
ವಿಕ್ಕಿ ವರುಣ್ ಹಾಗೂ ಧನ್ಯ ರಾಮ್‌ಕುಮಾರ್ ನಟನೆಯ ‘ಕಾಲಾಪತ್ಥರ್’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ನಾಳೆ ಸೆಪ್ಟೆಂಬರ್ 13ರಂದು ಈ ಸಿನಿಮಾ ತೆರೆಗೆ ಬರಲಿದೆ. ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ ಈ ಚಿತ್ರವನ್ನು ದುನಿಯಾ ಸೂರಿ ಗರಡಿಯಲ್ಲಿ ಪಳಗಿರುವ ನಾಯಕ ನಟ ವಿಕ್ಕಿ ವರುಣ್ ಅವರೇ ನಿರ್ದೇಶಿಸಿದ್ದಾರೆ. ಈ ಕುರಿತು ವಿಕ್ಕಿ ವರುಣ್, ‘ನಾನು ನಟನಾಗಲು ಚಿತ್ರರಂಗಕ್ಕೆ ಬಂದಿದ್ದಲ್ಲ. ನಿರ್ದೇಶಕನಾಗುವ ಕನಸು ಇತ್ತು. ‘ಕೆಂಡಸಂಪಿಗೆ’ ಚಿತ್ರಕ್ಕೆ ಹೀರೋ ಆದೆ.
ಈಗ ನಾನೇ ನಾಯಕನಾಗಿ ನಟಿಸಿರುವ ‘ಕಾಲಾಪತ್ಥರ್’ ಚಿತ್ರವನ್ನು ನಿರ್ದೇಶಿಸುವ ಮೂಲಕ ನನ್ನ ನಿರ್ದೇಶನದ ಕನಸನ್ನು ಈಡೇರಿಸಿಕೊಂಡಿದ್ದೇನೆ. ಹೊಸ ರೀತಿಯ ಕತೆ ಇರುವ ಸಿನಿಮಾ ಇದು’ ಎಂದರು. ಧನ್ಯಾ ರಾಮ್‌ಕುಮಾರ್, ‘ಚಿತ್ರದ ಟ್ರೇಲರ್ ನೋಡಿದಾಗ ಸಿನಿಮಾ ಮೇಲಿನ ಭರವಸೆ ಹೆಚ್ಚಿದೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಸಿನಿಮಾ ಇದು’ ಎಂದರು. ವಿನಯ್ ರಾಜ್‌ಕುಮಾರ್, ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ, ರಾಜೇಶ್ ನಟರಂಗ, ಚಕ್ರವರ್ತಿ ಚಂದ್ರಚೂಡ್, ನಿರ್ಮಾಪಕರಾದ ಭುವನ್ ಸುರೇಶ್, ನಾಗರಾಜ್ ಬಿಲ್ಲನಕೋಟೆ, ಮಾಸ್ತಿ ಉಪಸ್ಥಿತರಿದ್ದರು.
ಚಿತ್ರರಂಗಕ್ಕೆ ಬಂದು 15 ವರ್ಷ ಆಯಿತು: ವಿಕ್ಕಿ ವರುಣ್ ಹಾಗೂ ಧನ್ಯಾ ರಾಮ್‌ಕುಮಾರ್ ಅಭಿನಯದ ‘ಕಾಲಾಪತ್ಥರ್’ ಚಿತ್ರ ಸೆ.13ಕ್ಕೆ ತೆರೆಗೆ ಬರುತ್ತಿದೆ. ಭುವನ್ ಸುರೇಶ್, ನಾಗರಾಜ್ ಬಿಲ್ಲಿನಕೋಟೆ ನಿರ್ಮಾಣದ ಈ ಚಿತ್ರವನ್ನು ವಿಕ್ಕಿ ವರುಣ್ ಅವರೇ ನಿರ್ದೇಶಿಸಿದ್ದಾರೆ. ಹಿರಿಯ ಪತ್ರಕರ್ತ ಕೆ ಎಸ್ ವಾಸು ಚಿತ್ರದ ಬಿಡುಗಡೆ ದಿನಾಂಕ ಘೋಷಿಸುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು. ವಿಕ್ಕಿ ವರುಣ್, ‘ನಾನು ಕನ್ನಡ ಚಿತ್ರರಂಗಕ್ಕೆ ಬಂದು 15 ವರ್ಷಗಳಾಗಿವೆ. ನನ್ನ ನಟನೆಯ ‘ಕೆಂಡಸಂಪಿಗೆ’ ಕೂಡ ಸೆಪ್ಟೆಂಬರ್‌ನಲ್ಲೇ ಬಂದಿತ್ತು.
ಗೋಲ್ಡನ್ ಕಲರ್ ಕಾಂಜೀವರಂ ಸೀರೆಯಲ್ಲಿ ನಟಿ ಜಾನ್ವಿ ಕಪೂರ್: ಇದರ ಬೆಲೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ?
ಈಗ ನನ್ನ ನಿರ್ದೇಶನ ಮತ್ತು ಅಭಿನಯದ ‘ಕಾಲಾಪತ್ಥರ್’ ಅದೇ ತಿಂಗಳಲ್ಲಿ ಬರುತ್ತಿದೆ. ಇದು ಕಪ್ಪುಕಲ್ಲಿಗೆ ಸಂಬಂಧಿಸಿದ ಕತೆ. ಸತ್ಯಪ್ರಕಾಶ್ ಕತೆ ಬರೆದಿದ್ದಾರೆ’ ಎಂದರು. ಧನ್ಯ ರಾಮ್‌ಕುಮಾರ್, ‘ನಾನು ಶಿಕ್ಷಕಿ ಪಾತ್ರ ಮಾಡಿದ್ದೇನೆ. ಕತೆ ಮತ್ತು ನನ್ನ ಪಾತ್ರ ತುಂಬಾ ಚೆನ್ನಾಗಿದೆ’ ಎಂದರು. ನಿರ್ಮಾಪಕ ಉದಯ್ ಕೆ. ಮೆಹ್ತಾ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಛಾಯಾಗ್ರಾಹಕ ಸಂದೀಪ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.