
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಬೃಂದವಿಹಾರಿ' ಸಿನಿಮಾ ರಿಲೀಸ್ ಆಗಿದ್ದು, ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಈ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿರುವ ನಟಿ ದೇವಿಕಾ ಭಟ್.. ಸಿನಿಮಾ ರಿಲೀಸ್ ಬಳಿಕ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಗಣೇಶ್ ನಟನೆ ನೋಡಿ ಕಣ್ಣೀರು ಹಾಕಿದ ಕ್ಷಣವನ್ನು ಇಲ್ಲಿ ನೆನೆದಿದ್ದಾರೆ.
ಚಿತ್ರದ ಕೊನೆಯ 20 ನಿಮಿಷಗಳ ಕ್ಲೈಮ್ಯಾಕ್ಸ್ ಬಗ್ಗೆ ದೇವಿಕಾ ಭಟ್ ಮಾತನ್ನಾಡಿದ್ದಾರೆ. ಗಣೇಶ್ ಸರ್ ಅಭಿನಯ ನೋಡಿದರೆ ಎಂಥವರಿಗಾದರೂ ಕಣ್ಣೀರು ಬರುತ್ತದೆ. ಶೂಟಿಂಗ್ ಲೊಕೇಶನ್‌ನಲ್ಲಿ ಮಾಧವ (ಗಣೇಶ್) ಪಾತ್ರದ ಪರಿಸ್ಥಿತಿ ನೋಡಿ ನನಗೆ ಎಷ್ಟೋ ಸಲ 'ಪಾಪ' ಅನ್ನಿಸಿಬಿಟ್ಟಿದೆ. ಕ್ಲೈಮ್ಯಾಕ್ಸ್ ದೃಶ್ಯವನ್ನು ನೋಡಿ ಶೂಟಿಂಗ್‌ನಲ್ಲೇ ನಾನು ಅತ್ತಿದ್ದೆ ಎಂದು ಮತ್ತೆ ಭಾವುಕರಾಗಿದ್ದಾರೆ.
ಶೂಟಿಂಗ್ ಸಮಯದಲ್ಲಿ ಹಲವು ರೀ-ಟೇಕ್‌ಗಳ ನಡುವೆ ಆ ದೃಶ್ಯವನ್ನು ನೋಡಿದ್ದರೂ ಕೂಡ, ಇಂದು ಥಿಯೇಟರ್‌ನಲ್ಲಿ ಪ್ರೇಕ್ಷಕರ ಜೊತೆ ಕುಳಿತು ಆ ಸೀನ್ ಮತ್ತೆ ನೋಡಿದಾಗ ನನ್ನ ಕಣ್ಣಲ್ಲೂ ನೀರು ಬಂತು. ಗಣೇಶ್ ಸರ್ ನಟನೆ ಅಷ್ಟೊಂದು ಅದ್ಭುತವಾಗಿದೆ. ಚಿಕ್ಕಂದಿನಿಂದಲೂ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವಳು ನಾನು. ಒಬ್ಬ ಪ್ರೇಕ್ಷಕಿಯಾಗಿ ನೋಡಿದಾಗಲೂ ಆ ಎಮೋಷನ್ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ.
ಮೊದಲ ಸಿನಿಮಾದಲ್ಲೇ ಗೋಲ್ಡನ್ ಸ್ಟಾರ್ ಜೊತೆ ನಟಿಸಿದ ಖುಷಿ ಹಂಚಿಕೊಂಡ ದೇವಿಕಾ.. ಜನ ಥಿಯೇಟರ್‌ನಿಂದ ಆಚೆ ಬರುವಾಗ 'ರಾಧಾ.. ರಾಧಾ..' (ಚಿತ್ರದಲ್ಲಿ ದೇವಿಕಾ ಪಾತ್ರದ ಹೆಸರು) ಎಂದು ಜೋರಾಗಿ ಕೂಗುತ್ತಿದ್ದರು. ನನ್ನ ನಟನೆ ಹಾಗೂ ಲುಕ್ ಬಗ್ಗೆ ಎಲ್ಲರೂ ಒಳ್ಳೆಯ ಅಭಿಪ್ರಾಯ ಹೇಳುತ್ತಿದ್ದಾರೆ. ಅಭಿಮಾನಿಗಳು ಬೇರೆಯವರ ಹೆಸರು ಕೂಗುವುದನ್ನು ನೋಡಿದ್ದೆ. ಆದರೆ ಮೊದಲ ಸಿನಿಮಾದಲ್ಲೇ ನನ್ನ ಪಾತ್ರದ ಹೆಸರು ಕೂಗಿದಾಗ ಸಿಕ್ಕ ಖುಷಿ ವರ್ಣಿಸಲು ಅಸಾಧ್ಯ ಎಂದು ಭಾವುಕರಾಗಿದ್ದಾರೆ.
ಮೊದಲ ಸಿನಿಮಾ ಅಂದಾಗ ಕೇವಲ ಗ್ಲಾಮರ್ ಟಚ್ ಇರಬಹುದು ಅಂದುಕೊಂಡಿದ್ದೆ. ಆದರೆ ನಿರ್ದೇಶಕ ಶ್ರೀನಿವಾಸ ರಾಜು ಆರಂಭದಿಂದ ಅಂತ್ಯದವರೆಗೂ ಪರ್ಫಾರ್ಮೆನ್ಸ್‌ಗೆ ಅವಕಾಶ ಇರುವ ವಿಭಿನ್ನ ಪಾತ್ರ ಕೊಟ್ಟರು. ವಿಶೇಷವೆಂದರೆ ಶೂಟಿಂಗ್ ವೇಳೆ ನನಗೂ ಇಡೀ ಸಿನಿಮಾದ ಕಥೆ ಗೊತ್ತಿರಲಿಲ್ಲ, ಕೇವಲ ನನ್ನ ಪಾತ್ರದ ಭಾಗವಷ್ಟೇ ತಿಳಿದಿತ್ತು. ಥಿಯೇಟರ್‌ನಲ್ಲಿ ಸಂಪೂರ್ಣ ಸಿನಿಮಾ ನೋಡಿದಾಗಲೇ ಕಥೆಯ ಟ್ವಿಸ್ಟ್‌ಗಳು ತಿಳಿದು 'ವಾವ್' ಅನ್ನಿಸಿತು ಎಂದು ದೇವಿಕಾ ಹೇಳಿದ್ದಾರೆ. ಚಿತ್ರದ ಮಧ್ಯಂತರದ ನಂತರ ಬರುವ ದೊಡ್ಡ ಟ್ವಿಸ್ಟ್ ಅನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ ಎಂಬ ಸಣ್ಣ ಭಯ ಚಿತ್ರ ತಂಡದಲ್ಲಿತ್ತು. ಆದರೆ ಜನ ಅದನ್ನು ತುಂಬಾ ಪ್ರೀತಿಯಿಂದ ಸ್ವೀಕರಿಸಿರುವುದು ಇಡೀ ತಂಡಕ್ಕೆ ದೊಡ್ಡ ಸಮಾಧಾನ ಮತ್ತು ಖುಷಿ ತಂದಿದೆ ಎಂದಿದ್ದಾರೆ.
ಶ್ರೀನಿವಾಸ್ ರಾಜು ನಿರ್ದೇಶನದ 2026ರ ಕನ್ನಡದ ರೋಮ್ಯಾಂಟಿಕ್ ಮ್ಯೂಸಿಕಲ್ ಡ್ರಾಮಾ ಸಿನಿಮಾವಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್, ದೇವಿಕಾ ಭಟ್, ಮಾಳವಿಕಾ ಶರ್ಮಾ, ಹಿರಿಯ ನಟಿ ಲಕ್ಷ್ಮೀ, ರಂಗಾಯಣ ರಘು, ಸಾಧು ಕೋಕಿಲ, ಅಚ್ಯುತ್ ಕುಮಾರ್ ಮತ್ತು ಅವಿನಾಶ್ ಸೇರಿ ಮೊದಲಾದವರು ಬಣ್ಣ ಹಚ್ಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.