
ಚೀನಿಯರು ಸೃಷ್ಟಿಸಿದ ಕೊರೋನಾ ವೈರಸ್‌ನಿಂದ ಜನರ ಜೀವನದಲ್ಲಿ ಬದಲಾವಣೆಗಳಾಗಿ, ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಕೋಟಿ ಕೋಟಿಯಲ್ಲಿ ವ್ಯವಹಾರ ಮಾಡುತ್ತಿದ್ದ ಚಿತ್ರಮಂದಿರಗಳೂ ಸೋಂಕಿಗೆ ಹೆದರಿ ಬಾಗಿಲು ಹಾಕಿದ್ದವು. ಈಗ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಚಿತ್ರಮಂದಿರಗಳು ಅಕ್ಟೊಬರ್ 15ರಿಂದ ಪ್ರದರ್ಶನಕ್ಕೆ ಸಿದ್ಧವಾಗಬೇಕು.
79 ವರ್ಷ ಹಳೆ 'ಸೆಂಟ್ರಲ್ ಟಾಕೀಸ್' ನೆಲಸಮ!
ಯಾವ ಸಿನಿಮಾ ರೆಡಿ ಆಗಿದೆ?
ಚಿತ್ರಮಂದಿರಗಳು ಓಪನ್ ಆಗುತ್ತಿವೆ ನಿಜ ಆದರೆ ಯಾವ ಸಿನಿಮಾ ಮೊದಲು ರಿಲೀಸ್ ಆಗುತ್ತದೆ, ಯಾವೆಲ್ಲಾ ವೇಟಿಂಗ್ ಲಿಸ್ಟ್‌ನಲ್ಲಿದೆ ಎಂದು ಕಾದು ನೋಡಬೇಕಿದೆ. ಆದರೆ ಸ್ಯಾಂಡಲ್‌ವುಡ್ ಸ್ಟಾರ್ ನಟರ ಎಲ್ಲಾ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದು, ಅಭಿಮಾನಿಗಳು ದೊಡ್ಡ ಪರದೆ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ದರ್ಶನ್ 'ರಾಬರ್ಟ್', ಸುದೀಪ್ 'ಕೋಟಿಗೊಬ್ಬ 3' , ಶಿವರಾಜ್‌ಕುಮಾರ್ 'ಭಜರಂಗಿ -2' , ಪುನೀತ್ ರಾಜ್‌ಕುಮಾರ್ 'ಯುವರತ್ನ', ದುನಿಯ ವಿಜಯ್ 'ಸಲಗ' ಹಾಗೂ ಧ್ರುವ ಸರ್ಜಾ 'ಪೊಗರು' ಸಿನಿಮಾ ಸೇರಿ ಬಹುನಿರೀಕ್ಷಿತ ಅನೇಕ ಸಿನಿಮಾಗಳು ಲಿಸ್ಟ್‌ನಲ್ಲಿದೆ.
ಅಕ್ಟೋಬರ್ 19ರಂದು ಚಿರಂಜೀವಿ ಸರ್ಜಾ ಹುಟ್ಟು ಹಬ್ಬವಿರುವ ಕಾರಣ 'ಶಿವಾರ್ಜುನ' ಸಿನಿಮಾವನ್ನು ಮೊದಲು ರೀ ರಿಲೀಸ್ ಮಾಡಲಾಗುತ್ತದೆ ಎಂದು ಕೆಲವು ಮೂಲಗಳು ತಿಳಿಸಿವೆ. ಅದರಲ್ಲೂ ಮಾರ್ಚ್ ಮೊದಲ ವಾರದಲ್ಲಿ ರಿಲೀಸ್ ಆದ ಸಿನಿಮಾಗಳು ಎರಡನೇ ವಾರಕ್ಕೆ ಬಂದ್ ಆದ ಕಾರಣ ಅವುಗಳಿಗೆ ಹೆಚ್ಚಿನ ಪ್ರಮುಖ್ಯತೆ ನೀಡಲಾಗುತ್ತಿದೆ. ಹೀಗಾಗಿ ಶಿವಾರ್ಜುನ್ ಹಾಗೂ ನರಗುಂದ ಬಂಡಾಯ ಮೊದಲು ರಿಲೀಸ್ ಆಗುತ್ತವೆ ಎನ್ನಲಾಗಿದೆ. ಚಿತ್ರಮಂದಿರ ಓಪನ್ ಮಾಡಿರುವ ವಿಚಾರ ತಿಳಿದು ರಾಬರ್ಟ್ ಹಾಗೂ ಕೋಟಿಗೊಬ್ಬ 3 ಚಿತ್ರತಂಡ ಸೆನ್ಸಾರ್‌ಗೆ ಅಪ್ಲೈ ಮಾಡುತ್ತಿವೆ. ರಮೇಶ್ ಅರವಿಂದ್ ಅವರ '100' ಸಿನಿಮಾ ಸೆನ್ಸಾರ್ ಕೂಡ ಆಗಿದ್ದು U/A ಸರ್ಟಿಫಿಕೇಟ್ ಪಡೆದುಕೊಂಡಿದೆ.
"
ಚಿತ್ರಮಂದಿರಗಳ ಸ್ಥಿತಿ ಹೇಗಿವೆ?
ಸರಿ ಸುಮಾರು 6 ತಿಂಗಳ ಕಾಲ ಚಿತ್ರಮಂದಿರಗಳು ಮುಚ್ಚಿರುವ ಕಾರಣ ಧೂಳಿನಿಂದ ರಸ್ಟ್ ಹಿಡಿದಿರೋ ಸೀಟ್‌ಗಳನ್ನು ಶುಚಿಗೊಳಿಸಬೇಕಿದೆ. ಚಿತ್ರ ಪ್ರದರ್ಶನಕ್ಕೆ ಅನುಮತಿ ಸಿಕ್ಕರೂ ಮಾಲೀಕರು ಮಾತ್ರ ಸ್ವಚ್ಛತಾ ಕಾರ್ಯಕ್ಕೆ ಇನ್ನೂ ಮನಸ್ಸು ಮಾಡಿದಂತೆ ಕಾಣುತ್ತಿಲ್ಲ. ಗಾಂಧಿ ನಗರದಲ್ಲಿರೋ ಸಂತೋಷ್, ನರ್ತಕಿ ಚಿತ್ರಮಂದಿರಗಳ ಗಬ್ಬೆದ್ದಿವೆ. ಇದೇ ತರದ ಪರಿಸ್ಥಿತಿ ಹಲವು ಚಿತ್ರಮಂದಿರಗಳಲ್ಲಿ ನಿರ್ಮಾಣವಾಗಿದ್ದು ಸ್ಕ್ರೀನ್‌ಗಳೂ ಹಾಳಾಗಿವೆ, ಎನ್ನಲಾಗುತ್ತಿದೆ.
ಏನೇ ಇರಲಿ, ಎಷ್ಟೇ ಕಷ್ಟ ಬರಲಿ ಸಿನಿ ರಸಿಕರು ಮಾತ್ರ ತಮ್ಮ ನೆಚ್ಚಿನ ನಟ, ನಟಿಯ ಚಿತ್ರವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.