ಮತ್ತೆ ಒಂದಾದ ಗಣೇಶ್-ಪೂಜಾಗಾಂಧಿ: 'ಮುಂಗಾರು ಮಳೆಯಲ್ಲಿ' ಕಣ್ಣೀರು ಹಾಕಿಲ್ಲ ಯಾಕೆ?

Published : Jan 30, 2025, 06:26 PM ISTUpdated : Jan 30, 2025, 07:49 PM IST
ಮತ್ತೆ ಒಂದಾದ ಗಣೇಶ್-ಪೂಜಾಗಾಂಧಿ: 'ಮುಂಗಾರು ಮಳೆಯಲ್ಲಿ' ಕಣ್ಣೀರು ಹಾಕಿಲ್ಲ ಯಾಕೆ?

ಸಾರಾಂಶ

ವಿನಯ್ ರಾಜ್‌ಕುಮಾರ್ ಮತ್ತು ಅದಿತಿ ಪ್ರಭುದೇವ ಅಭಿನಯದ "ಅಂದೊಂದಿತ್ತು ಕಾಲ" ಚಿತ್ರದ "ಮುಂಗಾರು ಮಳೆಯಲ್ಲಿ" ಹಾಡನ್ನು ಗಣೇಶ್ ಮತ್ತು ಪೂಜಾ ಗಾಂಧಿ ಬಿಡುಗಡೆ ಮಾಡಿದ್ದಾರೆ. ಸಿದ್ ಶ್ರೀರಾಮ್ ಹಾಡಿರುವ ಈ ಹಾಡಿಗೆ ರಾಘವೇಂದ್ರ ಸಂಗೀತ ನೀಡಿದ್ದಾರೆ. "ಮುಂಗಾರು ಮಳೆ"ಯಂತೆ ಈ ಚಿತ್ರವೂ ಯಶಸ್ವಿಯಾಗಲಿ ಎಂದು ಗಣೇಶ್ ಮತ್ತು ಪೂಜಾ ಶುಭ ಹಾರೈಸಿದ್ದಾರೆ.

ಯೋಗರಾಜ್‌ ಭಟ್ (Yogaraj Bhat) ನಿರ್ದೇಶನದಲ್ಲಿ 2006ರಲ್ಲಿ ಬಂದ  ಮುಂಗಾರು ಮಳೆಯನ್ನು (Mungaru Male) ಯಾರು ಮರೆಯಲು ಸಾಧ್ಯ? ಗೋಲ್ಡನ್‌ ಸ್ಟಾರ್ ಗಣೇಶ್ (Golden Star Ganesh) ಹಾಗೂ ಪೂಜಾ ಗಾಂಧಿ (Pooja Gandhi) ಅಭಿನಯದ 'ಮುಂಗಾರು ಮಳೆ' ಚಿತ್ರದ ಹಾಡುಗಳೂ ಸೂಪರ್ ಹಿಟ್, ಚಿತ್ರವೂ ಸೂಪರ್ ಹಿಟ್. ಇದೀಗ ಮತ್ತೆ ಅದೇ ಜೋಡಿ ಒಂದಾಗಿದ್ದಾರೆ, ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಅರೇ, ಇದೇನು? ಮತ್ತೆ ಯೋಗರಾಜ್‌ ಭಟ್ಟರು ಸಿನಿಮಾ ಮಾಡ್ತಿದಾರಾ? ಗಣೇಶ್-ಪೂಜಾ ಗಾಂಧಿ ನಾಯಕ-ನಾಯಕಿ ಆಗಿ ನಟಿಸ್ತಾರಾ? ಸ್ವಲ್ಪ ತಾಳಿ.. 

ಇದೀಗ 2005ರಲ್ಲಿ ಒಂದು ಚಿತ್ರ ತೆರೆಗೆ ಬರಲಿದೆ. 2006ರ 'ಮುಂಗಾರು ಮಳೆ'ಯಂತೆ 2025ರಲ್ಲಿ 'ಅಂದೊಂದಿತ್ತು ಕಾಲ' ಚಿತ್ರ ಆಗಲಿದೆ ಎನ್ನಲಾಗುತ್ತಿದೆ. ಅದಕ್ಕೆ ಸಾಕ್ಷಿ ಅಂದೊಂದಿತ್ತು ಕಾಲ (Andondittu Kaala) ಚಿತ್ರದ ಮುಂಗಾರು ಮಳೆಯಲ್ಲಿ ಹಾಡು... ವಿನಯ್ ರಾಜ್ ಕುಮಾರ್ ಅದಿತಿ ಪ್ರಭುದೇವ ಜೋಡಿಯ ಈ ಹಾಡನ್ನ ಇತ್ತೀಚೆಗಷ್ಟೇ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪೂಜಾಗಾಂಧಿ ರಿಲೀಸ್ ಮಾಡಿ ಕೊಂಡಾಡಿದ್ದಾರೆ.. 

ಅಣ್ಣಾವ್ರು ಅವುಚಿಕೊಂಡ್ಬಿಟ್ರು, ನಂಗೆ ಉಸಿರಾಡೋಕೂ ಆಗ್ಲಿಲ್ಲ: ನಿರ್ಮಾಪಕ ರೆಹಮಾನ್!

ಸಿದ್ಧ್‌ ಶ್ರೀರಾಮ್ ಹಾಡಿರೋ ಈ ಹಾಡಿಗೆ ರಾಘವೇಂದ್ರ ಸಂಗೀತ, ಧನಂಜಯ ರಂಜನ್ ಸಾಹಿತ್ಯವಿದೆ. ಕೇಳೋದಕ್ಕೆ ಇಂಪು ನೋಡದಕ್ಕೂ ತಂಪು ಅನ್ನಿಸೋ ಈ ನವಿರಾದ ಮೆಲೋಡಿ ಹಾಡು ಸುಧೀರ್ಘ ಕಾಲ ಕೇಳುವ, ನೋಡುವ ಹಾಗಿದೆ..

ಅಂದೊಂದಿತ್ತು ಕಾಲ ಚಿತ್ರವನ್ನು ಭುವನ್ ಮೂವೀಸ್ ಬ್ಯಾನರ್ ಅಡಿಯಲ್ಲಿ, ಭುವನ್ ಸುರೇಶ್ ನಿರ್ಮಾಣ ಮಾಡಿದ್ದಾರೆ. ಕೀರ್ತಿ ಕುಚೇಲ ನಿರ್ದೇಶನ ಮಾಡಿರೋ ಅಂದೊಂದಿತ್ತು ಕಾಲ ಚಿತ್ರಕ್ಕೆ ರಾಘವೇಂದ್ರ ವಿ ಸಂಗೀತ, ಅಭಿಷೇಕ್ ಕಾಸರಗೋಡು ಛಾಯಾಗ್ರಹಣ, ಎ ಆರ್ ಕೃಷ್ಣ ಮತ್ತು ಸುರೇಶ್ ಆರ್ಮುಗಂ ಸಂಕಲನವಿದೆ,‌ ತಾರಾಗಣದಲ್ಲಿ ವಿನಯ್ ರಾಜಕುಮಾರ್, ಅದಿತಿ ಪ್ರಭುದೇವ, ನಿಶಾ ರವಿ ಕೃಷ್ಣನ್,ಜಗ್ಗಪ್ಪ, ಗೋವಿಂದೇ ಗೌಡ,ಇನ್ನೂ ಮುಂತಾದವರು ಇದ್ದಾರೆ.

ಹಾಡು ಬಿಡುಗಡೆ ಮಾಡಿದ ನಟ ಗಣೇಶ್ 'ವಿನಯ್ ರಾಜಕುಮಾರ್ ಅವ್ರ ಅಂದೊಂದಿತ್ತು ಕಾಲ ಚಿತ್ರದ ಮುಂಗಾರು ಮಳೆಯಲಿ ಹಾಡು ಸಖತ್ ಆಗಿದೆ, ಟೇಕ್ ಆಫ್ ಬ್ರಿಲಿಯಂಟ್, ಇತ್ತೀಚಿಗೆ ಕನ್ನಡದಲ್ಲಿ ಬಹಳಷ್ಟು ಅದ್ಭುತವಾದ ಹಾಡುಗಳು ಬರ್ತಾ ಇವೆ, ತುಂಬಾ ಹಾಡುಗಳನ್ನ ಕೇಳಿದ್ದೇನೆ, ಆದ್ರೆ ಅಂದೊಂದಿತ್ತು ಕಾಲ ಚಿತ್ರದ ಈ ಹಾಡು ತುಂಬಾ ಒಳ್ಳೆಯ ಹಾಡು ಅನ್ನೋದು ನನ್ನ ಅನಿಸಿಕೆ.. 

ಅವ್ರಪ್ಪ ಬಂದ್ರೂ ಸಂವಿಧಾನ ಬದಲಿಸೋಕಾಗಲ್ಲ, ಗಂಗೆಯಲ್ಲಿ ಮಿಂದ್ರೆ ಪಾಪ ಹೋಗಲ್ಲ: ನಟ ಕಿಶೋರ್

ರಾಘವೇಂದ್ರ ಮಾಡಿರೋ ಮ್ಯೂಸಿಕ್ ಕಂಪೋಸಿಷನ್ ಮಸ್ತ್ ಆಗಿದೆ, ಸಿದ್ ಶ್ರೀರಾಮ್ ಧ್ವನಿ ಕೇಳೋದಕ್ಕೆ ಇಂಪಾಗಿದೆ, ಸುರೇಶ್ ನಿರ್ಮಾಣ ಮಾಡಿರೋ,ಕೀರ್ತಿ ಡೈರೆಕ್ಷನ್ ಚೆನ್ನಾಗ್ ಬಂದಿದೆ ಅನ್ನೋ ತರಹ ಭರವಸೆ ಕಾಣ್ತಾ ಇದೇ. ಮ್ಯೂಸಿಕ್ ಡೈರೆಕ್ಟರ್,ಡೈರೆಕ್ಟರ್ ಹಾಗೂ ಹಾಡಿನ ಸಾಹಿತ್ಯ ಎಲ್ಲವಕ್ಕೂ ತುಂಬಾ ಗಟ್ಟಿಯಾದ ಬಾಂಡಿಂಗ್ ಇರೋದು ನಿಜಾ ಅನ್ಸತ್ತೆ.. ಮುಂಗಾರು ಮಳೆ ನಾವೆಲ್ಲ ಪ್ರೀತಿಯಿಂದ ಮಾಡಿದ ಸಿನ್ಮಾ ಆಗಿತ್ತು.. 

ಅಂದೊಂದಿತ್ತು ಕಾಲ ಚಿತ್ರದಲ್ಲಿನ ನಾನು ನೋಡಿದ ಈ ಮುಂಗಾರು ಮಳೆಯಲಿ ತುಂಬಾನೇ ಇಂಟೆನ್ಸ್ ಆದ ಫ್ರೆಷ್ ಫೀಲ್ ಕೊಡತ್ತೆ, ಹಾಗೆ ಎಲ್ಲರೂ ತುಂಬಾ ಶ್ರಮ ಪಟ್ಟು ಕೆಲ್ಸ ಮಾಡಿರೋ ಹಿಂಟ್ ಕಾಣ್ತಾ ಇದೆ. ಇಂತಹದೊಂದು ಒಳ್ಳೆಯ ಹಾಡು ಬಿಡುಗಡೆ ಮಾಡಿದ್ದಕ್ಕೆ ನನಗೆ ಖುಷಿ ಇದೆ, ಅಂದೊಂದಿತ್ತು ಕಾಲ ಚಿತ್ರದ ಕಂಪ್ಲೀಟ್ ಆಲ್ಬಂ ಹಿಟ್ ಆಗ್ಲಿ ಅಂತಾ ನಾನು ಹಾರೈಸ್ತಿನಿ..' ಎಂದು ಹೇಳಿ ನಟ ವಿನಯ್‌ ರಾಜ್‌ಕುಮಾರ್‌ಗೆ ವಿಶ್ ಮಾಡಿದ್ದಾರೆ. 

ಅಣ್ಣಾವ್ರು ಮನೆಲ್ಲಿ 'ತತ್ತಯ್ಯಾ' ಅಂತಿದ್ರು..; ಅದ್ನ ಅಪ್ಪು ಬಾಯಲ್ಲಿ ಕೇಳಿ, ಎಂಥಾ ಸೊಗಸು!

ಇನ್ನು ಪೂಜಾ ಗಾಂಧಿಯವರು 'ನಾವೆಲ್ಲರೂ ಸಾಮಾನ್ಯವಾಗಿ ಅಂದೊಂದಿತ್ತು ಕಾಲ ಅಂತಾ ಹೇಳ್ತಾನೆ ಇರ್ತೀವಿ, ಹಾಗೆ ನಾನು ಕೂಡಾ 2006 ರಲ್ಲಿ ನಾವು ಮಾಡಿದ್ದ ಮುಂಗಾರು ಮಳೆ ಚಿತ್ರವನ್ನ,ಅದರ ಸಕ್ಸಸ್ ನ್ನ ನೆನಪು ಮಾಡ್ಕೋತಾನೇ ಇರ್ತೀನಿ. ಈಗ ನಮ್ಮ ವಿನಯ್ ರಾಜಕುಮಾರ್ ಮತ್ತು ಅದಿತಿ ಪ್ರಭುದೇವ ಜೊತೆಯಾಗಿ ನಟಿಸಿರೋ ಅಂದೊಂದಿತ್ತು ಕಾಲ ಚಿತ್ರದ ಮುಂಗಾರು ಮಳೆಯಲಿ ಅನ್ನೋ ಹಾಡು ಚೆನ್ನಾಗ್ ಮೂಡಿ ಬಂದಿದೆ..

ಮುಂಗಾರು ಮಳೆ ಚಿತ್ರದ ತರಹವೇ ಮುಂಗಾರು ಮಳೆಯಲಿ ಹಾಡು ಕೂಡಾ ದೊಡ್ಡ ಹಿಟ್ ಆಗ್ಲಿ,ಸಿನ್ಮಾ ಹಿಟ್ ಅಂತಾ ವಿಶ್ ಮಾಡ್ತೀನಿ. ಅಂದೊಂದಿತ್ತು ಕಾಲ ಚಿತ್ರದ 3D ಸೆಟ್ ನಲ್ಲಿ ಮಾಡಿರೋ ಹಾಡು ನೋಡಿದೆ,ರೊಮ್ಯಾಂಟಿಕ್ ಆದ ಹಾಡಲ್ಲಿ ವಿನಯ್ ರಾಜಕುಮಾರ್ ಮತ್ತು ಅದಿತಿ ಪ್ರಭುದೇವ ಇಬ್ಬರು ತುಂಬಾ ಮುದ್ದಾಗಿ ಕಾಣ್ತಾ ಇದಾರೆ.. ಇಂತದೊಂದು ಸುಮಧುರವಾದ ಹಾಡು ನಾನು ಲಾಂಚ್ ಮಾಡಿದ್ದು ಖುಷಿ ಆಯ್ತು, ಅಂದೊಂದಿತ್ತು ಕಾಲ ಸೂಪರ್ ಆಗ್ಲಿ ಅಂತಾ ವಿಶ್ ಮಾಡ್ತೀನಿ' ಎಂದಿದ್ದಾರೆ. 
ಹುಡ್ಗಿ ಹಿಂದೆ ಸುತ್ತಾಡೋ ಹುಡುಗ್ರು ಯಶ್ ಅಂದು ಹೇಳಿದ್ನ ಇಂದೂ ಫಾಲೋ ಮಾಡ್ತಿದಾರಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Fact Check: ಕ್ರಿಕೆಟರ್‌ ತಿಲಕ್‌ ವರ್ಮರನ್ನು ಲವ್‌ ಮಾಡುತ್ತಿದ್ದಾರಾ ಕನ್ನಡದ ಈ ನಟಿ? ಯಾರದು?
Exclu Interview: ಮಗು ಆದ್ಮೇಲೆ ತೂಕ ಇಳಿಸ್ಕೊಂಡು ಮತ್ತೆ ಮೊದಲಿನಂತಾದ Lakshmi Baramma Serial Kavitha Gowda