
ನ.20ರಿಂದ ನ.28ರವರೆಗೆ ಗೋವಾದಲ್ಲಿ ನಡೆಯಲಿರುವ ಪ್ರತಿಷ್ಠಿತ 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ 50 ವರ್ಷಗಳ ಸಿನಿಪಯಣಕ್ಕೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ.
ನ. 21ರಂದು ಚಿತ್ರೋತ್ಸವದಲ್ಲಿ ಗಿರೀಶ್ ಕಾಸರವಳ್ಳಿ ಅವರ ಕುರಿತಾದ ‘ದಿ ಮೋರಲ್ ಯೂನಿವರ್ಸ್ ಆಫ್ ಪ್ಯಾರಲಲ್ ಸಿನಿಮಾ: 50 ಇಯರ್ಸ್ ಆಫ್ ಗಿರೀಶ್ ಕಾಸರವಳ್ಳಿ’ ಎಂಬ ವಿಶೇಷ ಸಂವಾದ ಆಯೋಜಿಸಲಾಗಿದೆ. ನಮನ್ ರಾಮಚಂದ್ರನ್ ಈ ಗೋಷ್ಠಿ ನಡೆಸಲಿದ್ದಾರೆ. ಕಾಸರವಳ್ಳಿಯವರ 50 ವರ್ಷಗಳ ಸಿನಿಮಾ ಹಾದಿ, ಅವರು ಎತ್ತಿಹಿಡಿದ ಸಾಮಾಜಿಕ ನ್ಯಾಯ ಮತ್ತು ನೈತಿಕ ಮೌಲ್ಯಗಳ ಕುರಿತು ಈ ಗೋಷ್ಠಿಯಲ್ಲಿ ಚರ್ಚೆ ನಡೆಯಲಿದೆ.
ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಚಿತ್ರವು ಇಂಡಿಯನ್ ಪನೋರಮಾ ವಿಭಾಗ ಹಾಗೂ ಅಂತರರಾಷ್ಟ್ರೀಯ ಸ್ಪರ್ಧೆ ವಿಭಾಗಗಳೆರಡರಲ್ಲೂ ಪ್ರದರ್ಶನಗೊಳ್ಳಲಿದೆ. ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಸಾರಥ್ಯದ ‘ರೂಬಿ-ಕ್ಯೂಬ್’ ಚಿತ್ರವು ಪ್ರಾದೇಶಿಕ ಚಲನಚಿತ್ರಗಳ ವಿಭಾಗದಲ್ಲಿ ಪ್ರದರ್ಶಿಸಲ್ಪಡುತ್ತಿದೆ.
ಅನುಪಮಾ ಶರಧಿ ನಿರ್ದೇಶನದ ‘ಪಿಲಿ ಚನ್ನೆ’ ತುಳು ಚಿತ್ರವು ಪ್ರತಿಷ್ಠಿತ ವರ್ಲ್ಡ್ ಪ್ರೀಮಿಯರ್ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ. ಗಿಡಮೂಲಿಕೆ ಚಿಕಿತ್ಸೆ ಬಲ್ಲ ಬುಡಕಟ್ಟು ಮಹಿಳೆಯೊಬ್ಬಳು, ತನ್ನ ಜ್ಞಾನವನ್ನು ದುರಾಸೆಯ ವ್ಯಕ್ತಿಗಳಿಂದ ರಕ್ಷಿಸಿಕೊಳ್ಳಲು ನಡೆಸುವ ಹೋರಾಟ ಈ ಚಿತ್ರದ ಕಥಾವಸ್ತುವಾಗಿದೆ. ವಿಶೇಷವಾಗಿ ಡಾ. ಪ್ರದೀಪ್ ಕೆಂಚನೂರು ನಿರ್ದೇಶನದ ‘ದಿ ಹಗ್ ಆಫ್ ಎಂಪ್ಟಿನೆಸ್’ ಎಂಬ ಸಾಕ್ಷ್ಯಚಿತ್ರ ಮತ್ತು ಅಭಿಷೇಕ್ ನಿರ್ದೇಶನದ ‘ಉಳಿದಿದ್ದು ಸಂಪಿಗೆ ಮಾತ್ರ’ ಕಿರುಚಿತ್ರ ಕೂಡ ಪ್ರದರ್ಶನಗೊಳ್ಳಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.