
ಕನ್ನಡದ ನಟ, ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್‌ಕುಮಾರ್ (Shivarajkumar) ಅವರಿಗೆ ಹ್ಯಾಟ್ರಿಕ್ ಹೀರೋ (Hatrick) ಬಿರುದು ಬಂದಿದ್ದು ಎಲ್ಲರಿಗೂ ಗೊತ್ತಿದೆ. ಕನ್ನಡದ ಮೇರು ನಟರಾದ ಡಾ ರಾಜ್‌ಕುಮಾರ್ ಅವರಿಗಾಗಲೀ ಸಾಹಸಸಿಂಹ ವಿಷ್ಣುವರ್ಧನ್ ಅವರಿಗಾಗಲೀ ಈ ಬಿರುದು ಇಲ್ಲ. ಅಷ್ಟೇ ಏಕೆ, ಅವರ ಸಹೋದರ, ರಾಘವೇಂದ್ರ ರಾಜ್‌ಕುಮಾರ್-ಮಾಲಾಶ್ರೀ' ನಟನೆಯ 'ನಂಜುಂಡಿ ಕಲ್ಯಾಣ' ಬರೋಬ್ಬರಿ 90 ವಾರಗಳ ಕಾಲ (630 ದಿನಗಳು) ಪ್ರದರ್ಶನ ಕಂಡಿದ್ದರೂ ಅವರಿಗೂ ಸಿಗಲಿಲ್ಲ ಈ ಪಟ್ಟ. ಆದರೆ, ಶಿವಣ್ಣ ಅವರಿಗೆ ಯಾಕೆ?
ಇಲ್ಲೇ ಇರೋದು ಸೀಕ್ರೆಟ್. ಶಿವರಾಜ್‌ಕುಮಾರ್ ನಟನೆಯ ಮೊಟ್ಟಮೊದಲ ಚಿತ್ರ ಆನಂದ್, ಎರಡನೆಯ ಚಿತ್ರ ಮನಮೆಚ್ಚಿದ ಹುಡುಗಿ ಹಾಗೂ ಮೂರನೆಯ ಚಿತ್ರ ರಥಸಪ್ತಮಿ ಈ ಮೂರೂ ಚಿತ್ರಗಳೂ 25 ವಾರಗಳ ನಿರಂತರ ಪ್ರದರ್ಶನ ಕಂಡಿತ್ತು. ಈ ಕಾರಣಕ್ಕೆ ನಟ ಶಿವರಾಜ್‌ಕುಮಾರ್ ಅವರಿಗೆ ಹ್ಯಾಟ್ರಿಕ್ ಹೀರೋ ಬಿರುದು ಬಂತು. ಈಗ ಅರ್ಥವಾಗಿರಬಹುದು, ನಿರಂತರ 25 ವಾರಗಳ ಪ್ರದರ್ಶನವನ್ನೂ ಮೊದಲ ಮೂರು ಚಿತ್ರಗಳು ಸಾಧಿಸಿವೆ!
'ನನ್ನ ಪ್ರೀತಿಯ ರಾಮು' ಬೇರೆ ನಟರು ರಿಜೆಕ್ಟ್ ಮಾಡಿದ್ಯಾಕೆ? ದರ್ಶನ್ ಸೂಚಿಸಿದ್ದು ಪುನೀತ್ ಮ್ಯಾನೇಜರ್!
ಆದರೆ, ಕನ್ನಡದ ಬೇರೆ ಯಾವುದೇ ನಟರ ಚಿತ್ರಗಳು ಸತತ ಮೂರು ಚಿತ್ರಗಳು ಸತತ 25 ವಾರಗಳ ಪ್ರದರ್ಶನ ಕಂಡಿಲ್ಲ. ಹೀಗಾಗಿ ಬೇರೆಯವರಿಗೆ ಈ ಪಟ್ಟ ದಕ್ಕಿಲ್ಲ. ಡಾ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ನಟಿ ಮಾಲಾಶ್ರೀ ಇವರ ಚಿತ್ರಗಳೆಲ್ಲವೂ 25 ವಾರಗಳಿಗಿಂತ ಹೆಚ್ಚು ಪ್ರದರ್ಶನ ಕಂಡಿದ್ದರೂ ಸತತ ಮೂರು ಚಿತ್ರಗಳು ಹಾಗೆ ಬಂದಿಲ್ಲ. ಸೋ, ಕನ್ನಡಕ್ಕೊಬ್ಬರೇ ಹ್ಯಾಟ್ರಿಕ್ ಹೀರೋ' ಆಗಿ ನಟ ಶಿವರಾಜ್‌ಕುಮಾರ್ ಇಂದಿಗೂ ಉಳಿದುಬಿಟ್ಟಿದ್ದಾರೆ.
ನಟ ಶಿವಣ್ಣರ ಇತ್ತೀಚಿನ ಚಿತ್ರ ಭೈರತಿ ರಣಗಲ್ ಕೂಡ ಸಕ್ಸಸ್ ಕಂಡಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಟ ಶಿವಣ್ಣ ಅವರು ಅಮೆರಿಕಾದಲ್ಲಿ ಕ್ಯಾನ್ಸರ್ ಸರ್ಜರಿ ಹಾಗೂ ಚಿಕತ್ಸೆಯನ್ನು ಪಡೆದು, ಈಗ ಆರೋಗ್ಯಕ್ಕೆ ಮರಳುತ್ತಿದ್ದಾರೆ. ಸದ್ಯ ವಿಶ್ರಾಂತಿಯಲ್ಲಿರುವ ನಟ ಶಿವಣ್ಣ ಅವರು ಕೆಲವು ಕಾಲಗಳ ಬಳಿಕ ಮತ್ತೆ ಸಿನಿಮಾ ಶೂಟಿಂಗ್ ಮುಂದುವರಿಸಲಿದ್ದಾರೆ. ಒಟ್ಟಿನಲ್ಲಿ, ನಟ ಶಿವಣ್ಣ ಅವರು ಅನಾರೋಗ್ಯಕ್ಕೆ ಒಳಗಾಗಿ ಮತ್ತೆ ಆರೋಗ್ಯದ ಕಡೆ ಮರಳುತ್ತಿದ್ದಾರೆ.
ಹುಟ್ಟುಹಬ್ಬದ ದಿನ 6 ಹೊಸ ಸಿನಿಮಾ ಘೋಷಣೆ, ದರ್ಶನ್ 'ಡೆವಿಲ್' ಟೀಸರ್ ಅಬ್ಬರ ಶುರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.