SPBಯಂತೆ ಮತ್ತೆ ಕನ್ನಡ ಹಾಡನ್ನು ಹೊಗಳಿದ ಸೋನು ನಿಗಮ್, ಕನ್ನಡದವರೇ ದೂರ ಯಾಕೆ?!

Published : Jan 23, 2025, 02:21 PM ISTUpdated : Jan 23, 2025, 03:32 PM IST
SPBಯಂತೆ ಮತ್ತೆ ಕನ್ನಡ ಹಾಡನ್ನು ಹೊಗಳಿದ ಸೋನು ನಿಗಮ್, ಕನ್ನಡದವರೇ ದೂರ ಯಾಕೆ?!

ಸಾರಾಂಶ

ಬಾಲಿವುಡ್ ಗಾಯಕ ಸೋನು ನಿಗಮ್ ಬೆಂಗಳೂರಿನಲ್ಲಿ ಕನ್ನಡದ ಮೇಲಿನ ಪ್ರೀತಿ ವ್ಯಕ್ತಪಡಿಸಿ, 'ಅನಿಸುತಿದೆ ಯಾಕೋ ಇಂದು..' ಹಾಡನ್ನು ಹಾಡಿದರು. ಮುಂಗಾರು ಮಳೆ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಹಾಡಿದ್ದೇನೆ, ಬೇರೆ ಭಾಷೆಗಳಿಗಿಂತ ಕನ್ನಡದಲ್ಲಿ ಉತ್ತಮ ಹಾಡುಗಳನ್ನು ಹಾಡಿದ್ದೇನೆ ಎಂದರು. ಎಸ್ ಪಿ ಬಾಲಸುಬ್ರಹ್ಮಣ್ಯಂ ಕೂಡ ಕನ್ನಡಿಗರ ಪ್ರೀತಿಯನ್ನು ಹೊಗಳಿದ್ದನ್ನು ಸ್ಮರಿಸಿದರು.

'ನಾನು ಬೇರೆ ಭಾಷೆಗಳಿಗಿಂತ ಕನ್ನಡದಲ್ಲಿ ಹೆಚ್ಚು ಒಳ್ಳೆಯ ಹಾಡುಗಳನ್ನು ಹಾಡಿದ್ದೇನೆ' ಎಂದಿದ್ದಾರೆ ಬಾಲಿವುಡ್ ಗಾಯಕ ಸೋನು ನಿಗಮ್. ಇತ್ತಿಚೆಗೆ ಬೆಂಗಳೂರಿಗೆ ಬಂದಿದ್ದ ಗಾಯಕ ಸೋನು ನಿಗಮ್ (Sonu Nigam) ವೇದಿಕೆ ಮೇಲೆ ಧೈರ್ಯವಾಗಿ ತಮಗಿರುವ ಕನ್ನಡ ಪ್ರೀತಿಯನ್ನು ಪ್ರದರ್ಶನ ಮಾಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಕನ್ನಡ ಪ್ರೇಮಕ್ಕೆ ಸಾಕ್ಷಿ ಎಂಬಂತೆ ಅಲ್ಲೇ ಆಗಲೇ 'ಅನಿಸುತಿದೆ ಯಾಕೋ ಇಂದು..' ಹಾಡನ್ನು ಹಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದ್ದಾರೆ. 

ಹೌದು, ಹಿಂದಿ ಗಾಯಕ ಸೋನು ನಿಗಮ್ ಕನ್ನಡದಲ್ಲಿ ಬಹಳಷ್ಟು ಹಾಡನ್ನು ಹಾಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ 'ಮುಂಗಾರು ಮಳೆ' ಚಿತ್ರದಲ್ಲಿ ಮನೋಮೂರ್ತಿ ಸಂಗೀತ ನಿರ್ದೇಶನದಲ್ಲಿ ಸೋನು ನಿಗಮ್ ಹಾಡಿದ  ಹಾಡುಗಳು ಭಾರೀ ಜನಪ್ರಿಯತೆ ಗಳಿಸಿದವು. ಬಳಿಕ ಅವರು ಕನ್ನಡದಲ್ಲಿ ಬಹಳಷ್ಟು ಹಾಡುಗಳನ್ನು ಹಾಡಿದ್ದಾರೆ. ಹೆಚ್ಚು ಕಡಿಮೆ ಬರೋಬ್ಬರಿ ಇಂದು ದಶಕದ ಕಾಲ ಕನ್ನಡಿಗರು ಸೋನು ನಿಗಮ್ ಹಾಡುಗಳನ್ನು ಎಂಜಾಯ್ ಮಾಡಿದ್ದಾರೆ. 

ಕನ್ನಡದಲ್ಲಿ ಬೆಳೆದು ಹಿಂದಿಗೆ ಮಾರಿಕೊಂಡು ಈಗ 2.5 ಲಕ್ಷ ಕೇಳ್ತಾರೆ; ಸಂಜಿತ್‌ ಹೆಗ್ಡೆ ವಿರುದ್ಧ ಕೆ.ಮಂಜು ಗರಂ

'ಈ ಸಂಜೆ ಯಾಕಾಗಿದೆ, ಕಣ್ ಕಣ್ಣ ಸಲಿಗೆ ಸೇರದಂತೆ ನೂರಾರು ಹಾಡುಗಳು ಸೋನು ನಿಗಮ್ ಕಂಠದಲ್ಲಿ ಮೂಡಿ ಬಂದಿವೆ. ಕನ್ನಡಿಗರು ಮುಕ್ತ ಹೃದಯದಿಂದ ಹಿಂದಿ ಗಾಯಕ ಸೋನು ನಿಗಲ್ ಅವರನ್ನು ಒಪ್ಪಿಕೊಂಡಂತೆ, ಸೋನು ಕೂಡ ಕನ್ನಡಗರ ಔದಾರ್ಯಕ್ಕೆ ಮನಸೋತಿದ್ದಾರೆ. ಅವರು ಯಾವತ್ತೇ ಇಲ್ಲಿಗೆ ಬಂದರೂ ಕನ್ನಡಿಗರನ್ನು, ಕನ್ನಡ ಹಾಡುಗಳನ್ನು ಹೊಗಳಿ ತಮ್ಮ ಕೃತಜ್ಞತೆ ಸಲ್ಲಿಸಲು ಮರೆಯುವುದಿಲ್ಲ. 

ಮೇರು ಗಾಯಕ, ವಿಶ್ವ ಪ್ರಸಿದ್ಧ ಗಾನ ಗಂಧರ್ವ ಎಸ್‌ಪಿ ಬಾಲಸುಬ್ರಹ್ಮಣ್ಯಂ (SP Balasubrahmanyam) ಅವರು ಸಹ ಕನ್ನಡಿಗರನ್ನು, ಕನ್ನಡ ಹಾಡುಗಳನ್ನು ಹಾಗೂ ಕನ್ನಡ ಪ್ರೇಕ್ಷಕರ ಹೃದಯ ಶ್ರೀಮಂತಿಕೆಯನ್ನು ಯಾವತ್ತೂ ಹೊಗಳುತ್ತಿದ್ದರು. ಅಷ್ಟೇ ಅಲ್ಲ, ಎಸ್‌ಪಿಬಿ ಅವರು ಬಹಳಷ್ಟು ಬಾರಿ 'ನಾನು ಬಹಳಷ್ಟು ಭಾಷೆಗಳಲ್ಲಿ ಹಾಡಿದ್ದೇನೆ. ಆದರೆ ಕನ್ನಡಿಗರು ತೋರಿಸಿದಷ್ಟು ಪ್ರೀತಿ ನನಗೆ ಬೇರೆಲ್ಲೂ ಸಿಗಲಿಲ್ಲ. ನಾನು ಮತ್ತೆ ಹುಟ್ಟಿದರೆ ಕನ್ನಡ ನಾಡಿನಲ್ಲೆ ಹುಟ್ಟಬೇಕು' ಎಂದಿದ್ದಾರೆ. 

ಸೋನಿ ನಿಗಮ್ ಹಾಗೂ ಎಸ್‌ಪಿಬಿ ಅವರು ಕನ್ನಡ ಹಾಡುಗಳ ಬಗ್ಗೆ ತುಂಬಾ ಕೃತಜ್ಞತೆ ಇಟ್ಟುಕೊಂಡಿದ್ದಾರೆ. ಅವರಿಬ್ಬರೂ ಹೋದಲ್ಲಿ ಬಂದಲ್ಲಿ ತಮ್ಮ ಕನ್ನಡ ಪ್ರೇಮವನ್ನು, ಕನ್ನಡದಲ್ಲಿ ತಾವು ಹಾಡಿದ ಸಾಕಷ್ಟು ಒಳ್ಳೊಳ್ಳೆಯ ಹಾಡುಗಳ ಬಗ್ಗೆ ಹೇಳಿಕೊಂಡು ಅಭಿಮಾನ ಮೆರೆದಿದ್ದಾರೆ. ಕನ್ನಡಿಗರೂ ಅಷ್ಟೇ, ಅವರಿಬ್ಬರೂ ಪರಭಾಷೆಯ ಗಾಯಕರು ಎಂಬ ಯಾವುದೇ ತಾರತಮ್ಯವನ್ನು ಮಾಡಿಲ್ಲ. 

ಎಲ್ಲಾ ಪ್ಯಾಕ್ ಮಾಡ್ಕೊಂಡು ಇದ್ದಕ್ಕಿದ್ದಂತೆ ಹಿಮಾಚಲ ಪ್ರದೇಶಕ್ಕೆ ಹೊರಟ ಚಂದನ್ ಶೆಟ್ಟಿ!

ಇತ್ತೀಚೆಗೆ ಕನ್ನಡ ಮೂಲದವರೇ ಆದ ಗಾಯಕ ಸಂಜಿತ್ ಹೆಗಡೆ (Sanjith Hegde) ಅವರು ಕನ್ನಡ ಹಾಡನ್ನು ಹಾಡಲು ಸಂಭಾವನೆ ವಿಷಯ ಮುಂದಿಟ್ಟು ಒಪ್ಪಿಲ್ಲ ಎಂದು ನಿರ್ಮಾಪಕ ಮಂಜು ಆರೋಪ ಮಾಡಿದ್ದರು. ಆದರೆ ಕೆ ಮಂಜು ಅವರ ಮಾತಿಗೆ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗಿವೆ. ಹಲವರು, 'ನೀವು ಪರಭಾಷೆಯ ಗಾಯಕರಿಗೆ ಕೊಡುವಷ್ಟೇ ಸಂಭಾವನೆಯನ್ನು ಅವರಿಗೂ ಕೊಡಿ, ಆಗ ಖಂಡಿತ ಅವರು ಕನ್ನಡ ಹಾಡುಗಳನ್ನೂ ಹಾಡುತ್ತಾರೆ' ಎಂದು ಗಾಯಕ ಸಂಜಿತ್ ಹೆಗಡೆ ಪರವಾಗಿ ಬ್ಯಾಟ್ ಬೀಸಿದ್ದಾರೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ