'ನನ್ನ 2ನೇ ಹೆಂಡ್ತಿ ಮುಸ್ಲಿಂ ಹುಡುಗನನ್ನು ಮದುವೆಯಾದ್ಳು, ಮೊದಲ ಪತ್ನಿ ಜೊತೆಗೆ ಖುಷಿಯಿಂದಿದ್ದೇನೆ': ಆದಿ ಲೋಕೇಶ್

Published : Jul 15, 2025, 05:41 PM IST
adi lokesh

ಸಾರಾಂಶ

ʼಪೂಜಾರಿʼ, ʼಜೋಗಿʼ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಆದಿ ಲೋಕೇಶ್‌ ಅವರು ಎರಡು ಮದುವೆಯಾಗಿದ್ದಾರೆ. ಈ ಮದುವೆ ಬಗ್ಗೆ ಅವರು ಹೇಳಿದ್ದೇನು?

ನಟ ಆದಿ ಲೋಕೇಶ್‌ ಅವರ ಖಾಸಗಿ ಜೀವನ ಆಗಾಗ ವಿವಾದದ ಕೇಂದ್ರಬಿಂದುವಾದರೂ ಕೂಡ ಅನೇಕರಿಗೆ ಎರಡು ಮದುವೆ ಬಗ್ಗೆ ಗೊತ್ತಿಲ್ಲ.

ಎರಡು ಮದುವೆ, ಡಿವೋರ್ಸ್‌ ಬಗ್ಗೆ ಆದಿ ಲೋಕೇಶ್‌ ಅವರು ಚಿತ್ರಲೋಕ.ಕಾಮ್‌ ಯುಟ್ಯೂಬ್‌ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ.

‌ಸೌಮ್ಯಾ ಜೊತೆ ಯಾಕೆ ಮನಸ್ತಾಪ ಆಯ್ತು? 

“ಮೊದಲೇ ನಾನು ಸೌಮ್ಯಾಳನ್ನು ಮದುವೆಯಾಗಿದ್ದೆ. ಆಮೇಲೆ ಮಾಡೆಲ್‌ ಅರುಣಾ ಅವರನ್ನು ಭೇಟಿಯಾಗಿದ್ದೆ. 2004ರಲ್ಲಿ ನನ್ನ ಮಗ ಹುಟ್ಟಿದ್ದನು. ಕೆಲಸದಲ್ಲಿ ಬ್ಯುಸಿಯಾಗಿದ್ದ ನಾನು ಮೈಸೂರು ಕಡೆಗೆ ಬರಲಿಲ್ಲ. ಮನೆಗೆ ಬಾ ಅಂತ ನಾನೇ ಸೌಮ್ಯಾಗೆ ಹೇಳಿದ್ದರೂ ಅವಳು ಕೂಡ ಒಪ್ಪಿರಲಿಲ್ಲ" ಎಂದಿದ್ದಾರೆ ಆದಿ ಲೋಕೇಶ್.

“ಮಗು ಹುಟ್ಟಿದಾಗಲೂ ಕೂಡ ನಾನು ಮರುದಿನವೇ ಬಂದು ನೋಡಿದೆ, ಆಮೇಲೆ ಮತ್ತೆ ಕೆಲಸದಲ್ಲಿ ಬ್ಯುಸಿಯಾದೆ. ಹೀಗಾಗಿ ಸೌಮ್ಯಾಗೆ ಸಿಟ್ಟು ಬಂದಿತ್ತು. ನನ್ನ ತಂದೆ ಕಾಲು ಹಿಡಿದುಕೊಳ್ಳಿ, ಆಮೇಲೆ ಮನೆಗೆ ಬರ್ತೀನಿ ಅಂತ ಸೌಮ್ಯಾ ಹೇಳಿದಳು. ಆಗ ನನ್ನದು ಬಿಸಿ ರಕ್ತ. ನನಗೆ ಅಹಂಕಾರ ಅಡ್ಡಿ ಬಂದಿದ್ದಕ್ಕೆ ನಾನು ಕ್ಷಮೆ ಕೇಳಲಿಲ್ಲ. ಈಗ ಅದನ್ನೆಲ್ಲ ನೋಡಿದರೆ ಎಂಥ ಮೂರ್ಖ ಅಂತ ಅನಿಸುವುದು” ಎಂದಿದ್ದಾರೆ ಆದಿ ಲೋಕೇಶ್.

ಎರಡನೇ ಮದುವೆಯಾದೆ! 

“ಅರುಣಾ ಹಾಗೂ ನಾನು ಐದರಿಂದ- ಆರು ಬಾರಿ ಭೇಟಿಯಾಗಿದ್ದೆ. ಸೌಮ್ಯಾ ಮೇಲಿನ ಸಿಟ್ಟು, ಅಹಂಕಾರಕ್ಕೆ ನಾನು ಪ್ರೀತಿಯಿಲ್ಲದಿದ್ದರೂ ಕೂಡ ಅರುಣಾರನ್ನು ಮದುವೆಯಾದೆ. ಮಿಸ್‌ ಬೆಂಗಳೂರು ಆಗಿದ್ದ ಅರುಣಾರನ್ನು ಬೆಂಗಳೂರಿನ ದೇವಸ್ಥಾನದಲ್ಲಿ ಮದುವೆಯಾದೆ. ಅರುಣಾ ಮನೆಯವರು ಕೂಡ ಇದನ್ನು ವಿರೋಧಿಸಿದರು. ನನ್ನ ಮೊದಲ ಹೆಂಡ್ತಿ ನನ್ನ ಬಳಿ ಮದುವೆ ಆಯ್ತಾ ಅಂತ ಕೇಳಿದಾಗ ನಾನು ಹೌದು ಅಂದೆ. ಆಮೇಲೆ ಸೌಮ್ಯಾ ಚೆನ್ನಾಗಿರಿ ಅಂತ ಹೇಳಿದ್ದಳು. ಈ ವಿಷಯವೆಲ್ಲವೂ ಪೇಪರ್‌ನಲ್ಲಿ ಬಂತು. ಆಮೇಲೆ ಸೌಮ್ಯಾಗೆ ಡಿವೋರ್ಸ್‌ ಕೊಡಲು ರೆಡಿಯಾದೆ” ಎಂದಿದ್ದಾರೆ ಆದಿ ಲೋಕೇಶ್.

ನನ್ನ ಜೊತೆಗಿದ್ದವರೆಲ್ಲರೂ ಪಾರ್ಟಿ ಮಾಡುವವರಾಗಿದ್ದರು. ನಾನು ಅಷ್ಟು ಹಣವನ್ನು ಪಾರ್ಟಿಗೆ ಹಾಕಿದ್ದೆ. 2008ರಲ್ಲಿ ನನಗೂ, ಅರುಣಾಗೂ ಮನಸ್ತಾಪ ಬಂದು, ನಾವಿಬ್ಬರೂ ದೂರ ಆದೆವು. ಆಮೇಲೆ ಅರುಣಾ ವರದಕ್ಷಿಣೆ ಕೇಸ್‌ ಹಾಕಿದರು. ನಾನು ಅರುಣಾಗೆ ಒಂದು ರೂಪಾಯಿ ಕೂಡ ಕೊಡಲಿಲ್ಲ.

ಸೌಮ್ಯಾ ತಂದೆ ತೀರಿಹೋಗಿದ್ದರು. ಆಮೇಲೆ ನಾನು ಅವಳ ಬಳಿ ಬಂದು ಕ್ಷಮೆ ಕೇಳಿದ್ದೆ. ಅಂದು ನೀನು ನನ್ನ ಜೊತೆಗೆ ಬಂದಿದ್ರೆ ಏನೂ ಸಮಸ್ಯೆಯೇ ಬರುತ್ತಿರಲಿಲ್ಲ. ಅರುಣಾ ಮತ್ತೆ ಮುಸ್ಲಿಂ ಹುಡುಗನನ್ನು ಮದುವೆಯಾಗಿ ಚೆನ್ನಾಗಿರಬಹುದು. ಕಾರ್ಯಕ್ರಮಗಳಲ್ಲಿ ಭೇಟಿಯಾದರೂ ಕೂಡ ನನಗೂ, ಅರುಣಾಗೂ ಯಾವುದೇ ಮಾತುಕತೆಯಿಲ್ಲ.

ಮದುವೆಯಾದ ನನ್ನ ತಂದೆ ಈಗಾಗಲೇ ಮದುವೆಯಾಗಿರೋ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಇದನ್ನು ನಾವು ರೆಡ್‌ ಹ್ಯಾಂಡೆಡ್‌ ಆಗಿ ಕಂಡುಹಿಡಿದಿದ್ದೆವು. ನಾನು ಕಾನೂನಿನ ಮೂಲಕವೇ ಮದುವೆಯಾದೆ, ಡಿವೋರ್ಸ್‌ ತಗೊಂಡೆ. ಇದನ್ನು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ. ಸಿಂಗಲ್‌ ಆಗಿದ್ದ ಅರುಣಾರನ್ನು ನಾನು ಮದುವೆಯಾಗಿದ್ದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ