ಡಿವೈನ್ ಸ್ಟಾರ್‌ ರಿಷಬ್‌ ಶೆಟ್ಟಿಗೆ ಹೊಸ ಚಾಲೆಂಜ್​! ಮಲಯಾಳಂನ 1,000 ಕೋಟಿ ಬಜೆಟ್ ಸಿನಿಮಾದಲ್ಲಿ ರಿಷಬ್?

Published : Feb 07, 2026, 06:38 PM IST
Randamoozham MT Vasudevan Nair, Rishab Shetty

ಸಾರಾಂಶ

'ಕಾಂತಾರ' ಯಶಸ್ಸಿನ ನಂತರ ರಿಷಬ್ ಶೆಟ್ಟಿ ಮಲಯಾಳಂನ 1000 ಕೋಟಿ ಬಜೆಟ್‌ನ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಚಿತ್ರವು 'ರಂಡಮೂಳಂ' ಕಾದಂಬರಿ ಆಧಾರಿತವಾಗಿದ್ದು, ಈ ಹಿಂದೆ ಮೋಹನ್‌ಲಾಲ್ ನಟಿಸಬೇಕಿದ್ದ ಭೀಮನ ಪಾತ್ರಕ್ಕೆ ಈಗ ರಿಷಬ್ ಶೆಟ್ಟಿ ಹೆಸರು ಕೇಳಿಬರುತ್ತಿದೆ.

ಕೆರಾಡಿಯ ಶಿವನ ದರ್ಶನ ಆಗಾಯ್ತು. ಶಿವನ ಹೂ ತೋಟದಲ್ಲಿ ಬರ್ಮೆಯ ರೌದ್ರ ನರ್ತನ ನೋಡಿದ್ದಾಯ್ತು. ಇನ್ನೇನಿದ್ರು ಜೈ ಹನುಮಾನ್ ಅನ್ನೋದಷ್ಟೆ ಅಂತ ನೀವೆಲ್ಲಾ ಅಂದು ಕೊಂಡಿರಬಹುದು. ಆದ್ರೆ ಕಥೆ ಬೇರೆಯದ್ದೇ ಇದೆ. ಅದು ದೊಡ್ಡ ಸವಾಲ್​​​ ಆಗಿದೆ ಎನ್ನುತ್ತಿದೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯ ಮೂಲಗಳು. ಹಾಗಾದ್ರೆ ಶೆಟ್ರು ಸ್ವೀಕರಿಸಿರೋ ಆ ಹೊಸ ಸವಾಲು ಏನು? ನೋಡೋಣ ಬನ್ನಿ ಈ ಎಕ್ಸ್​ಕ್ಲ್ಯೂಸೀವ್ ಸ್ಟೋರಿಯಲ್ಲಿ.

ಕೆರಾಡಿ ಶಿವ ರಿಷಬ್‌​​​​ಗೆ ಹೊಸ ಸವಾಲು!

ಯೆಸ್, ಕೆರಾಡಿಯಲ್ಲಿ ಶಿವನಾಗಿ ತನ್ನ ಆರ್ಭಟ ತೋರಿಸಿದ್ಧ ರಿಷಬ್ ಶೆಟ್ಟಿ ಶಿವನ ಹೂ ತೋಟಕ್ಕೆ ಬಂದವರ ರುಂಡ ಚಂಡಾಡಿ ರೌದ್ರ ನರ್ತನ ಮಾಡಿದ್ರು. ಶಿವನಿಂದ ಹಿಡಿದು ಬೆರ್ಮೆಯವರೆಗೂ ರಿಷಬ್ ಶೆಟ್ಟಿಯ ನಾನಾವತಾರಗಳು ಇನ್ನೂ ಕಣ್ಣಿಗೆ ಕಟ್ಟಿದಂತೇ ಇದೆ. ರಿಷಬ್ ಶೆಟ್ಟಿ ಭಾರತೀಯ ಚಿತ್ರ ಜಗತ್ತಿಗೆ ಈಗ ಮುಕುಟಮಣಿ. ಒಂದು ಕಡೆ ಕಾಂತಾರದಂತಹ ಸೂಪರ್ ಹಿಟ್ ಕೊಟ್ಟಿರೋ ರಿಷಬ್ ಶೆಟ್ಟಿ, ಹಲವು ಅವಕಾಶಗಳನ್ನ ಕೈ ಚಲ್ಲಿ, ತನ್ನ ವೃತ್ತಿ ಜೀವನಕ್ಕೆ ಉತ್ತುಂಗದಲ್ಲಿಡೋ ಕಥೆಗಳನ್ನೇ ಆಯ್ಕೆ ಮಾಡುತ್ತಿದ್ದಾರೆ. ಅಂತಹ ಸಿನಿಮಾಗಳಲ್ಲೊಂದು ಜೈ ಹನುಮಾನ್..

'ಕಾಂತಾರ- 1' ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಸೈಲೆಂಟ್ ಆಗಿದ್ದಾರೆ. ಸದ್ಯ ವಿಶ್ರಾಂತಿಯಲ್ಲಿದ್ದಾರೆ ಅಂತ ಶೆಟ್ರು ಫಾಲೋವರ್ಸ್ ಫೀಲಿಂಗು. ಆದ್ರೆ ಮ್ಯಾಟ್ರು ಬೇರೆನೆ ಐತಿ. ರಿಷಬ್ ತೆಲುಗಿನಲ್ಲಿ 'ಜೈ ಹನುಮಾನ್' ಚಿತ್ರ ಮಾಡುತ್ತಾರೆ. ಬಟ್ ಇನ್ನೂ ಆ ಬಗ್ಗೆ ಯಾವ್ದೇ ಅಪ್ಡೇಟ್ ಇಲ್ಲ. ಶಿವಾಜಿ ಮಹರಾಜ್ ಬಯೋಪಿಕ್ ಗೆ ಅಸ್ತು ಎಂದಿದ್ದಾರೆ ಅಂತ ಹೇಳಲಾಗಿದೆ. ಆದ್ರೆ ಆ ಬಗ್ಗೆಯೂ ಯಾವ್ದೇ ಹೊಸ ವಿಷ್ಯ ಇಲ್ಲ. ಈಗ ನಯಾ ಮ್ಯಾಟರ್ ಏನಪ್ಪ ಅಂದ್ರೆ ರಿಷಬ್ ಶೆಟ್ಟಿ ಈಗ ಮಲೆಯಾಳಂನ ಬಿಗ್ಗೆಸ್ಟ್ ಸಿನಿಮಾಗೆ ಕೈ ಹಾಕಿದ್ದಾರೆ ಅನ್ನೋದು.

ಮಲೆಯಾಳಂನ 1000 ಕೋಟಿ ಸಿನಿಮಾದಲ್ಲಿ ರಿಷಬ್?

ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್. ಹೀಗಾಗಿ ದೊಡ್ಡದೊಡ್ಡ ಕನಸುಗಳನ್ನು ಕಟ್ಟಬೇಕಿದೆ. ಅದರ ಮೇಲೆ ಫೋಕಸ್ ಆಗಿರೋ ಶೆಟ್ರಿಗೆ 1 ಸಾವಿರ ಕೋಟಿಯ ಬಿಗ್ಗೆಸ್ಟ್ ಆಫರ್ ಒಂದು ಬಂದಿದೆ ಅಂತ ಭಾರಿ ಚರ್ಚೆಗಳು ನಡೆಯುತ್ತಿವೆ. ಅದುವೇ ಮಲೆಯಾಳಂನಲ್ಲಿ 8 ವರ್ಷದಿಂದ ದೊಡ್ಡ ಚರ್ಚೆ ಆಗುತ್ತಿರೋ 1 ಸಾವಿರ ಕೋಟಿ ಬಜೆಟ್​​ನ ಸಿನಿಮಾ..

ಮಲಯಾಳಂನ 'ರಂಡಮೂಳಂ' ಕಾದಂಬರಿಗೆ ಮರುಜೀವ..!

ಹೌದು, ಮಲಯಾಳಂನಲ್ಲಿ 'ರಂಡಮೂಳಂ' ಎಂಬ ಕಾದಂಬರಿ ಬಹಳ ಜನಪ್ರಿಯ. ಭೀಮನ ದೃಷ್ಟಿಕೋನದಲ್ಲಿ ಮಹಾಭಾರತ ಕಥೆ ಈ ಕಾಂದಂಬರಿಯಲ್ಲಿದೆ. ಎಂ. ಟಿ. ವಾಸುದೇವನ್ ನಾಯರ್ ಈ ಕಾದಂಬರಿ ರಚಿಸಿದ್ದು, ದಶಕಗಳಿಂದ ಈ ಕಾದಂಬರಿಯನ್ನು ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಆದ್ರೆ ಅದಕ್ಕೊಂದು ಸೂಕ್ತ ವೇದಿಕೆ ಸೃಷ್ಟಿಯಾಗಿರಲಿಲ್ಲ. ಕಾಂತಾರದ ಹಿಟ್​​ ಬಳಿಕ ಇಂಥಾದೊಂದು ಕನಸಿಗೆ ಮತ್ತೆ ಜೀವ ಬಂದಿದೆ.

ರಿಷಬ್ ಬಳಿ ಬಂತು ಮೋಹನ್‌ಲಾಲ್​​ ಪಾಲಾಗಿದ್ದ ಕಥೆ..!

ಹಾಗ್ ನೋಡಿದ್ರೆ, ಒಂದು ಸಾವಿರ ಕೋಟಿಯಲ್ಲಿ ನಿರ್ಮಾಣಕ್ಕೆ ರೆಡಿಯಾಗಿದ್ದ 'ರಂಡಮೂಳಂ' ಕಾದಂಬರಿಯ ಭೀಮನ ಕಥೆಯಲ್ಲಿ ಮಲೆಯಾಳಂ ಸೂಪರ್ ಸ್ಟಾರ್ ಮೋಹನಲ್ ಲಾಲ್ ಬಲ ಭೀಮನ ರೋಲ್​​​ನಲ್ಲಿ ನಟಿಸಬೇಕಿತ್ತು. 8 ವರ್ಷದ ಹಿಂದೆಯೇ ಈ ಕಥೆಗೆ ಓಂಕಾರ ಹಾಕಲಾಗಿತ್ತು. ಉಡುಪಿ ಮೂಲದ ಬಿಆರ್ ಶೆಟ್ಟಿ ಈ ಸಿನಿಮಾವನ್ನ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿದ್ರು. ವಿ.ಎ. ಶ್ರೀಕುಮಾರ್ ಮೆನನ್ ನಿರ್ದೇಶನಕ್ಕೆ ಸಜ್ಜಾಗಿದ್ರು. ಆದ್ರೆ ಬರಹಗಾರ ಎಂ. ಟಿ. ವಾಸುದೇವನ್ ನಾಯರ್ ಹಾಗೂ ನಿರ್ದೇಶಕ ವಿ.ಎ. ಶ್ರೀಕುಮಾರ್ ಮೆನನ್ ನಡುವಿನ ಭಿನ್ನಾಭಿಪ್ರಾಯದಿಂದ ಸಿನಿಮಾ ನಿಂತು ಹೋಗಿತ್ತು. ಈಗ ಮೋಹನ್​ ಲಾಲ್ ಪಾಲಾಗಬೇಕಿದ್ದ ಆ ಸಿನಿಮಾ ರಿಷಬ್ ಶೆಟ್ಟಿ ಜೋಳಿಗೆ ಸೇರೋ ಸಮಯ ಬಂದಿದೆ.

'ರಂಡಮೂಳಂ' ಚಿತ್ರದಕ್ಕೆ ರಿಷಬ್ ನಟ, ನಿರ್ದೇಶಕ?

'ರಂಡಮೂಳಂ' ಸಿನಿಮಾ ಶೀಘ್ರದಲ್ಲೇ ನಿರ್ಮಾಣವಾಗುತ್ತದೆ ಅಂತ ಕಾದಂಬರಿ ಬರೆದ ಎಂ. ಟಿ. ವಾಸುದೇವನ್ ನಾಯರ್ ಪುತ್ರಿ ಅಶ್ವತ್ತಿ ನಾಯರ್ ಹೇಳಿದ್ದಾರೆ. 'ರಂಡಮೂಳಂ' ರೈಟ್ಸ್​​ ಉಡುಪಿಯ ಬಿ.ಆರ್ ಶೆಟ್ಟಿಯ ಬಳಿ ಇದೆಯಂತೆ. ರಿಷಬ್ ಶೆಟ್ಟಿ ಬಾಕ್ಸಾಫೀಸ್​​ನಲ್ಲಿ ಸಾವಿರ ಕೋಟಿ ಕಲೆಕ್ಷನ್​ ಮಡೋ ತಾಕತ್ತಿರೋ ಹೀರೋ. ಅದರಲ್ಲೂ ಉಡುಪಿ ಜಿಲ್ಲೆಯ ಹುಡುಗ ರಿಷಬ್ ಶೆಟ್ಟಿ. ಹೀಗಾಗಿ ಈಡೋ ಜೋಡು ಸರಿಯಾಗಿ ಮ್ಯಾಚ್ ಆಗಿದ್ದು, ರಿಷಬ್ ಶೆಟ್ಟಿ ನಂಬಿ ನಿರ್ಮಾಪಕ ಬಿ.ಆರ್ ಶೆಟ್ಟಿ 1 ಸಾವಿರ ಕೋಟಿ ಬಂಡವಾಳ ಹೂಡಿ ಸಿನಿಮಾ ಮಾಡಿದ್ರು ಆಶ್ಚರ್ಯವೇನಿಲ್ಲ.

ವಿಜಯ್ ಪಟೆದಾರ್, ಏಷ್ಯಾನೆಟ್ ಸುವರ್ಣ ನ್ಯೂಸ್​

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಖ ಕೆಂಪಗೆ ಮಾಡಿಕೊಂಡು 'ಯಲಾ ಮಾರ್ಜಾಲಾ..' ಎಂದು ಅಂಬರೀಶ್‌ಗೆ ಬೈಯ್ದಿದ್ದ ಡಾ ರಾಜ್‌ಕುಮಾರ್!
JC Movie Review: ಗಾಢ ಸಂದೇಶ ಕೊಟ್ಟು, ರೌಡಿಸಂ ಕತೆಯ ಕೊನೆಯಲ್ಲಿ ಸಣ್ಣ ನಿಟ್ಟುಸಿರು!