ಕಿಚ್ಚ ಸುದೀಪ್ ಅವರು ತಮ್ಮ ಸಿನಿಮಾಗಳಿಗೆ ನೀಡುವ ಶ್ರದ್ಧೆ ಮತ್ತು ಪರಿಶ್ರಮಕ್ಕೆ ಹೆಸರುವಾಸಿ. ಬಿಲ್ಲ ರಂಗ ಭಾಷ ಸಿನಿಮಾಗಾಗಿ ಅವರು ತಮ್ಮ ದೇಹದಾರ್ಢ್ಯವನ್ನು ಹೇಗೆ ರೂಪಿಸಿಕೊಂಡಿದ್ದಾರೆ ಎಂಬುದನ್ನು ಇತ್ತೀಚಿನ ಫೋಟೋಗಳು ಬಹಿರಂಗಪಡಿಸಿವೆ. ಇದು ಅವರ ಅಭಿಮಾನಿಗಳಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ.
ಕಿಚ್ಚ ಸುದೀಪ್ ಮೊದಲಿಂದಲೂ ತನ್ನ ಡೆಡಿಕೇಶನ್‌ಗೆ ಹೆಸರುವಾಸಿ. ಒಂದು ಪಾತ್ರವನ್ನು ಒಪ್ಪಿಕೊಂಡರೆ ಅವರು ಅದಕ್ಕಾಗಿ ಹಗಲಿರುಳೂ ಬೆವರು ಸುರಿಸುತ್ತಾರೆ. ಬಹಳ ಕಷ್ಟಪಡುತ್ತಾರೆ. ಸುದೀಪ್ ಡೆಡಿಕೇಶನ್ ಯಾವ ರೀತಿ ಇರುತ್ತೆ ಅಂತ ಕೆಲ ಸಮಯದ ಹಿಂದೆ ನಟಿ ಸಂಯುಕ್ತಾ ಹೊರನಾಡು ವಿವರಿಸಿದ್ದರು. ಸೆಟ್‌ನಲ್ಲಿ ಅವರ ಇನ್‌ವಾಲ್ವ್‌ಮೆಂಟ್ ಯಾವ ರೇಂಜ್‌ನದು ಅಂದರೆ ಅಂಥಾ ಸ್ಟಾರ್ ನಟನಾಗಿದ್ದರೂ ಫೈಟರ್‌ಗಳಿಗೆಲ್ಲ ಮೇಕಪ್ ಮಾಡ್ತಿದ್ರಂತೆ. ಪ್ರತೀ ಕಲಾವಿದರ ಜೊತೆ ಮಾತ್ರ ಅಲ್ಲ, ಪ್ರತಿಯೊಬ್ಬ ತಂತ್ರಜ್ಞನ ಜೊತೆಗೂ ಕನೆಕ್ಟ್ ಆಗುತ್ತಿದ್ದರು. ಶೂಟಿಂಗ್ ಸೆಟ್‌ನಿಂದ ಎಡಿಟಿಂಗ್ ಟೇಬಲ್‌ವರೆಗೂ ಎಲ್ಲ ಕಡೆ ಆಕ್ಟಿವ್ ಆಗಿರುತ್ತಿದ್ದ ಸುದೀಪ್ ಈ ಮೂಲಕ ಅನೇಕರಿಗೆ ಸ್ಫೂರ್ತಿಯೂ ಆಗಿದ್ರು. ಸುದೀಪ್ ತನ್ಮಯತೆ ಬಗ್ಗೆ ಅಭಿಮಾನದಿಂದ ಮಾತನಾಡಿದ ಸಂಯುಕ್ತಾನೇ ಇವರಿಂದ ಸ್ಫೂರ್ತಿ ಪಡೆದಿದ್ದರು.
ಸರಿ, ಸುದೀಪ್ ಮುಂದಿನ ಸಿನಿಮಾ 'ಬಿಲ್ಲ ರಂಗ ಭಾಷ' ಗೆಟ್ ಸೆಟ್ ರೆಡಿ ಅನ್ನೋದಕ್ಕೆ ಎಲ್ಲ ಬಗೆಯಿಂದಲೂ ತಯಾರಾಗ್ತಿದೆ. ಇತ್ತ ಈ ಸಿನಿಮಾದ ನಾಯಕ ಸುದೀಪ್ ಇದರ ಜೊತೆಗೆ ಕೈ ಜೋಡಿಸಿದ್ದಾರೆ. ಈ ಸಿನಿಮಾಕ್ಕೆ ತನ್ನ ತಯಾರಿ ಯಾವ ರೀತಿ ಸಾಗ್ತಾ ಇದೆ ಅನ್ನೋದನ್ನು ಫೋಟೋ ಶೂಟ್ ಮೂಲಕ ತೋರಿಸಿದ್ದಾರೆ.
undefined
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಸ್ಟಾರ್ ನಟ ಸುದೀಪ್. ಕೇವಲ ಮಾಸ್ ಸಿನಿಮಾಗಳ ಹಿಂದೆ ಬೀಳದೆ ಅಭಿನಯಕ್ಕೆ ಒತ್ತು ನೀಡುವ ಪಾತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸ್ಟಾರ್ ನಟರು ಒಂದು ಹಂತ ದಾಟಿದ ಬಳಿಕ ಕೇವಲ ತಮ್ಮ ಮ್ಯಾನರಿಸಂ, ಡೈಲಾಗ್, ಫೈಟ್ಗಳ ಮೂಲಕವೇ ಸಿನಿಮಾ ಹಿಟ್ ಮಾಡಿಕೊಳ್ಳುತ್ತೇವೆ ಎಂಬ ಹಮ್ಮಿನಲ್ಲಿರುತ್ತಾರೆ. ಕೆಲವು ಸ್ಟಾರ್ ನಟರು ಇಂದಿಗೂ ಇದನ್ನೇ ಪಾಲಿಸಿಕೊಂಡು ಬರುತ್ತಿದ್ದಾರೆ. ಆದರೆ ಸುದೀಪ್ ಸ್ಟಾರ್ ನಟರಾಗಿದ್ದರೂ, ದೊಡ್ಡ ಅಭಿಮಾನಿ ಬಳಗ ಹೊಂದಿದ್ದಿದ್ದರೂ ಸಹ ಈಗಲೂ ಸಿನಿಮಾಕ್ಕಾಗಿ ಪೂರ್ಣ ಪರಿಶ್ರಮ ಹಾಕುತ್ತಾರೆ. ಪಾತ್ರಕ್ಕಾಗಿ ಕಠಿಣ ತರಬೇತಿ ತೆಗೆದುಕೊಂಡು ತಯಾರಾಗುತ್ತಿದ್ದಾರೆ. ಸದ್ಯ ಬಿಲ್ಲ ರಂಗ ಭಾಷ ಸರದಿ.
ಬೈರಾದೇವಿ ಸಿನಿಮಾ ನೋಡ್ತಿದ್ದ ಮಹಿಳೆ ಮೈಮೇಲೆ ಆವೇಶ, ರಾಧಿಕಾ ಕಾಳಿಮಾತೆ ಅವತಾರಕ್ಕೆ ಬೆರಗಾದ ಸ್ಯಾಂಡಲ್‌ವುಡ್!
ಸದ್ಯ ಸುದೀಪ್ ಬಿಗ್‌ಬಾಸ್‌ನಲ್ಲಿ ಬ್ಯುಸಿ. ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಅನ್ನು ಅಂದಿನಿಂದ ಇಂದಿನವರೆಗೂ ಸುದೀಪ್ ಒಬ್ಬರೇ ನಡೆಸಿಕೊಂಡು ಬಂದಿರೋದು ವಿಶೇಷ. ಈ ಬಾರಿ ಅವರು ಹೋಸ್ಟ್ ಆಗಿ ಇರ್ತಾರ ಇಲ್ವಾ ಅಂತ ಸುದ್ದಿ ಹರಿಬಿಡಲಾಗಿತ್ತು. ಕಡೆಗೂ ಸುದೀಪ್ ಇಲ್ಲದೇ ಬಿಗ್‌ಬಾಸ್ ಇಲ್ಲ ಅನ್ನೋ ಟ್ಯಾಗ್‌ಲೈನ್‌ನೊಂದಿಗೆ ಸುದೀಪ್ ಸ್ವರ್ಗ, ನರಕಗಳ ನಡುವೆ ಸೂಪರ್‌ಮ್ಯಾನ್‌ನಂತೆ ನಿಂತುಬಿಟ್ಟರು. ಸದ್ಯ ಬಿಗ್‌ಬಾಸ್ ವೀಕ್ಷಿಸುವ ಹೆಚ್ಚಿನವರು ಅವರಿಗಾಗಿ ಈ ರಿಯಾಲಿಟಿ ಶೋ ನೋಡ್ತಿದ್ದಾರೆ. ಇದೆಲ್ಲದರ ನಡುವೆ ಸುದೀಪ್ ರಾತ್ರಿ ಹಗಲು ಕಷ್ಟಪಟ್ಟು ಬಿಲ್ಲರಂಗ ಭಾಷಕ್ಕೆ ರೆಡಿ ಆಗ್ತಿದ್ದಾರೆ.
ಐಎಂಡಿಬಿ 250 ಸಾರ್ವಕಾಲಿಕ ಭಾರತೀಯ ಶ್ರೇಷ್ಠ ಸಿನಿಮಾಗಳಲ್ಲಿ ಕನ್ನಡ ಚಿತ್ರ ಯಾವುದಿದೆ?
ಅನೂಪ್ ಭಂಡಾರಿ ಅವರಿಗೆ ಸುದೀಪ್ ಅವರ ಈ ಡೆಡಿಕೇಶನ್ ಬಗ್ಗೆ ಹೆಮ್ಮೆ ಇದೆ. 'ಬಿಲ್ಲ ರಂಗ ಭಾಷಾ ಸಿನಿಮಾದ ಸುದೀಪ್ ಪಾತ್ರಕ್ಕೆ ಕಟ್ಟುಮಸ್ತಾದ ಬಾಡಿ ಬೇಕು. ಅದಕ್ಕೆ ಸುದೀಪ್ ಎಲ್ಲ ರೀತಿಯಿಂದ ರೆಡಿ ಆಗ್ತಿದ್ದಾರೆ' ಎಂದಿದ್ದಾರೆ. ಅದಕ್ಕೆ ಸರಿಯಾಗಿ ಇದೀಗ ಸುದೀಪ್ ರಿಸಲ್ಟ್ ತೋರಿಸಿದ್ದಾರೆ. ತಾನು ಬಾಡಿ ಬಿಲ್ಟ್ ಮಾಡಿರೋ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಆಲ್‌ಮೋಸ್ಟ್ ರೆಡಿ ಆಗಿದ್ದೀನಿ ಅನ್ನೋ ಮಾತನ್ನು ಹೇಳಿದ್ದಾರೆ. ಇದು ಸುದೀಪ್ ಫ್ಯಾನ್ಸ್‌ಗೆ ಸಖತ್ ಖುಷಿ ಕೊಟ್ಟಿದೆ.