
ಡಾ ರಾಜ್‌ಕುಮಾರ್ (Dr Rajkumar) ಅಭಿನಯದ 'ಭಕ್ತ ಕುಂಬಾರ' ಸಿನಿಮಾ (Bhakta Kumbara) ಸೂಪರ್ ಹಿಟ್ ದಾಖಲಿಸಿತ್ತು. ಈ ಚಿತ್ರದಲ್ಲಿ ಡಾ ರಾಜ್‌ಕುಮಾರ್ ಮನೋಜ್ಞ ಅಭಿನಯ, ಹುಣುಸೂರು ಕೃಷ್ಣಮೂರ್ತಿಯವರ (Hunsur Krishnamurthy) ನಿರ್ದೇಶನ, ಜಿಕೆ ವೆಂಕಟೇಶ್ (GK Venkatesh) ಸಂಗೀತ ನಿರ್ದೇಶನ ಎಲ್ಲವೂ ಅಂದು ಮನೆಮಾತಾಗಿತ್ತು. ಬಾಲಿವುಡ್ ಹಾಗೂ ಟಾಲಿವುಡ್‌ನಲ್ಲಿ ಹೆಸರು ಮಾಡಿರುವ, ಭಾರತದ ಲೆಡಿ ಸೂಪರ್ ಸ್ಟಾರ್ ಖ್ಯಾತಿಯ ನಟಿ ದೇವಿ ಅವರು ಈ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರವು 1974ರಲ್ಲಿ ಬಿಡುಗಡೆ ಆಗಿತ್ತು.
ಆದರೆ, ಈ ಭಕ್ತ ಕುಂಬಾರ ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕ ಹುಣುಸೂರು ಕೃಷ್ಣಮೂರ್ತಿಯವರಿಗೂ ನಾಯಕನಟ ಡಾ ರಾಜ್‌ಕುಮಾರ್ ಅವರಿಗೂ ಮನಸ್ತಾಪ ಆಗಿತ್ತು ಎನ್ನಲಾಗಿತ್ತು. ಆದರೆ, ಈ ಸುದ್ದಿಯ ಸತ್ಯಾಸತ್ಯತೆ ಏನು ಎಂಬುದು ಇತ್ತೀಚಿಗಷ್ಟೇ ರಿವೀಲ್ ಆಗಿದೆ. ಅಂದು ಆ ಬಗ್ಗೆ ಸುದ್ದಿಯಾಗಿತ್ತು. ಆದರೆ, ಅದು ಸತ್ಯವಾದ ಸುದ್ದಿಯೋ ಅಥವಾ ಸುಳ್ಳು ಸುದ್ದಿಯೋ ಎಂಬುದು ತೀರಾ ಇತ್ತೀಚಿನವರೆಗೂ ನಿಗೂಢವಾಗಿಯೇ ಉಳಿದಿತ್ತು. ಆದರೆ, ಇತ್ತೀಚಿನ ತಮ್ಮ ಸಂದರ್ಶನದಲ್ಲಿ ಹಿರಿಯ ನಿರ್ದೇಶಕರಾದ ಭಾರ್ಗವ ಅವರು ಈ ಬಗ್ಗೆ ಮಾತನ್ನಾಡಿದ್ದಾರೆ.
ಅಂದು, ನಿರ್ದೇಶಕ ಹುಣುಸೂರು ಕೃಷ್ಣಮೂರ್ತಿಯವರು ಭಕ್ತ ಕುಂಬಾರ ಶೂಟಿಂಗ್ ಮಾಡಿ ಮುಗಿಸಿದ್ದರು. ಅಂದು ಅವರಿಗೆ ಎಲ್ಲವೂ ಓಕೆ ಆಗಿತ್ತು. ಆದರೆ, ಡಾ ರಾಜ್‌ಕುಮಾರ್ ಅವರಿಗೆ ಇನ್ನೂ ಏನೋ ಬೇಕು ಎನ್ನಿಸುತ್ತಿತ್ತು. ಸಂಗೀತ ನಿರ್ದೇಶಕರಾದ ಜಿಕೆ ವೆಂಕಟೇಶ್ ಅವರು ಹಾಡು ಕೊಟ್ಟಾಗಿತ್ತು. ಹಾಡಿನ ಶೂಟಿಂಗ್ ಅಂದುಕೊಂಡಂತೆ ಎಲ್ಲವೂ ಮುಗಿದಿತ್ತು. ಆದರೆ, ಡಾ ರಾಜ್‌ಕುಮಾರ್ ಅವರಿಗೆ ಆ ಬಗ್ಗೆ ಸಮಾಧಾನ ಇರಲಿಲ್ಲ. ಅವರು ಊಟದ ಬಳಿಕ ಮತ್ತೆ ಸ್ವಲ್ಪ ಶೂಟಿಂಗ್ ಮಾಡುವ ಬಗ್ಗೆ ಉತ್ಸಾಹ ಹೊಂದಿದ್ದರು.
ಕೊನೆಗೆ, ಸಂಗೀತ ನಿರ್ದೇಶಕರಾದ ಜಿಕೆ ವೆಂಕಟೇಶ್ ಅವರು ನಿರ್ದೇಶಕ ಹುಣುಸೂರು ಕೃಷ್ಣಮೂರ್ತಿಯವರ ಬಳಿ ಚರ್ಚಿಸಿ, ಆ ಹಾಡಿನ 'ವಿಠ್ಠಲ ವಿಠ್ಠಲ' ಎಂಬ ಶಬ್ಧವನ್ನೇ ಮತ್ತೆ ಮತ್ತೆ ಸೇರಿಸಿಕೊಂಡು ಹಾಡನ್ನು ಇನ್ನೂ ಸ್ವಲ್ಪ ಬೆಳೆಸಿ, ಅದನ್ನು ಡಾ ರಾಜ್‌ಕುಮಾರ್ ಆಸೆಯಂತೆ ಶೂಟ್ ಮಾಡಲಾಗಿತ್ತು. ಅಲ್ಲಿ ಯಾವುದೇ ಮನಸ್ತಾಪಕ್ಕ ಅವಕಾಶ ಆಗಿರಲಿಲ್ಲ. ಚರ್ಚೆ ನಡೆದು, ಬಳಿಕ ಸಂಗೀತ ನಿರ್ದೇಶಕರು, ನಿರ್ದೇಶಕರು ಹಾಗು ನಟ ಈ ಮೂವರು ಸೇರಿ ಹಳೆಯದನ್ನು ಬದಲಾಯಿಸಿ ಹೊಸದನ್ನು ಕೊಟ್ಟಿದ್ದಾರೆ ಅಷ್ಟೇ.
ಸಿನಿಮಾದಲ್ಲಿ ಇರೋದು ಡಾ ರಾಜ್‌ಕುಮಾರ್ ಇಷ್ಟಪಟ್ಟಂತೆ ಶೂಟಿಂಗ್ ಮಾಡಲಾದ ಹಾಡು ಎಂಬ ಸೀಕ್ರೆಟ್ ಈ ಮೂಲಕ ಇತ್ತೀಚೆಗೆ ಬಹಿರಂಗವಾಗಿದೆ. ಒಟ್ಟಿನಲ್ಲಿ, ಅಂದು ಏನಾಗಿತ್ತು ಎಂಬುದು ಈಗ ಒಂದೊಂದಾಗಿ ಬಹಿರಂಗವಾಗಲು ಕಾರಣ ಇಂದಿನ ಸೋಷಿಯಲ್ ಮೀಡಿಯಾಗಳು. ಯೂಟ್ಯೂಬ್ ಚಾನಲ್‌ಗಳು, ಮಾಧ್ಯಮಗಳು ಹೀಗೆ ಹಲವು ಕಡೆ ಈಗ ಸಂದರ್ಶನಗಳು ಬರುವ ಮೂಲಕ ಹಳೆಯ ಸಂಗತಿಗಳು ಇಂದಿನ ಹೊಸ ಜನರೇಶನ್‌ಗೆ ತಲುಪುತ್ತಿವೆ. 'ಕಾಲಾಯ ತಸ್ಮೈ ನಮಃ' ಎನ್ನಬಹುದು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.