
'ಕಾಟನ್‌ಪೇಟೆ' ಚಿತ್ರದ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಶ್ರೀನಿವಾಸ್ ಅವರು ಏಕಾಏಕಿ ಜೋಗಿ ಪ್ರೇಮ್, ಡಿಕೆ ಶಿವಕುಮಾರ್, ದರ್ಶನ್, ಪುನೀತ್ ರಾಜ್‌ಕುಮಾರ್ ವಿರುದ್ಧ ಬಾಯಿಗೆ ಬಂದಹಾಗೆ ಮಾತನಾಡಿದ್ದರು. ಈಗ ಈ ವಿಚಾರವಾಗಿ ಜೋಗಿ ಪ್ರೇಮ್ ಅವರು ದೂರು ದಾಖಲಿಸಿದ್ದಾರೆ.
ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ತುಂಬಾ ವರ್ಸ್ಟ್ ಆಗಿ ಮಾತಾಡಿದ್ದಾರೆ. ಅವ್ರು ಅಮ್ಮನಿಗೆ ಹುಟ್ಟಿಲ್ವಾ ಅಮ್ಮ..? ಅವ್ರು ಮಾತಾಡಿರುವುದು ತುಂಬ ನೋವಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಎನ್ ಸಿಆರ್ ದಾಖಲಾಗಿದೆ. ಫಿಲ್ಮ್ ಚೇಂಬರ್ ಗೂ ದೂರು ನೀಡಿದ್ದೇನೆ. ತಾಯಂದಿರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಎಜುಕೇಶನ್ ಇಲ್ಲದೆ ಇರುವ ಹಾಗೇ ಮಾತನಾಡಿದ್ದಾರೆ. ಅವ್ರು ಮಾತನಾಡಿದ ಹಾಗೆ ನಮಗೂ ಮಾತನಾಡಲು ಬರುತ್ತದೆ. ಆದರೆ ನಾನು ಅವರ ಕೀಳುಮಟ್ಟಕ್ಕೆ ಇಳಿಯಲ್ಲ. ಮಾನಹಾನಿ ಕೇಸ್ ಹಾಕ್ತೇನೆ. ಎಷ್ಟು ಕೋಟಿಗೆ ಅಂತಾ ನಮ್ಮ ವಕೀಲರು ಹೇಳ್ತಾರೆ. ಪುನೀತ್ ಅವರ ಜೊತೆಗೆ ಪಿಚ್ಚರ್ ಮಾಡಲು 9 ಲಕ್ಷ ನನ್ನಗೆ ಅಡ್ವಾನ್ಸ್ ಕೊಟ್ಟಿದ್ರು. ಆದರೆ ಅವರು ವಾಪಸ್ ಬರಲೇ ಇಲ್ಲ. ನಂತರ ಸಾರಾ ಗೋವಿಂದ್ ಅವರ ಅದ್ಯಕ್ಷತೆಯಲ್ಲಿ ಹಣ ವಾಪಸ್ ನೀಡಿದ್ದೇನೆ. ಆದರೂ ಈಗ ಮತ್ತೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದಿದ್ದಾರೆ ಪ್ರೇಮ್.
ನನ್ನ ಒಬ್ಬನ ಬಗ್ಗೆ ಮಾತನಾಡಿದ್ರೆ ಸುಮ್ಮನೆ ಆಗ್ತಿದೆ. ಆದರೆ ಅವರು ಅಪ್ಪು ಬಗ್ಗೆ, ದರ್ಶನ್ ಬಗ್ಗೆ, ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಿದ್ದಾರೆ. ನನ್ನ ಯೋಗ್ಯತೆ ಬಗ್ಗೆ ಮಾತನಾಡುವ ಮುನ್ನ ಅವರ ಯೋಗ್ಯತೆ ನೋಡಿಕೊಳ್ಳಬೇಕು ಎಂದು ಪ್ರೇಮ್ ಅವರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಅಧ್ಯಕ್ತರು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಬೆಂಗಳೂರು.
ಮಾನ್ಯರೆ,
ವಿಷಯ; ನಿರ್ಮಾಪಕ ಆರ್.ಎಸ್ ಶ್ರೀನಿವಾಸ್ ಅವರು ನನ್ನ ಬಗ್ಗೆ ತಪ್ಪು ಆಪಾದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಹಾನಿ ಮಾಡಿರುವ ಬಗ್ಗೆ
ಈ ಮೂಲಕ ತಿಳಿಸುವುದೇನೆಂದರೆ ನಿರ್ದೇಶಕ, ನಟ, ನಿರ್ಮಾಪಕನಾದ ನಾನು ಪ್ರೇಮ್. ಆರ್. 25 ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಿದ್ದು ಇಲ್ಲಿಯವರೆಗೂ ಹಲವಾರು ನಿರ್ಮಾಪಕರ ಜೊತೆ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಹಲವಾರು ಸದಾಭಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿದ್ದೇನೆ.
ಇಲ್ಲಿಯವರೆಗೂ ನನ್ನ ವೃತ್ತಿ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತ ಕಾರ್ಯನಿರ್ವಹಿಸುತ್ತ ಬಂದಿರುತ್ತೇನೆ. ನಿರ್ಮಾಪಕ ಆರ್.ಎಸ್ ಶ್ರೀನಿವಾಸ್ ರವರು ನನ್ನ ಬಳಿ ಚಿತ್ರ ನಿರ್ದೇಶನ ಮಾಡಿ ಕೊಡಲು ಕೇಳಿಕೊಂಡು ನನ್ನ ಬಳಿ ಬಂದು 2004 ರಲ್ಲಿ ಕೆ.ಪಿ. ಶ್ರೀಕಾಂತ ಎನ್ನುವವರ ಮೂಲಕ ಆರ್.ಎಸ್ ಶ್ರೀನಿವಾಸ್ ರವರು ಬಂದು ಮುಂಗಡವಾಗಿ 9 ಲಕ್ಷಗಳನ್ನು ನೀಡಿದ್ದರು ಅದರಲ್ಲಿ ಚೆಕ್ ಮೂಲಕ 5 ಲಕ್ಷ ಹಾಗೂ ನಗದು ರೂಪದಲ್ಲಿ 4 ಲಕ್ಷಗಳನ್ನು ನೀಡಿದ್ದರು. ಇದಾದನಂತರ ಅವರಿಗಾಗಿ ಸಿನಿಮಾ ಮಾಡಲು ಒಂದು ಆಫೀಸ್ ಮಾಡಿ ಒಂದು ತಂಡವನ್ನು ಕಟ್ಟಿಕೊಂಡು ಚಿತ್ರಕಥೆ ಬರೆಯಲು ಪ್ರಾರಂಬಿಸಿದೆ.
ಕಥೆ ಹಾಗೂ ಚಿತ್ರ ಕಥೆ ತಯಾರಾದ ನಂತರ ಹಲವು ಬಾರಿ ಸಂಪರ್ಕಿಸಿದಾಗ ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಸಿಗದೇ ಇದ್ದಾಗ ಇದ ರೀತಿ ಒಂದು ವರ್ಷಗಳ ಕಾಲ ನನ್ನ ಹಾಗೂ ನನ್ನ ತಂಡಡ ಸಮಯವನ್ನು ವ್ಯರ್ತ ಮಾಡಿದ್ದಲ್ಲದ ಯಾವುದೇ ರೀತಿಯ ಹಣ ಕಾಸನ್ನು ನನ್ನ ಆಫೀಸ್‌ನ ವೆಚ್ಚಕ್ಕಾಗಾಲಿ, ನನ್ನ ಸಹ ನಿರ್ದೇಶಕರ ತಂಡಕ್ಕಾಗಲಿ ನೀಡಲಿಲ್ಲ. ಒಂದು ವರ್ಷಗಳ ಕಾಲ ಆಫೀಸ್‌ನ ಹಾಗೂ ತಂಡದ ಖರ್ಚು-ವೆಚ್ಚಗಳನ್ನು ನಾನೆ ಬರಿಸಿರುತ್ತೇನೆ, ಇದರಿಂದ ನನಗೆ ವೈಯಕ್ತಿಕವಾಗಿ 15 ರಿಂದ 20 ಲಕ್ಷ ಖರ್ಚು ಆಗಿದೆ.
ನನಗೆ ಈ ಸಮಯದಲ್ಲಿ ಹಲವಾರು ನಿರ್ಮಾಪಕರು ನನಗೆ ನಿರ್ದೇಶಿಸಲು ಹಾಗೂ ನಟಿಸಲು ಅವಕಾಶಗಳು ಬಂದಿದ್ದವು ನಾನು ಇವರ ಚಿತ್ರ ನಿರ್ದೇಶನ ಮಾಡಲು ಬಂದಂತಹ ಈ ಎಲ್ಲ ಅವಕಾಶಗಳನ್ನು ಕಳೆದುಕೊಂಡಿದ್ದಲ್ಲದೆ ಕೋಟಿಗಟ್ಟಲೆ ನಷ್ಟವನ್ನು ಅನುಭವಿಸಿದ್ದೇನೆ.
ಇದಾದ ಸುಮಾರು ವರ್ಷಗಳ ನಂತರ ನಿರ್ಮಾಪಕ ಆರ್.ಎಸ್ ಶ್ರೀನಿವಾಸ್ ರವರು ನನ್ನನ್ನು ಸಂಪರ್ಕಿಸಿ ನನಗೆ ಹಣದ ಅವಶ್ಯಕತೆ ಇದೆ ಎಂದು ನೀಡಿದ ಮುಂಗಡ ಹಣವನ್ನು ವಾಪಸ್ ಕೇಳಿದ್ದರು. ನಾನು ಆ ಸಂದರ್ಭದಲ್ಲಿ ಅವರಿಗೆ ಈ ಮೇಲ್ಕಂಡ ವಿಷಯವನ್ನು ತಿಳಿಸಿ ನೀವು ಕೊಟ್ಟಿರುವ ಹಣಕ್ಕಿಂತ ಹೆಚ್ಚಿನ ಹಣವನ್ನು ಚಿತ್ರಕಥೆಗಾಗಿ ಖರ್ಚು ಮಾಡಿದ್ದೇನೆ ಎಂದು ಹೇಳಿದೆ.
ಆಗ ಆರ್ ಎಸ್ ಶ್ರೀನಿವಾಸ್ ಅವರು ತುಂಬ ಕಷ್ಟದಲ್ಲಿರುವೆ ಎಂದು ಹೇಳಿದಾಗ ನಿರ್ಮಾಪಕನ ಕಷ್ಟವನ್ನು ಅರಿತು ನನ್ನ ಸ್ವಂತ ಹಣದಿಂದ 5 ಲಕ್ಷ ಹಣವನ್ನು 2.5 ಲಕ್ಷಗಳನ್ನು ಚೆಕ್ ಮೂಲಕ ಹಾಗೂ 2.5 ಲಕ್ಷಗಳನ್ನು ನಗದು ರೂಪದಲ್ಲಿ ನಿರ್ಮಾಪಕರಾದ ಸಾ.ರ. ಗೋವಿಂದ್ ರವರ ಮದ್ಯಸ್ತಿಕೆಯಲ್ಲಿ ನೀಡಿದ್ದೇನೆ. ಆಗ ಅವರು ಹಣವನ್ನು ಸ್ವೀಕರಿಸಿ ಧನ್ಯವಾದ ತಿಳಿಸಿದ್ದರು.
ಇದಾದ ಮತ್ತೆ ಕೆಲವು ವರ್ಷಗಳ ನಂತರ ದಿನಾಂಕ 4/02/2026 ರಂದು ಎಂ. ಎಂ. ಡಿ ಲೆಗೆಸಿ ನಲ್ಲಿ ಅವರದೇ ನಿರ್ಮಾಣದ ಕಾಟನ್ ಪೇಟೆ ಗೇಟ್' ಎಂಬ ಚಿತ್ರದ ಪತ್ರಿಕಾ ಗೋಷ್ಠಿಯಲ್ಲಿ ನನ್ನ ಬಗ್ಗೆ ಇಲ್ಲ ಸಲ್ಲದ ಆಪಾದನೆ ಮಾಡಿ, ಕೆಳಮಟ್ಟದ ಅವಾಚ್ಯ ಶಬ್ದಗಳಿಂದ ನನಗೆ ಹಾಗೂ ನನ್ನ ತಾಯಿಯ ಬಗ್ಗೆ ನಿಂದಿಸಿದ್ದಾರೆ.
ಇದರಿಂದ ನನ್ನ ಪತ್ನಿಯಾದ ನಟಿ ನಿರ್ಮಾಪಕಿ ಶ್ರೀಮತಿ ರಕ್ಷಿತಾ ಪ್ರೇಮ್ ಅರವರಿಗೆ ಹಾಗೂ ನನ್ನ ಮಗ ಮಾನಸಿಕವಾಗಿ ಮನನೊಂದಿದ್ದಾರೆ. ನನ್ನ ಅಭಿಮಾನಿಗಳು ಹಾಗೂ ಹಿತೈಷಿಗಳಗು ಬೇಸರ ಉಂಟಾಗಿದೆ. ಇದರಿಂದ ಈ ಕೂಡಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮದ್ಯ ಪ್ರವೇಶಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.
“ಜೋಗಿ ಪ್ರೇಮ್ ಊರಿನಲ್ಲಿ ಎಮ್ಮೆ, ಕುರಿ ಮೇಯಿಸುತ್ತಿದ್ದನು. ಇಂದು ನಿರ್ಮಾಪಕರ ತಲೆಯನ್ನು ಹೊಡೆದು ನೂರಾರು ಕೋಟಿ ರೂಪಾಯಿ ಆಸ್ತಿ ಮಾಡಿದ್ದೀಯಾ, ಆರಾಮಾಗಿದ್ದೀಯಾ. ಆದರೆ ನಿನಗೆ ಸಿನಿಮಾ ನೀಡಿದ ನಿರ್ಮಾಪಕರು ಉದ್ದಾರ ಆಗಿಲ್ಲ. ನೀನು ನನ್ನ ಹತ್ತಿರವೇ 10 ಲಕ್ಷ ರೂಪಾಯಿ ಹಣ ಪಡೆದು 18 ವರ್ಷಗಳಾಗಿವೆ, ಇಂದು ಕೂಡ ಹಣ ಕೊಟ್ಟಿಲ್ಲ. ನೀನು ಗಂಡಸಾಗಿದ್ದರೆ ನನ್ನ ಎದುರಿಗೆ ಬಾ” ಎಂದು ಕನಕಪುರ ಶ್ರೀನಿವಾಸ್ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.