ದಾಸನಿಗೆ ಮತ್ತೊಂದು ಕೊಲೆ ಬೆದರಿಕೆ ತೂಗುಗತ್ತಿ; ಬಿಟ್ಟೆನೆಂದರೂ ಬಿಡದೀ ಜೈಲೆಂಬ ಮಾಯೆ!

Published : Jan 23, 2025, 12:00 PM IST
ದಾಸನಿಗೆ ಮತ್ತೊಂದು ಕೊಲೆ ಬೆದರಿಕೆ ತೂಗುಗತ್ತಿ; ಬಿಟ್ಟೆನೆಂದರೂ ಬಿಡದೀ ಜೈಲೆಂಬ ಮಾಯೆ!

ಸಾರಾಂಶ

ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಭಗವಾನ್ ಶ್ರೀಕೃಷ್ಣ ಸಿನಿಮಾ ನಿರ್ಮಾಪಕ ಭರತ್, ದರ್ಶನ್ ವಿರುದ್ಧ ಹಲ್ಲೆ ಮತ್ತು ಜೀವ ಬೆದರಿಕೆ ಪ್ರಕರಣವನ್ನು ಕೋರ್ಟ್‌ಗೆ ತೆಗೆದುಕೊಂಡು ಹೋಗಿದ್ದಾರೆ.

ಬೆಂಗಳೂರು (ಜ.23): ನಟ ದರ್ಶನ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕನ್ನಡ ಚಿತ್ರರಂಗದ ಭಗವಾನ್ ಶ್ರೀಕೃಷ್ಣ ಸಿನಿಮಾದ ನಿರ್ಮಾಪಕ ಭರತ್ ಅವರಿಗೆ ಹಲ್ಲೆ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣವನ್ನು ಇದೀಗ ಸ್ವತಃ ನಿರ್ಮಾಪಕರೇ ಕೋರ್ಟ್‌ಗೆ ತೆಗೆದುಕೊಂಡು ಹೋಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಉತ್ತಮ ಅಭಿನಯ ಹಾಗೂ ಲಕ್ಷಾಂಯರ ಅಭಿಮಾನಿಗಯಳನ್ನು ಗಳಿಸಿರುವ ನಟ ದರ್ಶನ್ ತೂಗುದೀಪ ನಿಜ ಜೀವನದಲ್ಲಿ ಹಲವು ಸಮಾಜಬಾಹಿರ ಕೃತ್ಯಗಳನ್ನು ಎಸಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ ಮುನ್ನವೇ ಹಲವು ನಿರ್ದೇಶಕರು, ನಿರ್ಮಾಪಕರಿಗೆ ಕೊಲೆ ಬೆದರಿಕೆ ಹಾಕಿದ್ದಾರೆಂಬ ಆರೋಪಗಳು ಕೂಡ ಕೇಳಿಬಂದಿವೆ. ಕಳೆದ ಎರಡು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಭರತ್ ಅವರಿಗೆ ಹಲ್ಲೆ ಮಾಡಿ, ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಆದರೆ, ಪೊಲೀಸರು ಈ ಕೇಸನ್ನು ಎಫ್‌ಐಆರ್ ದಾಖಲಿಸಿಕೊಳ್ಳದೇ ಕೆವಲ ಎನ್‌ಸಿಆರ್ ಮಾಡಿಕೊಂಡು ಸುಮ್ಮನಾಗಿದ್ದರು.

ಇದನ್ನೂ ಓದಿ: 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ, ದರ್ಶನ್‌ ಸಿನಿಮಾಗೂ ಅವಾರ್ಡ್!

ಆದರೆ, ಇದಾದ ನಂತರ ಕಳೆದ ವರ್ಷ ನಟ ದರ್ಶನ್ ಅವರ ಗೆಳತಿ ನಟಿ ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾನೆಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಭೀಕರವಾಗಿ ಕೊಲೆ ಮಾಡಿ, ಕಸದ ತೊಟ್ಟಿಗೆ ಆತನ ಹೆಣವನ್ನು ಬೀಸಾಡಿದ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ 6 ತಿಂಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದು, ಇದೀಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಆದರೆ, ಜೈಲಿನಿಂದ ಹೊರಗಿರುವ ನಟ ದರ್ಶನ್‌ಗೆ ಆರೋಪಗಳೆಂಬ ಸರಮಾಲೆಗಳು ಮತ್ತೆ ಸುತ್ತುವರೆದುಕೊಂಡು ಜೈಲೆಂಬ ಮಾಯೆಯ ಕಡೆಗೆ ಸೇರಿಸುವ ಪ್ರಯತ್ನವನ್ನು ಮಾಡುತ್ತಿವೆ. ಇದಕ್ಕೆ ಪೂರಕ ಎಂಬಂತೆ ನಿರ್ಮಾಪಕ ಭರತ್ ಅವರು ನಟ ದರ್ಶನ್ ವಿರುದ್ಧ ಕೊಲೆ ಬೆದರಿಕೆ ಎಫ್‌ಐಆರ್ ದಾಖಲಿಸಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: ದರ್ಶನ್​​ಗೆ ಬದುಕಿನ ಪಾಠ ಕಲಿಸಿತಾ ಜೈಲುವಾಸ? ಬದಲಾದ್ರಾ ದರ್ಶನ್​​;ಒಂದಾದ ಅಣ್ಣ-ತಮ್ಮ,ತಾಯಿ-ಮಗ

ಭಗವಾನ್ ಶ್ರೀ ಕೃಷ್ಣ ಸಿನಿಮಾದ ನಿರ್ಮಾಪಕ ಭರತ್ ಅವರು ಕಳೆದ ಮೂರು ದಿನಗಳ ಹಿಂದಷ್ಟೇ ನಟ ದರ್ಶನ್ ಹಾಗೂ ಆತನ ಸ್ನೇಹಿತರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ತಾವು ಕಳೆದ ಎರಡು ವರ್ಷಗಳ ಹಿಂದೆ ಕೆಂಗೇರಿ ಪೊಲೀಸ್ ಠಾಣೆಗೆ ಹೋಗಿ ದರ್ಶನ್ ಹಾಗೂ ಆತನ ಸ್ನೇಹಿತರು ತನಗೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾಗಿ ದೂರು ದಾಖಲಿಸಿದ್ದಾರಂತೆ. ಆದರೆ, ಪೊಲೀಸರು ಎಫ್‌ಐಆರ್ ಮಾಡಿಕೊಳ್ಳದೇ ಕೇವಲ ಎನ್‌ಸಿಆರ್ ಮಾಡಿ ಒಂದಷ್ಟು ದರ್ಶನ್‌ಗೆ ತಿಳಿ ಹೇಳುವುದಾಗಿ ಭರತ್ ಅವರನ್ನು ವಾಪಸ್ ಕಳುಹಿಸಿದ್ದಾರೆ. ಆದರೆ, ಇದೀಗ ನಿರ್ಮಾಪಕ ಭರತ್ ಅವರು ದರ್ಶನ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜ.20ರಂದು ಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ಅರ್ಜಿಯು ಫೆ.23ಕ್ಕೆ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ