ನೀನು ನಮ್ಮ ಬದುಕಿನ ಅತ್ಯುತ್ತಮ ಸಂಗತಿ; ಮಗಳನ್ನು ನೆನೆದು ಕಣ್ಣೀರಿಟ್ಟ ಗಾಯಕಿ

By Suvarna News  |  First Published Apr 19, 2020, 12:42 PM IST

ಕನ್ನಡ ಚಿತ್ರರಂಗದ ಖ್ಯಾತ ಗಾಯಕಿ ಚಿತ್ರಾ ಕೆಲ ದಿನಗಳ ಹಿಂದೆ ಮಗಳ ಫೋಟೋ ಶೇರ್‌ ಮಾಡಿಕೊಂಡು ಭಾವುಕ ಮಾತುಗಳನಾಡಿದ್ದಾರೆ....


ಕ್ರಿಷ್ಣನ್‌ ನಾಯರ್‌ ಶಾಂತಕುಮಾರಿ ಚಿತ್ರಾ ಅವರು ಚಿತ್ರರಂಗದಲ್ಲಿ ಗಾಯಕಿ ಕೆ ಎಸ್‌ ಚಿತ್ರಾ ಎಂದು ಗುರುತಿಸಿಕೊಂಡಿದ್ದಾರೆ .  ಕನ್ನಡ. ಹಿಂದಿ, ತೆಲುಗು, ಒಡಿಯಾ, ಅಸಾಮೀಸ್‌, ಬಂಗಾಳಿ,ಸಂಸ್ಕೃತ, ತುಳು, ಉರ್ದು, ಲ್ಯಾಟಿನ್‌, ಅರೇಬಿಕ್, ಪಂಜಾಬಿ ಹೀಗೆ  ಅನೇಕ ಭಾಷೆಗಳಲ್ಲಿ ಹಾಡಿರುವ ಗಾಯಕಿ ಚಿತ್ರಾ ಕೆಲ ದಿನಗಳ ಹಿಂದೆ ತಮ್ಮ ಪುಟ್ಟ ಕಂದಮ್ಮನನ್ನು ನೆನೆದು ಭಾವುಕರಾಗಿದ್ದಾರೆ.

ಚಿತ್ರಾ ಅವರು ತಮ್ಮ ಮಗಳು ನಂದನಾಳನ್ನು ಚಿಕ್ಕ ವಯಸ್ಸಿನಲ್ಲಿದ್ದಾಗ ಕಳೆದುಕೊಂಡಿದ್ದಾರೆ ಆಗ ಆಕೆಗೆ ಕೇವಲ  9 ವರ್ಷ. 2011ರ ಏಪ್ರಿಲ್‌ 4ರಂದು ದುಬೈನಲ್ಲಿ ಚಿತ್ರಾ ಅವರು ಎ.ಆರ್‌. ರೆಹೆಮಾನ್‌ ಜೊತೆ ಸಂಗೀತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಅವರು ಪುತ್ರಿ ನಂದನಾ ಅಕಸ್ಮಿಕವಾಗಿ ಈಜುಕೊಳಕ್ಕೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆಂಬ ಭೀಕರ ಘಟನೆ ಬಗ್ಗೆ ತಿಳಿಯಿತು.

Tap to resize

Latest Videos

ಹಿರಿಯ ನಟಿ ಹಾಗೂ ಜಾನಪದ ಗಾಯಕಿ ಮುನಿಯಮ್ಮ ನಿಧನ!

' ಜನ ಹೇಳುತ್ತಿರುತ್ತಾರೆ  ಪ್ರತಿ ಜನ್ಮಕ್ಕೂ ಒಂದು ಉದ್ದೇಶವಿದೆ ಮತ್ತು ಆ ಉದ್ದೇಶವನ್ನು ಮುಗಿಸಿದ ನಂತರ ಶಾಶ್ವತವಾಗಿ   ಹೋಗುತ್ತಾರೆಂದು ಹಾಗೆ ಸಮಯ ಎಲ್ಲವನ್ನೂ  ಸರಿ ಮಾಡುತ್ತದೆ ಎಂದು ಆದರೆ ಅದನ್ನು ಅನುಭವಿಸುವವರಿಗೆ ಮಾತ್ರ  ಗೊತ್ತು ಅದು ಸತ್ಯವಲ್ಲ ಎಂದು.ಮಿಸ್‌ ಯು ನಂದನಾ'ಎಂದು ಚಿತ್ರಾ ಫೇಸ್‌ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

 

click me!