ಕರೆಸುತ್ತೆ. ಆದರೆ ಆ ಸಾಕ್ಷಿಧಾರ ನ್ಯಾಯಾಲಯದಲ್ಲಿ ತನ್ನ ಹಿಂದಿನ ಹೇಳಿಕೆಯನ್ನ ಬದಲಿಸಿ, ಅಥವಾ ಸತ್ಯವನ್ನ ಮುಚ್ಚಿಹಾಕಿ, ಅಥವಾ ಪ್ರತಿವಾದಿಗಳಿಗೆ ಅನುಕೂಲವಾಗುವಂತೆ ಮಾತನಾಡಿದರೆ, ಆ ಸಾಕ್ಷಿಯನ್ನ Hostile Witness ಅಂತ ಕರೆಯಲಾಗುತ್ತದೆ.
ಸದ್ಯ ರೇಣುಕಾಸ್ವಾಮಿ ತಾಯಿ ಪೊಲೀಸರ ಮುಂದೆ ಹೇಳಿದ್ದೇ ಒಂದು, ಕೋರ್ಟ್ನಲ್ಲಿ ಹೇಳಿದ್ದೇ ಒಂದು. ಸೋ ಇದು ದರ್ಶನ್ ಪರ ವಕೀಲರಿಗೆ ದಾಳವಾಗಿ ಪರಿಣಮಿಸಲಿದೆ. ಪ್ರಾಸಿಕ್ಯೂಶನ್ ಇನ್ನೊಮ್ಮೆ ರೇಣುಕಾ ತಾಯಿ ವಿಚಾರಣೆಗೆ ಮನವಿ ಮಾಡಿದ್ರೆ ದರ್ಶನ್ ಪರ ವಕೀಲರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇತ್ತ ಕೋರ್ಟ್ ನಲ್ಲಿ ದರ್ಶನ್ ಕೇಸ್ ನಡೀತಾ ಇದ್ರೆ, ಅತ್ತ ಪತ್ನಿ ವಿಜಯಲಕ್ಷ್ಮೀ ವೈಕುಂಠ ಏಕಾದಶಿ ದಿನ ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇಗುಲದಲ್ಲಿ ದೈವ ದರ್ಶನ ಪಡೆದಿದ್ದಾರೆ. ಪತಿಯ ಸಂಕಟ ನಿವಾರಣೆಗಾಗಿ ಪ್ರಾರ್ಥಿಸಿದ್ದಾರೆ.
ಸದ್ಯ ಕೋರ್ಟ್ನಲ್ಲಿ ನಡೆದ ಬೆಳವಣಿಗೆ ದರ್ಶನ್ಗೆ ಅನುಕೂಲವಾಗುವಂತೆ ಇದೆ. ಆದ್ರೆ ಇದು ಇಲ್ಲಿಗೆ ಮುಗಿದಿಲ್ಲ. ಇದು ಇನ್ನೂ ಆರಂಭವಷ್ಟೇ ಈ ಕೇಸ್ನಲ್ಲಿರೋ ಸಕಲ ಸಾಕ್ಷಿಗಳು, ತಾಂತ್ರಿಕ ಎವಿಡೆನ್ಸ್ಗಳು, ಮೆಡಿಕಲ್ ರಿಪೋರ್ಟ್ಗಳು ಎಲ್ಲವನ್ನೂ ಪರಿಗಣಿಸಿ ತೀರ್ಪು ಬರುತ್ತೆ. ಅದು ಏನಾಗುತ್ತೆ ಅನ್ನೋದು ಚಿದಂಬರ ರಹಸ್ಯ..!
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.