
‘ಕಿರಿಕ್ ಪಾರ್ಟಿ’, ‘ಬೆಲ್ ಬಾಟಮ್’, ‘ಲವ್ ಇನ್ ಮಂಡ್ಯ’ ಮುಂತಾದ ಸಿನಿಮಾಗಳಲ್ಲಿ ನಟನಾಗಿ ಕಾಣಿಸಿಕೊಂಡಿದ್ದ ಪ್ರತಿಭಾವಂತ ಗಿರಿಕೃಷ್ಣ ಈ ಸಿನಿಮಾದ ನಿರ್ದೇಶಕ. ಕಿರಿಕ್ ಪಾರ್ಟಿ ಸಂದರ್ಭದಲ್ಲೇ ಕತೆ ಪ್ರಸ್ತಾಪ ಮಾಡಿದ್ದ ಗಿರಿಕೃಷ್ಣರಿಗೆ ರಿಷಬ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇದೀಗ ಪೂರ್ಣಪ್ರಮಾಣದ ಸ್ಕಿ್ರಪ್ಟ್ ಜತೆ ರೆಡಿಯಾಗಿದ್ದಾರೆ ಗಿರಿ.
20 ವರ್ಷ ಆಗಿತ್ತು ಹಳ್ಳಿ ಜೀವನ ಅನುಭವಿಸಿ: ರಿಷಬ್ ಶೆಟ್ಟಿ
ಇದೊಂದು ಸಂಪೂರ್ಣ ಕಾಮಿಡಿ ಸಿನಿಮಾ ಆಗಿದ್ದು, ರಿಷಬ್ ಶೆಟ್ಟಿಬ್ಯಾನರ್‌ನಲ್ಲಿಯೇ ನಿರ್ಮಾಣ ಆಗುತ್ತಿದೆ. ಲಾಕ್‌ಡೌನ್ ಮುಗಿದ ತಕ್ಷಣ ಚಿತ್ರೀಕರಣಕ್ಕೆ ಹೊರಡುವ ಆಲೋಚನೆ ಸಿನಿಮಾ ತಂಡದ್ದು. ಹಾಗಾಗಿ ರಿಷಬ್ ನಿರ್ದೇಶನದ ‘ರುದ್ರಪ್ರಯಾಗ’, ಸಮಥ್‌ರ್ ಕಡಕೋಳ ನಿರ್ದೇಶನದ ‘ಆ್ಯಂಟಗನಿ ಶೆಟ್ಟಿ’, ಕರಣ್ ಅನಂತ್ ನಿರ್ದೇಶನದ ಸಿನಿಮಾಗಳು ಸ್ವಲ್ಪ ಹಿಂದಕ್ಕೆ ಹೋಗಲಿವೆ.
ಹರಿಕತೆ ಅಲ್ಲ ಗಿರಿಕತೆಯ ಸಂಗೀತ ನಿರ್ದೇಶನದ ಹೊಣೆ ಅಜನೀಶ್ ಲೋಕನಾಥ್ ಹೊತ್ತುಕೊಂಡಿದ್ದಾರೆ. ಛಾಯಾಗ್ರಹಣದ ಜವಾಬ್ದಾರಿ ತೆಗೆದುಕೊಂಡಿರರುವುದು ಮನೋಜ್ ಜಮದಗ್ನಿ ನಿರ್ದೇಶನದ ಕಿರುಚಿತ್ರ ‘ಪಡುವಾರಳ್ಳಿ’ ಛಾಯಾಗ್ರಹಣ ಮಾಡಿದ್ದ ರಂಗನಾಥ್.
ಹಳ್ಳಿ ತೋಟದಲ್ಲಿ ರಿಷಬ್ ಪುತ್ರ ರಣ್ವಿತ್ ಬರ್ತಡೇ; ಫೋಟೋ ನೋಡಿ.
ರಿಷಬ್‌ರನ್ನು ಮತ್ತೊಮ್ಮೆ ಕಾಮಿಡಿ ಅವತಾರದಲ್ಲಿ ನೋಡಲು ಸಿದ್ಧರಾಗಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.