ಹಿರಿಯ ಗಾಯಕ ಚಂದ್ರಶೇಖರ ಕೆದಿಲಾಯ ಇನ್ನಿಲ್ಲ

By Shruthi KrishnaFirst Published Jan 24, 2023, 2:49 PM IST
Highlights

ಸುಗಮ ಸಂಗೀತದ ಮೇರು ಗಾಯಕ, ಖ್ಯಾತ ಗಮಕ ಕಲಾವಿದ, ನಿವೃತ್ತಾ ಅಧ್ಯಾಪಕ ಚಂದ್ರಶೇಖರ್ ಕೆದಿಲಾಯ ಇಂದು (ಜನವರಿ 24) ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 

ಸುಗಮ ಸಂಗೀತದ ಮೇರು ಗಾಯಕ, ಖ್ಯಾತ ಗಮಕ ಕಲಾವಿದ, ನಿವೃತ್ತಾ ಅಧ್ಯಾಪಕ ಚಂದ್ರಶೇಖರ್ ಕೆದಿಲಾಯ ಇಂದು (ಜನವರಿ 24) ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 73 ವರ್ಷದ  ಚಂದ್ರಶೇಖರ ಕೆದಿಲಾಯ ಬ್ರಹ್ಮಾವರದ ಕಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರುವುದಾಗಿ ಕುಟುಂಬ ಮೂಲಗಳು ಮಾಹಿತಿ ನೀಡಿವೆ. ಮೃತರು ಪತ್ನಿ, ಇಬ್ಬರೂ ಪುತ್ರಿಯರು ಸೇರಿದಂತೆ ಬಂಧು ಬಳಗವನ್ನು ಆಗಲಿದ್ದಾರೆ. 

ಎಚ್. ಚಂದ್ರಶೇಖರ್ ಕೆದಿಲಾಯ 1950ರ ಏಪ್ರಿಲ್ 23ರಂದು ಉಡುಪಿ ಜಿಲ್ಲೆಯ ಹೆಸ್ಕುತ್ತೂರು ಗ್ರಾಮದ ಹಾರ್ಯಾಡಿಯಲ್ಲಿ ಜನಿಸಿದರು. ತಂದೆ ಗಣಪಯ್ಯ ಕೆದಿಲಾಯ ಮತ್ತು ತಾಯಿ ಕಮಲಮ್ಮ. ಎಚ್. ಚಂದ್ರಶೇಖರ್ ಕೆದಿಲಾಯ ಅವರು ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆಯಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲ ಕನ್ನಡ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಜೊತೆಗೆ ಚಂದ್ರಶೇಖರ್ ಕೆದಿಲಾಯ ಆಕಾಶವಾಣಿಯಲ್ಲೂ ಕೆಲಸ ಮಾಡಿದ್ದಾರೆ. ಆಕಾಶವಾಣಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. 

Attaullah Khan: ಗೆಳತಿ ಕೊಂದು ಜೈಲಲ್ಲಿ ಬರೆದ ಹಾಡುಗಳು ಸೂಪರ್​ ಡೂಪರ್​: ಬಾಲಿವುಡ್​ ಗಾಯಕನ ರೋಚಕ ಕಥೆ!

 ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ (1992-93), ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ (2008) ಕೂಡ ಲಭಿಸಿತ್ತು. ಚಂದ್ರಶೇಖರ್ ನಿಧನಕ್ಕೆ ಅನೇಕರು ಸಂಪಾತ ಸೂಚಿಸುತ್ತಿದ್ದಾರೆ. ಅಭಿಮಾನಿಗಳು ಮತ್ತು ಗಣ್ಯರು ಸಂತಾಪ ಸೂಚಿಸಿ ಪೋಸ್ಟ್ ಮಾಡುತ್ತಿದ್ದಾರೆ. 

click me!