Happy Birthday Dhananjay; ಮದುವೆ ಯಾವಾಗ? ಡಾಲಿಗೆ ವಿಶ್ ಮಾಡಿದ ಅಮೃತಾಗೆ ನೆಟ್ಟಿಗರ ಪ್ರಶ್ನೆ

Published : Aug 23, 2022, 12:42 PM IST
Happy Birthday Dhananjay; ಮದುವೆ ಯಾವಾಗ? ಡಾಲಿಗೆ ವಿಶ್ ಮಾಡಿದ ಅಮೃತಾಗೆ ನೆಟ್ಟಿಗರ ಪ್ರಶ್ನೆ

ಸಾರಾಂಶ

ಸ್ಯಾಂಡಲ್ ವುಡ್ ಡಾಲಿ ಖ್ಯಾತಿಯ ಧನಂಜಯ್ ಅವರಿಗೆ ಇಂದು (ಆಗಸ್ಟ್ 23) ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಧನಂಜಯ್ ಫೋಟೋ, ವಿಡಿಯೋ ಶೇರ್ ಮಾಡಿ ಅಭಿಮಾನಿಗಳು ಪ್ರೀತಿಯ ವಿಶ್ ಮಾಡುತ್ತಿದ್ದಾರೆ. 

ಸ್ಯಾಂಡಲ್ ವುಡ್ ಡಾಲಿ ಖ್ಯಾತಿಯ ಧನಂಜಯ್ ಅವರಿಗೆ ಇಂದು (ಆಗಸ್ಟ್ 23) ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಧನಂಜಯ್ ಫೋಟೋ, ವಿಡಿಯೋ ಶೇರ್ ಮಾಡಿ ಅಭಿಮಾನಿಗಳು ಪ್ರೀತಿಯ ವಿಶ್ ಮಾಡುತ್ತಿದ್ದಾರೆ. ಪ್ರತಿವರ್ಷ ಧನಂಜಯ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಅಭಿಮಾನಿಗಳ ಮಧ್ಯೆ ಆಚರಿಸಿಕೊಳ್ಳುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಧನಂಜಯ್ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಆದರೆ ಈ ಬಾರಿ ಕೂಡ ಜನ್ಮದಿನ ಸಂಭ್ರಮಿಸಲ್ಲ ಎಂದು ಹೇಳಿದ್ದಾರೆ. ಆದರೂ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುತ್ತಿದ್ದಾರೆ. 

ಅಮೃತಾ ಅಯ್ಯಂಗರ್ ಪ್ರೀತಿಯ ವಿಶ್ 

ಅಂದಹಾಗೆ ಧನಂಜಯ್ 36ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅನೇಕರು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. ನಟಿ ಅಮೃತಾ ಅಯ್ಯಂಗಾರ್ ಕೂಡ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿದ್ದಾರೆ. ಧನಂಜಯ್ ಜೊತೆಗಿನ ಸುಂದರ ಫೋಟೋ ಶೇರ್ ಮಾಡಿ ಶುಭಾಶಯ ತಿಳಿಸಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ಧನು' ಎಂದು ಹೇಳಿದ್ದಾರೆ. ಅಂದಹಾಗೆ ಧನಂಜಯ್ ಮತ್ತು ಅಮೃತಾ ನಡುವೆ ಸಾಕಷ್ಟು ಗಾಸಿಪ್‌ಗಳು ಸಹ ಹರಿದಾಡುತ್ತಿವೆ. ಈ ನಡುವೆ ಪ್ರೀತಿಯ ವಿಶ್ ಮಾಡಿರುವುದು ಹರಿದಾಡುತ್ತಿದ್ದ ಸುದ್ದಗೆ ಮತ್ತಷ್ಟು ಪುಷ್ಟಿ ನೀಡಿದಂತೆ ಆಗಿದೆ. ಅಮೃತಾ ವಿಶ್‌ಗೆ ಅಭಿಮಾನಿಗಳು, 'ಯಾವಾಗ ಮದುವೆಯಾಗುತ್ತೀರಿ', 'ನೀವು ಯಾಕೆ ಒಟ್ಟಿಗೆ ಜೀವನ ಮಾಡಬಾರದು', 'ಇಬ್ಬರ ಜೋಡಿ ತುಂಬಾ ಚೆನ್ನಾಗಿದೆ' ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

ಸ್ಯಾಂಡಲ್ ವುಡ್ ನಲ್ಲಿ ಸಖತ್ ಬ್ಯುಸಿ ಇರುವ ನಟ ಧನಂಜಯ್. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಟ ಧನಂಜಯ್ ‘ಜಯನಗರ 4th ಬ್ಲಾಕ್’ ಎನ್ನುವ ಕಿರುಚಿತ್ರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ‘ಡೈರೆಕ್ಟರ್ಸ್ ಸ್ಪೆಷಲ್’ ಸಿನಿಮಾ ಮೂಲಕ ಧನಂಜಯ್ ಬೆಳ್ಳಿ ಪರದೆ ಮೇಲೆ ಮೊದಲ ಬಾರಿಗೆ ಮಿಂಚಿದರು. ನಂತರ ಡಾಲಿ ಹಲವು ಚಿತ್ರಗಳಲ್ಲಿ ನಟಿಸಿದರು. ಆದರೆ ಕೇಳಿಕೊಳ್ಳುವಷ್ಟು ಸಕ್ಸಸ್ ಧನಂಜಯ್ ಅವರಿಗೆ ಸಿಕ್ಕಿರಲಿಲ್ಲ. ಟಗರು ಸಿನಿಮಾ ಧನಂಜಯ್ ಸಿನಿ ಜೀವನಕ್ಕೆ ದೊಡ್ಡ ಬ್ರೇಕ್ ತಂದುಕೊಟ್ಟಿತು.

2018ರಲ್ಲಿ ರಿಲೀಸ್ ಆದ ಟಗರು ಸಿನಿಮಾದಲ್ಲಿ ಧನಂಜಯ್ ಡಾಲಿ ಪಾತ್ರದಲ್ಲಿ ಮಿಂಚಿದರು. ಈ ಸಿನಿಮಾ ಬಳಿಕ ಧನಂಜಯ್ ವೃತ್ತಿ ಜೀವನವೇ ಬದಲಾಯಿತು. ಡಾಲಿ ಆಗಿಯೇ ಖ್ಯಾತಿಗಳಿಸಿದರು. ವಿಲನ್, ಹೀರೋ ಹೀಗೆ ಯಾವುದೇ ಪಾತ್ರ ಕೊಟ್ಟರು ಲೀಲಾಜಾಲವಾಗಿ ನಟಿಸುವ ಸ್ಟಾರ್ ಧನಂಜಯ್ ಕನ್ನಡ ಸಿನಿರಸಿಕರ ಮನ ಗೆದ್ದಿದ್ದಾರೆ. ಟಗರು ಬಳಿಕ ಧನಂಜಯ್ ತಮಿಳು ಮತ್ತು ತೆಲುಗಿನಲ್ಲೂ ಮಿಂಚಿದ್ದರು. ಸದ್ಯ ಧನಂಜಯ್ ಬಳಿ ಸಾಲು ಸಾಲು ಸಿನಿಮಾಗಳಿವೆ. ಕೊನೆಯದಾಗಿ ಧನಂಜಯ್ ಭೈರಾಗಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಶಿವರಾಜ್ ಕುಮಾರ್ ನಟನೆಯಈ ಸಿನಿಮಾದಲ್ಲಿ ಧನಂಜಯ್  ಕರ್ಣ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಮಾನ್ಸೂನ್ ರಾಗದಲ್ಲಿ ಮಿಂದ್ದೆದ್ದ ಡಾಲಿ-ರಚ್ಚು: ಡಿಂಪಲ್ ಕ್ವೀನ್ ಜೊತೆ ಧನಂಜಯ್ ಡಾನ್ಸ್

ಸದ್ಯ ಧನಂಜಯ್ ಬಳಿ ತೋತಾಪುರಿ, ಹೆಡ್ ಬುಷ್, ಮಾನ್ಸೂನ್ ರಾಗ, ಜಮಾಲಿಗುಡ್ಡ, ಹೊಯ್ಸಳ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ತಮಿಳಿನ ಪಾಯುಮ್ ಅಲಿ ನಿ ಎನಕ್ಕು ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಧನಂಜಯ್ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಧನಂಜಯ್‌ ನಿಜಕ್ಕೂ ನಟ ರಾಕ್ಷಸ: ರಚಿತಾರಾಮ್‌

ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದ ಧನಂಜಯ್  

ಪುನೀತ್ ರಾಜ್​ಕುಮಾರ್ ನಿಧನ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಧನಂಜಯ್ ಹೇಳಿದ್ದಾರೆ. ‘ಬರ್ತ್​ಡೇಗೂ ಮೊದಲೇ ಸೆಲೆಬ್ರೇಷನ್ ಆರಂಭಿಸುತ್ತೀರಿ. ಬೇರೆಬೇರೆ ಕಡೆ ನನ್ನ ಹೆಸರಲ್ಲಿ ಸಾಮಾಜಿಕ ಕೆಲಸ ಮಾಡುತ್ತಿದ್ದೀರಿ. ಕಳೆದ ಎರಡು ವರ್ಷಗಳಿಂದ ಕೊವಿಡ್ ಕಾರಣಕ್ಕೆ ಬರ್ತ್​​ಡೇ ಆಚರಣೆ ಸಾಧ್ಯವಾಗಿಲ್ಲ. ಈ ವರ್ಷವೂ ಬರ್ತ್​​ಡೇ ಆಚರಿಸಿಕೊಳ್ಳುವ ಸ್ಥಿತಿಯಲ್ಲಿ ನಾನು ಇಲ್ಲ. ಅಪ್ಪು ಅಗಲಿ ಒಂದು ವರ್ಷವೂ ಆಗಿಲ್ಲ. ಶಿವಣ್ಣ ಕೂಡ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಈ ವರ್ಷವೂ ಆಚರಿಸಲು ಆಗುತ್ತಿಲ್ಲ, ದಯವಿಟ್ಟು ಕ್ಷಮಿಸಿಬಿಡಿ. ಒಳ್ಳೆಯ ಕೆಲಸಗಳ ಮೂಲಕ ನನ್ನ ಹುಟ್ಟುಹಬ್ಬ ಆಚರಿಸಿ. ಎಲ್ಲಿ ಇದ್ದೀರೋ ಅಲ್ಲಿಂದಲೇ ಹರಿಸಿ. ನನ್ನ ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ದುಡ್ಡನ್ನು ಒಳ್ಳೆಯ ಕೆಲಸಕ್ಕೆ ಬಳಸಿ’ ಎಂದು  ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ