ಜೈಲಿಂದ ದರ್ಶನ್ ಬಿಡುಗಡೆ ಯಾವಾಗ? ಈ ಬಗ್ಗೆ ಕಾಳಿಕಾ ಮಾತೆ ಉಪಾಸಕರು ಹೇಳಿದ್ದೇನು?

By Shriram Bhat  |  First Published Aug 3, 2024, 1:23 PM IST

ಯಾಕಂದ್ರೆ ಯಾವುದೇ ಒಂದು ಕಷ್ಟ ಅನ್ನೋದು ಮಂಜಿನ ಥರ. ಅದು ಕರಗುತ್ತೆ. ಈಗ ಅವ್ರು ಮಂಜಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಈಗ ಆ ಮಂಜು ಕರಗುವ ತನಕ ಕಾಯಲೇಬೇಕು. ಪ್ರತಿಯೊಬ್ಬರೂ ಕಾಯಲೇಬೇಕು. ಇನ್ನೇನೂ ಮಾಡಲಿಕ್ಕೆ ಸಾಧ್ಯವಿಲ್ಲ...


ಕನ್ನಡದ ಸ್ಟಾರ್ ನಟ ದರ್ಶನ್ ಕೊಲೆ ಕೇಸ್ ಆರೋಪಿಯಾಗಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರೋದು ಗೊತ್ತೇ ಇದೆ. ಚಿತ್ರದುರ್ಗದ ರೇಣುಕಾಸ್ವಾಮಿ ಎನ್ನುವವರು ದರ್ಶನ್ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಕೊಲೆಯಾಗಿದ್ದಾರೆ. ಆ ಆರೋಪದಲ್ಲಿ ನಟ ದರ್ಶನ್ ಸುಮಾರು 40 ದಿನಗಳಿಂದ ಜೈಲಿನಲ್ಲಿ ಇದ್ದಾರೆ. ಇದೀಗ ಈ ಬಗ್ಗೆ, ಕಾಳಿಕಾಮಾತೆ ಉಪಾಸಕರು ಚಂದಾ ಪಾಂಡೆ ಅಮ್ಮಾಜಿ ಅವರು ಏನು ಹೇಳಿದ್ದಾರೆ ನೋಡಿ.. 

'ಈವಾಗ ಅವ್ರು ಬರೋದು ನಿರ್ಧರಿಸಬೇಕಾದವ್ರು ತೀರ್ಪುಗಾರರು, ಯಾರು ಅಂದ್ರೆ ಜಡ್ಜ್‌. ಅಂದ್ರೆ, ಕಾನೂನು ರೀತಿಯ ಹೋರಾಟದಲ್ಲಿ ಬರುವಂಥದ್ದು. ದೇವರ ಕೃಪೆಯಿಂದ ಅವರು ಬಂದರೆ, ಬಂದ ಮೇಲೆ, ಈ ಒಂದು ದುಡುಕು ಸ್ವಭಾವವನ್ನು ಬಿಟ್ಟು, ರಿಯಾಲಿಟಿ ಏನಿದೆ ಅದನ್ನು ಸ್ವೀಕಾರ ಮಾಡಿ, ಶಾಂತತೆಯಲ್ಲಿ ಮುಂದುವರೆದರೆ, ಇದಕ್ಕಿಂತ ಒಳ್ಳೇ ಸ್ಥಾನಮಾನಕ್ಕೆ ಹೋಗಿಯೇ ಹೋಗ್ತಾರೆ. 

Tap to resize

Latest Videos

ವಿಗ್-ಕೂದಲಿಗೂ ಶನಿಗೂ ಸಂಬಂಧ ಇದೆ, ದರ್ಶನ್‌ಗೆ ಎಚ್ಚರಿಸಿದ್ದೆ:ಕಾಳಿಕಾಮಾತೆ ಉಪಾಸಕಿ ಚಂದಾ ಪಾಂಡೆ!

ಯಾಕಂದ್ರೆ ಯಾವುದೇ ಒಂದು ಕಷ್ಟ ಅನ್ನೋದು ಮಂಜಿನ ಥರ. ಅದು ಕರಗುತ್ತೆ. ಈಗ ಅವ್ರು ಮಂಜಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಈಗ ಆ ಮಂಜು ಕರಗುವ ತನಕ ಕಾಯಲೇಬೇಕು. ಪ್ರತಿಯೊಬ್ಬರೂ ಕಾಯಲೇಬೇಕು. ಇನ್ನೇನೂ ಮಾಡಲಿಕ್ಕೆ ಸಾಧ್ಯವಿಲ್ಲ. ಯಾಕಂದ್ರೆ, ಇಲ್ಲಿ ಆಧಾರಗಳು, ಸಾಕ್ಷಿಗಳು ಎಲ್ಲವೂ ಇಲ್ಲಿ ಅವರ ವಿರುದ್ಧವಾಗಿದೆ. ಆದರೆ, ಆತ್ಮಸಾಕ್ಷಿ ಅವ್ರಿಗೆ ಏನು ಹೇಳುತ್ತೆ ಅದ್ರ ಕಡೆ ಅವ್ರು ಗಮನ ಕೊಡ್ಬೇಕು. 

ಹೊರಗಡೆ ಬಂದ್ಮೇಲೆ ಇದನ್ನು ಅವ್ರು ಸ್ವಲ್ಪ ಸುಧಾರಿಸಿಕೊಂಡು ಹೋದಲ್ಲಿ, ಖಂಡಿತ ಚೆನ್ನಾಗಿ ಇರ್ತಾರೆ. ಅದಕ್ಕಿಂತ ಹೆಚ್ಚಾಗಿ ಅವ್ರ ಧರ್ಮ ಪತ್ನಿ, ಅವ್ರ ಮಗ ಒಬ್ನು ಇದಾನೆ, ಅವ್ರಿಗೆ ಒಂದು ಒಳ್ಳೇ ಭವಿಷ್ಯ ಸಿಗೋದ್ರಲ್ಲಿ ಡೌಟ್ ಇಲ್ಲ. ಆ ದರ್ಶನ್ ಮಗು ಬಗ್ಗೆ ಕೂಡ ನಾವೆಲ್ಲರೂ ಯೋಚ್ನೆ ಮಾಡ್ಬೇಕಲ್ಲ, ಅದು ಎಲ್ಲಿ ಹೋಗ್ಬೇಕು..? ಎಲ್ಲೋ ಆ ಮಗು ಹೋದಾಗ, ಸ್ನೇಹಿತರು ಅಥವಾ ಯಾರೋ ಟಾಂಟ್ ಕೊಡೋರು ಇರ್ತಾರೆ, ಆ ಮಗು ಮನಸ್ಥಿತಿ ಏನಾಗ್ಬೇಕು? ಆ ಬಗ್ಗೆನೂ ಯೋಚ್ನೆ ಮಾಡ್ಬೇಕಾಗುತ್ತೆ.. 

ಆ ಕಾಲ್ದಲ್ಲೇ ಹುಟ್ಟಿದ್ರೆ ಶಂಕರ್‌ ನಾಗ್ ಅವ್ರನ್ನೇ ಕೇಳ್ತಿದ್ದೆ: ಸಾಯಿ ಪಲ್ಲವಿ ಯಾಕೆ ಹೀಗ್ ಹೇಳಿದ್ದು?

ಹೋದವ್ರು ಯಾರೂ ವಾಪಸ್ ಬರಲ್ಲ, ಇರೋರು ಚೆನ್ನಾಗಿ ಇರ್ಬೇಕು ಅಂದ್ರೆ, ಇರೋದನ್ನು ನಾವು ಒಪ್ಪಿಕೊಳ್ಳಬೇಕು.. ಯೆಸ್, ಹೀಗೆ ಆಗೋಗಿದೆ, ಮುಂದೆ ಹೀಗೆ ಆಗ್ಬಾರ್ದು.. ಅದಕ್ಕೇನು ಬೇಕೋ ಪ್ಲಾನ್ ಮಾಡ್ಕೋಬೇಕು.. ಇದನ್ನ ತಗೊಳ್ಳೋದು ಕಷ್ಟ ಆಗುತ್ತೆ.. ಆಫ್‌ಕೋರ್ಸ್‌, ನಾವೆಲ್ಲಾ ಎಲ್ಲಾನೂ ತ್ಯಜಿಸಿ ಬಂದಿರೋದ್ರಿಂದ, ನಾವು ಈಸಿಯಾಗಿ ಮಾತಾಡ್ಬಿಡ್ತೀವಿ... 

ಆದ್ರೆ ಅದನ್ನು ಸ್ವೀಕಾರ ಮಾಡೋದಕ್ಕೆ ಕಷ್ಟ ಆಗುತ್ತೆ.. ಬಟ್, ಮಾಡ್ಲೇಬೇಕು, ಸತ್ಯ.. ಬೇರೆ ಇನ್ನೇನೂ ಇಲ್ಲ.. ಅವ್ರು ಹೋಗ್ಬಿಟ್ರು, ಇವ್ರಿಗೆ ಶಿಕ್ಷೆ ಆಗ್ಲೇಬೇಕು ಅಂತ ನಾವು ಹೇಳೋದೂ ತಪ್ಪಾಗುತ್ತೆ.. ಅದನ್ನು ಹೇಳೋಕೆ ನಾವು ಯಾರು? ಮೇಲೊಬ್ಬ ಇದಾನೆ, ಅವ್ನು ಹೇಳ್ಬೇಕು, ಅವ್ನು ಹೇಳೋದನ್ನ ಯಾವ್ ತರ ಹೇಳ್ತಾನೆ, ತೀರ್ಪುಗಾರರ ಮನಸ್ಸಿನ ಮೇಲೆ ಅವ್ನು ಅವ್ ಪ್ರಭಾವವನ್ನು ಬೀರ್ಬೇಕು.. ಆ ಪ್ರಭಾವದ ಜೊತೆಗೆ, ಸಾಕ್ಷಿಗಳು ಏನ್ ಹೇಳ್ತಾವೆ ಅನ್ನೋದನ್ನ ನೋಡ್ಬೇಕು, ತರ್ಕ ಮಾಡ್ಬೇಕು. ಆ ಬಳಿಕ ಅವರು ತೀರ್ಪು ಕೊಡ್ಬೇಕು..' ಎಂದಿದ್ದಾರೆ ಚಂದಾ ಪಾಂಡೆ ಅಮ್ಮಾಜಿ. 

ಟ್ರಾನ್ಸ್‌ಫಾರ್ಮೇಶನ್ ಅಂದ್ರೆ ಇದೇನಾ? ಕಲಾವಿದೆ ಎನಿಸಿಕೊಳ್ಳುವತ್ತ ಹಾಟ್ ನಟಿ ಸನ್ನಿ ಲಿಯೋನ್ ಜರ್ನಿ!

ಒಟ್ಟಿನಲ್ಲಿ, ನಟ ದರ್ಶನ್ ಅವರು ಸದ್ಯ ಕಾರಾಗೃಹದಲ್ಲಿ ಕಾಲ ಕಳೆಯುವಂತಾಗಿದೆ. ಅವರಿಗೆ ಯಾವಾಗ ಬೇಲ್ ಸಿಗುತ್ತೆ, ಯಾವಾಗ ರಿಲೀಸ್ ಆಗುತ್ತೆ? ಬಿಡುಗಡೆ ಆಗುತ್ತಾ ಇಲ್ಲವಾ? ಎಷ್ಟು ವರ್ಷ ಅಥವಾ ಕಾಲ ಜೈಲಿನಲ್ಲಿ ಇರಬೇಕಾಗುತ್ತೆ? ಜೀವಾವಧಿ ಶಿಕ್ಷೆ ಆಗುತ್ತಾ? ಯಾವುದೂ ಸರಿಯಾಗಿ ಗೊತ್ತಿಲ್ಲ. ಈ ಕಾರಣಕ್ಕೆ ಅದನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿ, ಕಾಳಿಕಾಮಾತೆ ಉಪಾಸಕರು ಚಂದಾ ಪಾಂಡೆ ಅಮ್ಮಾಜಿ ಬಳಿ ಪ್ರಶ್ನೆ ಕೇಳಿದಾಗ ಅವರು ಈ ಉತ್ತರ ಕೊಟ್ಟಿದ್ದಾರೆ. 
 

click me!