ಜನನಾಯಗನ್ ಬಳಿಕ, ಅದೇ ನಿರ್ಮಾಪಕರ 'KD' ಚಿತ್ರಕ್ಕೂ ಸೆನ್ಸಾರ್ ಕಿರಿಕ್; ನಿಜವಾಗಿ ಏನಾಗ್ತಿದೆ?

Published : Apr 13, 2026, 02:27 PM IST
Jana Nayagan KD Movies

ಸಾರಾಂಶ

ನಿರ್ದೇಶಕ ನಿರ್ಮಾಣ ಸಂಸ್ಥೆ ಹಾಗೂ ಪ್ರಾದೇಶಿಕ ಸೆನ್ಸಾರ್ ಮಂಡಳಿ ಗಮನಕ್ಕೆ ತರದೇ ರಿವೈಸಿಂಗ್ ಕಮಿಟಿಗೆ ಬರೆದ ಮುಂಬೈನ ಸೆಂಟರ್ ಸೆನ್ಸಾರ್ ಬೋರ್ಡ್ ನಡೆ ಈ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಈಗಾಗ್ಲೇ ಕೆಡಿ ಸಿನಿಮಾ ವೀಕ್ಷಿಸಿ ರಕ್ತಪಾತ ಇರೋದ್ರಿಂದ ಚಿತ್ರಕ್ಕೆ ಎ ಸರ್ಫಿಟಿಕೇಟ್ ನೀಡುವುದಾಗಿ ಹೇಳಿದೆ.

ಜನನಾಯಗನ್ ಮಾದರಿಯಲ್ಲೆ ಕೆಡಿ ಚಿತ್ರಕ್ಕೆ ಕಂಟಕ..?

ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ನಟನೆಯ 'ಜನನಾಯಗನ್' (Jana Nayagan) ಸಿನಿಮಾ ಬಳಿಕ, KVN ನಿರ್ಮಾಣ ಸಂಸ್ಥೆಯ ಕನ್ನಡದ, 5 ಭಾಷೆಯ 'ಕೆಡಿ'‌ ಸಿನಿಮಾ ಮೇಲೆ ಸೆನ್ಸಾರ್ ಬೋರ್ಡ್ ಪ್ರಹಾರ ಮಾಡ್ತಿದೆಯಾ? ಹೀಗೊಂದು ಸಂದೇಹ ಮೂಡಲು ಕಾರಣವಾಗ್ತಿದೆ ಸೆನ್ಸಾರ್ ನಡೆ ಎನ್ನಲಾಗುತ್ತಿದೆ. ಕಾರಣ, 'KD' ಸಿನಿಮಾದ ಹಿಂದಿ ವರ್ಷನ್‌ಗೆ ಸಂಕಷ್ಟ ಎದುರಾಗಿದೆ. ಈ ಸಿನಿಮಾದ ಸೆನ್ಸಾರ್ ಮಾಡಲು ಮಂಡಳಿ ಹಿಂದೇಟು ಹಾಕಿದೆ ಎನ್ನಲಾಗ್ತಿದೆ. ಇದೇನು ಕೆವಿಎನ್‌ ಸಂಸ್ಥೆಯ ವಿರುದ್ಧ 'ರಿವೇಂಜ್' ನಡಿತಿದ್ಯಾ ಅಂತ ಹಲವರು ಮಾತನ್ನಾಡಿಕೊಳ್ಳುವಂತೆ ಆಗಿದೆ.

ಕೇಂದ್ರ ಸೆನ್ಸಾರ್ ಬೋರ್ಡ್ ನಿಂದ ನಿಮಯ ಉಲ್ಲಂಘನೆ?

ಹೌದು, ನಿರ್ದೇಶಕ ನಿರ್ಮಾಣ ಸಂಸ್ಥೆ ಹಾಗೂ ಪ್ರಾದೇಶಿಕ ಸೆನ್ಸಾರ್ ಮಂಡಳಿ ಗಮನಕ್ಕೆ ತರದೇ ರಿವೈಸಿಂಗ್ ಕಮಿಟಿಗೆ ಬರೆದ ಮುಂಬೈನ ಸೆಂಟರ್ ಸೆನ್ಸಾರ್ ಬೋರ್ಡ್ ನಡೆ ಈ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಈಗಾಗ್ಲೇ ಕೆಡಿ ಸಿನಿಮಾ ವೀಕ್ಷಿಸಿ ರಕ್ತಪಾತ ಇರೋದ್ರಿಂದ ಚಿತ್ರಕ್ಕೆ ಎ ಸರ್ಫಿಟಿಕೇಟ್ ನೀಡುವುದಾಗಿ ಹೇಳಿದ್ದು, ಹಾಡಿನ ಸಾಹಿತ್ಯ ಎರಡು ಸಾಲು ಬದಲಿಸಲು ಸೂಚನೆ ನೀಡಿತ್ತು. ಆದರೆ, ಇದೀಗ ಮುಂಬೈನಲ್ಲಿ ಕೆಡಿ ಸಿನಿಮಾದ ಹಿಂದಿ ವರ್ಷನ್ ಸಮಸ್ಯೆ ಎದುರಿಸುತ್ತಿದೆ. ಒಂದೇ ಸಿನಿಮಾ ಭಾಷಾವಾರು ಸಮಸ್ಯೆ ಎದುರಿಸುತ್ತಿರೋದಕ್ಕೆ ಕಾರಣವೇನು ಎಂಬ ಪ್ರಶ್ನೆಯನ್ನು ಈ ಸಿನಿಮಾ ಇದೀಗ ಹುಟ್ಟುಹಾಕಿದೆ.

ಕನ್ನಡ ಸಿನಿಮಾಗಳಿಗೆ ಮೇಲೆ ಕೇಂದ್ರ ಸೆನ್ಸಾರ್ ಬೋಡರ್ನಿಂದ ಅನ್ಯಾಯ?

ಆದ್ರೆ, ಇದನ್ನ ಪಾಸ್ ಮಾಡದ ಮುಂಬೈನಲ್ಲಿರುವ ಕೇಂದ್ರ ಸೆನ್ಸಾರ್ ಮಂಡಳಿ.. ಮತ್ತೆ ರಿವೈಸಿಂಗ್ ಕಮಿಟಿಗೆ ಕಳುಹಿಸಿ ಈ ಧೋರಣೆ ತೋರಿದೆ.. ಒಂದೇ ಸಿನಿಮಾಗೆ ಬೇರೆ ಬೇರೆ ಕಡೆ ನಡೆಯುತ್ತಿರುವ ಸೆನ್ಸಾರ್ ಮಂಡಳಿ ಧೋರಣೆ ಇದೀಗ ಚರ್ಚೆಗೆ ಕಾರಣವಾಗುತ್ತಿದೆ. ಮುಂದೇನು ಬೆಳವಣಿಗೆ ನಡೆಯಲಿದೆ ಎಂಬುದನ್ನು ಕಾದು ನೋಡಲಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

1988ರಲ್ಲಿ ಮಿಸ್ ಆದ ಕ್ಷಣವನ್ನು ಸೆರೆ ಹಿಡಿದುಕೊಂಡ ಸುಧಾರಾಣಿ; ಆಮೀರ್ ಖಾನ್ ಜೊತೆ ಫೋಟೋ
ಪೈರಸಿ ವಿರುದ್ಧ ಗರ್ಜಿಸಿದ ‘ಕಾಂತಾರ’ ಸ್ಟಾರ್: ವಿಜಯ್ 'ಜನ ನಾಯಕನ್' ವಿಡಿಯೋ ಲೀಕ್ ಬೆನ್ನಲ್ಲೇ ಕಿಡಿಕಿಡಿಯಾದ ರಿಷಬ್ ಶೆಟ್ಟಿ!